ವಿಷ್ಣು ವಾಚು ಶಿವಣ್ಣ ಕೈಯಲ್ಲಿ
Team Udayavani, Sep 16, 2018, 11:18 AM IST
“ಗ್ರಾಮಾಯಣ’ ಚಿತ್ರದ ಟೀಸರ್ ಬಿಡುಗಡೆಯ ಸಂದರ್ಭದಲ್ಲಿ ತಮ್ಮ ಬಾಲ್ಯದ ದಿನಗಳ ಬಗ್ಗೆ ಮೆಲುಕು ಹಾಕಿದ್ದ ಶಿವರಾಜಕುಮಾರ್, “ಹೃದಯ ಗೀತೆ’ ಕಾರ್ಯಕ್ರಮದಲ್ಲಿ ಡಾ. ವಿಷ್ಣುವರ್ಧನ್ ಮತ್ತು ತಮ್ಮ ನಡುವಿನ ಅವಿನಾಭಾವ ಸಂಬಂಧವನ್ನು ನೆನಪಿಸಿಕೊಂಡರು. ಅಷ್ಟೇ ಅಲ್ಲ, ವಿಷ್ಣುವರ್ಧನ್ ಅವರು ಹಿಂದೊಮ್ಮೆ ತಮಗೆ ಕೊಟ್ಟ ವಾಚಿನ ಬಗ್ಗೆ ಹೇಳಿದರು.
“ನನಗೆ ವಿಷ್ಣುವರ್ಧನ್ ಅವರ ಚಿತ್ರಗಳು ಬಹಳ ಇಷ್ಟ. 12ನೇ ವಯಸ್ಸಿನಲ್ಲಿದ್ದಾಗ “ನಾಗರಹಾವು’ ಚಿತ್ರವನ್ನು ಸಫೈರ್ ಟಾಕೀಸ್‌ನಲ್ಲಿ ನೋಡಿದ್ದೆ. ಅವರ ಜೊತೆಗೆ ನನಗೆ ಹಲವು ಮಧುರವಾದ ನೆನಪುಗಳು ಇವೆ. ಅದನ್ನು ಹಂಚಿಕೊಳ್ಳುವುದಕ್ಕೆ ನನಗೆ ಇಷ್ಟ ಇಲ್ಲ. ಏಕೆಂದರೆ, ಅವೆಲ್ಲಾ ರಹಸ್ಯವಾಗಿಯೇ ಇರಬೇಕು ಎಂಬುದು ನನ್ನ ಆಸೆ. “ಆನಂದ್’ ಚಿತ್ರದ ನಂತರ ಅವರು ನನಗೊಂದು ವಾಚ್ ಕೊಟ್ಟಿದ್ದರು.
ಆ ವಾಚನ್ನು ಅವರಿಗೆ ಎಂ.ಜಿ. ರಾಮಚಂದ್ರನ್ ಅವರು ಕೊಟ್ಟಿದ್ದರಂತೆ. ಅಂತಹ ಅಪರೂಪದ ವಾಚ್ ನನಗೆ ಕೊಟ್ಟಿದ್ದರು. ಅದನ್ನು ಇನ್ನೂ ಜೋಪಾನವಾಗಿಟ್ಟಿದ್ದೇನೆ’ ಎಂದು ಶಿವರಾಜಕುಮಾರ್ ಹೇಳಿಕೊಂಡರು. ಆ ನಂತರ ಶಿವರಾಜಕುಮಾರ್, ಡಾ. ವಿಷ್ಣುವರ್ಧನ್ ಅವರ ಜನಪ್ರಿಯ ಹಾಡುಗಳಾದ “ನೂರೊಂದು ನೆನಪು …’ ಮತ್ತು “ಮಾಮರವೆಲ್ಲೋ ಕೋಗಿಲೆಯಲ್ಲೋ …’ ಹಾಡುಗಳನ್ನು ಹಾಡಿ ರಂಜಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.