‘ತುಳು ಭಾಷೆಯೇ ಸಂಸ್ಕೃತಿ, ಸಂಸ್ಕೃತಿಯೇ ಭಾಷೆ’
Team Udayavani, Sep 16, 2018, 11:27 AM IST
ಮಹಾನಗರ: ಜಾತಿ, ಧರ್ಮ ಎಲ್ಲವನ್ನೂ ಮೀರಿಸಿ ಎಲ್ಲರನ್ನು ಒಗ್ಗೂಡಿಸುವ ಕಾರ್ಯ ತುಳು ಭಾಷೆಯದ್ದಾಗಿದೆ. ತುಳು ಭಾಷೆಯನ್ನು ಬಳಸುವುದರ ಮೂಲಕ ಭಾಷೆಯ ಬೆಳವಣಿಗೆ ಸಾಧ್ಯ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಲ್ಮಠ ಮಂಗಳೂರು ಇದರ ವತಿಯಿಂದ ನಡೆದ ‘ತುಳು ಕಥೆ- ಕಬಿತೆ ಬರವು- ಸರವು: ಒಂಜಿ ದಿನೊತ ಕಜ್ಜಕೊಟ್ಯ’ ಅಂತರ್ ಕಾಲೇಜು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ತುಳು ಭಾಷೆಯನ್ನು ಮನೆಯಲ್ಲಿ ಚೆನ್ನಾಗಿ ಮಾತನಾಡುವ ಮೂಲಕ ಅದರ ಉಳಿವಿಗಾಗಿ ಪ್ರಯತ್ನಿಸಬೇಕು. ನಮಗೆ ಎಲ್ಲಾ ಭಾಷೆಗಳು ಬೇಕು. ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ಮರೆಯಬಾರದು ಎಂದರು.
ಭಾಷಾ ಪ್ರೇಮ ಬೆಳೆಸಿ
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ| ಜಗದೀಶ ಬಾಳ ಮಾತನಾಡಿ, ತುಳು ಭಾಷೆಯನ್ನು ಶೈಕ್ಷಣಿಕವಾಗಿ ಮಾತನಾಡುವ ವಾತಾವರಣ ಸೃಷ್ಟಿಯಾಗಬೇಕು. ಪರವೂರಿನಲ್ಲಿ ತುಳು ಮಾತನಾಡವವರು ಸಿಗುವಾಗ ತುಳುವಿನ ಮಹತ್ವ ನಮಗೆ ಅರಿವಾಗುತ್ತದೆ ಎಂದರು.
ಅಂತರ್ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ತುಳು ಕತೆ ಮತ್ತು ಕವಿತೆ ಬರೆಯುವ ಕಾರ್ಯಾಗಾರವನ್ನು ಪತ್ರಕರ್ತ ಪ್ರವೀಣ್ ಅಮ್ಮೆಂಬಳ ಮತ್ತು ಎಸ್.ವಿ.ಎಸ್. ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಚೇತನ್ ಮುಂಡಾಜೆ ‘ತುಳು ಕಥೆ-ಕಬಿತೆ ಬರವು-ಸರವು: ಒಂಜಿ ದಿನೊತ ಕಜ್ಜಕೊಟ್ಯ’ದ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರ ನಡೆಸಿಕೊಟ್ಟರು. ತುಳು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಸದಸ್ಯ ಬೆನೆಟ್ ಅಮನ್ನ ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಜ್ಯೋತಿಪ್ರಿಯ ಸ್ವಾಗತಿಸಿದರು. ಡಾ| ವಿಶ್ವನಾಥ ಬದಿಕಾನ ವಂದಿಸಿದರು. ನಿಶ್ಮಿತ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ
Bengaluru: ಕೆರೆ ಒತ್ತುವರಿ ಮಾಡಿದ್ದ ಮೂವರಿಗೆ 1ವರ್ಷ ಜೈಲು
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.