ಸರಿತಾ ದೇವಿಗೆ ಕಂಚು
Team Udayavani, Sep 16, 2018, 12:29 PM IST
ಹೊಸದಿಲ್ಲಿ: ಸಿಲೇಸಿಯನ್ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಮಾಜಿ ವಿಶ್ವ ಚಾಂಪಿಯನ್ ಎಲ್. ಸರಿತಾ ದೇವಿ ಕಂಚಿನ ಪದಕ ಗೆದ್ದಿದ್ದಾರೆ.
ಪೋಲೆಂಡ್ನಲ್ಲಿ ನಡೆಯುತ್ತಿರುವ ವನಿತೆಯರ ಬಾಕ್ಸಿಂಗ್ನ 60 ಕೆ.ಜಿ. ವಿಭಾಗದ ಸೆಮಿಫೈನಲ್ನಲ್ಲಿ ಏಶ್ಯನ್ ಗೇಮ್ಸ್ನ ಕಂಚಿನ ಪದಕ ವಿಜೇತೆ ಸರಿತಾ ದೇವಿ ಕಜಕಿಸ್ಥಾನದ ಕರೀನಾ ಇಬ್ರಾಗಿವೋವಾ ವಿರುದ್ಧ 0-5 ಅಂಕಗಳಿ ದ ಸೋತು ಕಂಚಿನ ಪದಕಕ್ಕೆ ತೃಪ್ತಿ ಪಟ್ಟರು. ಶುಕ್ರವಾರ ನಡೆದ ಸೆಮಿಫೈನಲ್ನಲ್ಲಿ ಲವಿನಾ ಬೊರ್ಗೊಹೈನ್ (69 ಕೆ.ಜಿ.), ಪೂಜಾ ರಾಣಿ (81ಕೆ.ಜಿ.) ಸೋಲನುಭವಿಸಿದ್ದರು.
ಸೀನಿಯರ್ ಬಾಕ್ಸರ್ಗಳ ಪೈಕಿ ಮೇರಿ ಕೋಮ್ (48 ಕೆ.ಜಿ.) ಮತ್ತು ಮನೀಷಾ (54 ಕೆ.ಜಿ.) ಫೈನಲಿಗೇರಿದ್ದರೆ ಮಾಜಿ ಯೂತ್ ವಿಶ್ವ ಚಾಂಪಿಯನ್ ಜ್ಯೋತಿ ಗೂಲಿಯಾ (51 ಕೆ.ಜಿ.) ಯೂತ್ ವಿಭಾಗದಲ್ಲಿ ಫೈನಲಿಗೇರಿದ್ದಾರೆ.
ಈ ಕೂಟದಲ್ಲಿ ಕಿರಿಯ ಬಾಕ್ಸರ್ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. 6 ಚಿನ್ನ, 6 ಬೆಳ್ಳಿ, 1 ಕಂಚಿನ ಪದಕಗಳೊಂದಿಗೆ ಭಾರತದ ಕಿರಿಯರ ತಂಡ 13 ಪದಕ ಗೆದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.