ವೃತ್ತಿ ಪಾವಿತ್ರ್ಯಾ ಕಾಯ್ದುಕೊಳ್ಳಿ
Team Udayavani, Sep 16, 2018, 12:23 PM IST
ಹುಮನಾಬಾದ: ವೃತ್ತಿ ಪಾವಿತ್ರ್ಯಾ ಕಾಯ್ದುಕೊಂಡರೆ ವಿಶ್ವೇಶ್ವರಯ್ಯ ಜಯಂತಿ ಆಚರಣೆ ಸಾರ್ಥಕವಾಗುದೆ. ಈ ನಿಟ್ಟಿನಲ್ಲಿ ಎಲ್ಲ ಇಂಜಿನಿಯರ್‌ಗಳು ಸರ್ಕಾರಿ ಕಾಮಗಾರಿ ಕೈಗೊಳ್ಳುವಾಗ ಕಳಪೆಗೆ ಅವಕಾಶ ಇಲ್ಲದಂತೆ ಎಚ್ಚರ ವಹಿಸಬೇಕು ಎಂದು ಹಿರಿಯ ಸಾಹಿತಿ ಎಚ್.ಕಾಶಿನಾಥರೆಡ್ಡಿ ಸಲಹೆ ನೀಡಿದರು.
ಪಟ್ಟಣದಲ್ಲಿ ಇಂಜಿನಿಯರ್ ಅಸೋಯೇಶನ್ ವತಿಯಿಂದ ಶನಿವಾರ ನಡೆದ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ತವ್ಯದಲ್ಲಿ ಪ್ರತಿಯೊಬ್ಬರೂ ಸರ್.ಎಂ. ವಿಶ್ವೇಶ್ವರಯ್ಯ ಅವರಷ್ಟು ಪ್ರಾಮಾಣಿಕತೆ ಮೆರೆಯಲು ಆಗದಿದ್ದರೂ ಚಿಂತೆಯಿಲ್ಲ ಶೇ.50ರಷ್ಟು ಕೆಲಸಗಳಲ್ಲಿ ನಿಷ್ಠೆ ಕಾಯ್ದುಕೊಂಡು ರಾಷ್ಟ್ರಪ್ರೇಮ ಮೆರೆಯಬೇಕು ಎಂದರು.
ಲೋಕೋಪಯೋಗಿ ಇಲಾಖೆ ಹುಮನಾಬಾದ ಉಪವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಮಚೇಂದ್ರ ಖಂಡಗೊಂಡ ಮಾತನಾಡಿ, ಹುಮನಾಬಾದ್ ಇಂಜಿನಿಯರ್ ಅಸೋಷಿಯೇಶನ್ 18ವರ್ಷಗಳಿಂದ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಇಜಿನಿಯರ್ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ.
ಕಟ್ಟಡ ನಿರ್ಮಾಣದ ವಿವಿಧ ವಿಭಾಗಗಳ ಪ್ರಾಮಾಣಿಕ ತ್ತಿಗೆದಾರರು, ಕಾರ್ಮಿಕರನ್ನು ಸನ್ಮಾನಿಸಿ, ಪ್ರೋತ್ಸಾಹಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಇಂಜಿನಿಯರ್ ಅಸೋಯೇಶನ್ ಉಪಾಧ್ಯಕ್ಷ ಸುಭಾಶ ಗಂಗಾ ಮಾತನಾಡಿ, ದೇಶಗಳಿಗೆ ಹೋಲಿಸಿದರೇ ಇಂಜಿನಿಯರಿಂಗ್ ವಿಭಾಗದದಲ್ಲೀ ಈಗಲೂ ಸಾಕಷ್ಟು ಹಿಂದಿರುವುದನ್ನು ಕಾಣುತ್ತೇವೆ. ಒಂದೊಮ್ಮೆ ಇಂಜಿನಿಯರ್ ಪದವಿ ಪೂರೈಸಿದ ಮಾತ್ರಕ್ಕೆ ಪರಿಪೂರ್ಣರಾದೆವು ಎಂದು ಭಾವಿಸದೇ ನಿರಂತರವಾಗಿ ಹೊಸ ಅವಿಷ್ಕಾರ, ಅಧ್ಯಯನದಲ್ಲಿ ತೊಡಗಿಸಿಕೊಂಡು ಹೆಚ್ಚಿನದನ್ನು ಸಾಧಿಸಲು ಯತ್ನಿಸಬೇಕು ಎಂದರು.
ಸಂಘದ ಸಂಸ್ಥಾಪಕರೂ ಆದ ಸಂಘದ ಕಾರ್ಯದರ್ಶಿ ಶಿವಾನಂದ ಮಂಠಾಳಕರ್ ಪ್ರಾಸ್ತಾವಿಕ ಮಾತನಾಡಿ, ಜಯಂತಿ ಆಚರಣೆ ವಿಷಯದಲ್ಲಿ ನಾನು ಕೇವಲ ನೆಪ. ಉಳಿದೆಲ್ಲ ಇಂಜಿನಿಯರ್‌ಗಳು ನಿಸ್ವಾರ್ಥ ಸಹಕಾರ ನೀಡುತ್ತಿರುವುದರಿಂದ ಸಂಘ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಕಟ್ಟಡ ನಿರ್ಮಾಣ ವಿಭಾಗದಲ್ಲಿ ಇಂಜಿನಿಯರೊಬ್ಬರಿಂದಲೇ ಎಲ್ಲವೂ ಅಸಾಧ್ಯ. ಅತ್ಯಂತ ಚಿಕ್ಕ ಕಾರ್ಮಿಕರಿಂದ ದೊಡ್ಡ ಕಾರ್ಮಿಕರ ವರೆಗಿನ ಪ್ರತಿಯೊಬ್ಬರಿಗೂ ಅದರ ಶ್ರೇಯ ಹೋಗಬೇಕು. ಭವಿಷ್ಯದಲ್ಲಿ ಸಂಘವನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯಬೇಕಿದೆ ಎಂದರು.
ನಿರ್ದೇಶಕರಾದ ಶಾಂತವೀರ ನಾಟಿಕಾರ್, ಕೋಶಾಧ್ಯಕ್ಷ ವಿಜಯ ರುದ್ರನೋರ್, ನಿರ್ದೇಶಕರಾದ ರಾಜು ಎನ್. ಜಾಜಿ, ಸಂಜೀವಕುಮಾರ ಬಿ.ಘವಾಳ್ಕರ್, ಸೈಯದ್ ಅಬ್ದುಲ್ ಬಾರಿ, ರಾಘವೇಂದ್ರ ವಿಭೂತಿ, ಮಹ್ಮದ್ ಅಬ್ದುಲ್ ನದೀಮ್, ಮಹ್ಮದ್ ಅಬ್ದುಲ್ ಫಯೀಮ್, ವಿನಾಯಕ ರಘೋಜಿ, ತೌಫಿಕ್ ಅಹ್ಮದ್, ಪ್ರವೀಣಕುಮಾರ ಹರಸೂರ ಇದ್ದರು. ಸಹ ಕಾರ್ಯದರ್ಶಿ ಸೈಯದ್ ಖಾಜಾ ಸ್ವಾಗತಿಸಿದರು.
ವಿನೋದ ಭೀಮಶೆಟ್ಟಿ ನಿರೂಪಿಸಿದರು. ಕೋಶಾಧ್ಯಕ್ಷ ಗಣಪತಿ ಸಂಗಮ್ ವಂದಿಸಿದರು. ಇದೇ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ವಿಭಾಗದ ಗುತ್ತಿಗೆದಾರರು ಹಾಗೂ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.