ದೇಶವನ್ನು ಸ್ವತ್ಛಗೊಳಿಸುವ ಗಾಂಧಿ ಕನಸು ನನಸಾಗಿಸಿ
Team Udayavani, Sep 16, 2018, 9:32 AM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸ್ವತ್ಛತಾ ಹೀ ಸೇವಾ (ಸ್ವತ್ಛತೆಯೇ ಸೇವೆ) ಅಭಿಯಾನವನ್ನು ಶನಿವಾರ ಹೊಸದಿಲ್ಲಿಯಲ್ಲಿ ಆರಂಭಿಸಿದ್ದು, ಶಾಲೆಯೊಂದರ ಮೈದಾನವನ್ನು ಪೊರಕೆ ಹಿಡಿದು ಸ್ವತ್ಛಗೊಳಿಸಿದ್ದಾರೆ. ಅಷ್ಟೇ ಅಲ್ಲ, ದೇಶದ ವಿವಿಧ ಕ್ಷೇತ್ರದ ಗಣ್ಯರೊಂದಿಗೆ ಸುಮಾರು ಎರಡು ಗಂಟೆಗಳವರೆಗೆ ವಿಡಿಯೋ ಸಂವಾದ ನಡೆಸಿದ್ದಾರೆ.
ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಉದ್ಯಮಿ ರತನ್ ಟಾಟಾ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ, ಸದ್ಗುರು ಜಗ್ಗಿ ವಾಸುದೇವ, ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಹಾಗೂ ಮಾತಾ ಅಮೃತಾನಂದಮಯಿ ಸೇರಿದಂತೆ ಹಲವರೊಂದಿಗೆ ಅವರು ಸ್ವತ್ಛತೆಯ ಕುರಿತು ಸಂವಾದ ನಡೆಸಿದರು. 2015 ಅಕ್ಟೋಬರ್ 2ರಂದು ಸ್ವತ್ಛ ಭಾರತ ಯೋಜನೆ ಆರಂಭಿಸಿದ ನಂತರ ನೈರ್ಮಲ್ಯದ ಕವರೇಜ್ ಶೇ. 40ರಿಂದ ಶೇ. 90ಕ್ಕೆ ಏರಿಕೆಯಾಗಿದೆ. ನಾಲ್ಕು ವರ್ಷಗಳಲ್ಲಿ ಒಂಬತ್ತು ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, 4.5 ಲಕ್ಷ ಗ್ರಾಮಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದೆ ಎಂದು ಮೋದಿ ಇದೇ ವೇಳೆ ಮಾಹಿತಿ ನೀಡಿದ್ದಾರೆ.
ವೀಡಿಯೋ ಸಂವಾದದಲ್ಲಿ ಕರ್ನಾಟಕ, ಕೇರಳ, ಅಸ್ಸಾಂ, ತಮಿಳುನಾಡು, ರಾಜಸ್ಥಾನ ಹಾಗೂ ಹರಿಯಾಣದ ಜನರೊಂದಿಗೆ ಮಾತನಾಡಿದರು. ಅಷ್ಟೇ ಅಲ್ಲ, ಲೇಹ್‌ನಲ್ಲಿ ಪಾಂಗಾಂಗ್ ಕೆರೆ ಸ್ವತ್ಛಗೊಳಿಸುವಲ್ಲಿ ತೊಡಗಿಸಿ ಕೊಂಡ ಐಟಿಬಿಪಿ ಪಡೆಯ ಸಿಬಂದಿಯೊಂದಿಗೂ ಮಾತನಾಡಿದರು. ಸ್ವತ್ಛತೆಗಾಗಿ ಶ್ರಮಿಸಿದವರನ್ನು ಸ್ವಾತಂತ್ರ್ಯ ಯೋಧರ ರೀತಿ ಮುಂದಿನ ದಿನಗಳಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಲಾಗುತ್ತದೆ. ಅವರೇ ನಿಜವಾದ ಗಾಂಧಿ ತತ್ವದ ಅನುಯಾಯಿಗಳು ಎಂದು ಮೋದಿ ಹೇಳಿದ್ದಾರೆ.
ಪೊರಕೆ ಹಿಡಿದ ನಾಯಕರು: ರವಿಶಂಕರ್ ಪ್ರಸಾದ್, ಮುಖಾ¤ರ್ ಅಬ್ಟಾಸ್ ನಖೀ, ಕಿರಣ್ ರಿಜಿಜು ಸೇರಿದಂತೆ ಕೇಂದ್ರ ಸಚಿವರು, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು, ಕಾರ್ಯಕರ್ತರು ದೇಶಾದ್ಯಂತ ಶನಿವಾರ ಸ್ವತ್ಛತಾ ಕಾರ್ಯ ಕೈಗೊಂಡರು. ಸ್ವತ್ಛ ಭಾರತವು ಈಗ ಜನರ ಚಳವಳಿಯಾಗಿ ಮಾರ್ಪಾಡಾಗಿದೆ ಎಂದು ಸಚಿವರು ಇದೇ ವೇಳೆ ಅಭಿಪ್ರಾಯಪಟ್ಟರು.
ಟ್ರಾಫಿಕ್‌ನಲ್ಲೇ ತೆರಳಿದ ಪ್ರಧಾನಿ ಮೋದಿ ಬೆಂಗಾವಲು ಪಡೆ
ವಿಡಿಯೋ ಸಂವಾದದ ಅನಂತರ ಪ್ರಧಾನಿ ನರೇಂದ್ರ ಮೋದಿ ಪಹರ್‌ಗಂಜ್ ಶಾಲೆಗೆ ತೆರಳುವ ದಾರಿಯಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ಸಾಮಾನ್ಯ ಟ್ರಾಫಿಕ್‌ನಲ್ಲೇ ಮೋದಿ ಹಾಗೂ ಬೆಂಗಾವಲು ಪಡೆ ಚಲಿಸಿತು. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಬೆಂಗಾವಲು ಪಡೆಗಳು ನಿಂತಿರುವ ಫೋಟೋಗಳನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.
ಮಹಾತ್ಮಾ ಗಾಂಧಿ ತತ್ವವನ್ನು ಅನುಸರಿಸುವ ಮೂಲಕ ನೈರ್ಮಲ್ಯ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಹಾಗೂ ದೇಶವನ್ನು ಸ್ವತ್ಛವಾಗಿರಿಸುವಲ್ಲಿ ಶ್ರಮಿಸುತ್ತಿರುವವರಿಗೆ ಮೋದಿ ಗೌರವ ಸಲ್ಲಿಸಿದ್ದಾರೆ. ಸ್ವತ್ಛ ಭಾರತ ಯೋಜನೆ ಆರಂಭಿಸಿದ ಮೋದಿ 10 ಕೋಟಿ ಜನರನ್ನು ತಲುಪಿದ್ದಾರೆ.
ಪಿಯೂಶ್ ಗೋಯೆಲ್, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.