ಹಳೆ ಪೈಪ್ನಿಂದ ತರಕಾರಿ ಚಪ್ಪರ
Team Udayavani, Sep 16, 2018, 3:11 PM IST
ಎಡಪಡಿತ್ತಾಯರ ತರಕಾರಿ ಚಪ್ಪರ ಪರಿಸರ ಸ್ನೇಹಿ. ಅದಕ್ಕಾಗಿ ಮರಗಳನ್ನು ಕಡಿಯಬೇಕಾಗಿಲ್ಲ. ಕೂಲಿಗಳ ಅಗತ್ಯವೂ ಇಲ್ಲ. ಕೆಲವೇ ನಿಮಿಷಗಳಲ್ಲಿ ಚಪ್ಪರ ಸಿದ್ಧವಾಗುತ್ತದೆ. ವರ್ಷಗಳ ಕಾಲ ಉಳಿದುಕೊಳ್ಳುತ್ತದೆ. ಬೇರೆಡೆಗೂ ಸ್ಥಳಾಂತರಿಸಬಹುದು.
ತೊಂಡೆ, ಹೀರೆ, ಮುಳ್ಳುಸೌತೆ, ಪಡುವಲ ಮೊದಲಾದ ತರಕಾರಿಗಳ ಬಳ್ಳಿ, ನೆಲದಲ್ಲಿ ಹರಡಿದರೆ ಒಳ್ಳೆಯ ಗುಣಮಟ್ಟದ ಕಾಯಿಗಳು ಸಿಗುವುದಿಲ್ಲ. ಎಲೆ, ಕಾಯಿಗಳೆಲ್ಲವೂ ಮುದುಡುತ್ತವೆ. ಬಳ್ಳಿ ಸಲೀಸಾಗಿ ಹರಡಿದರೆ ಮಾತ್ರ ಗುಣಮಟ್ಟದ ಕಾಯಿ ಸಿಗುತ್ತದೆ. ಹೀಗೆ ಹರಡಲು ಅನುಕೂಲವಾದ ಚಪ್ಪರವೊಂದು ಬೇಕೇ ಬೇಕು ಅಲ್ಲವೇ? ಇಲ್ಲಿದೆ ಅದಕ್ಕೆ ಐಡಿಯಾ.
ಹಿಂದಿನ ಕಾಲದಲ್ಲಿ ಇಂತಹ ಚಪ್ಪರ ನಿರ್ಮಿಸಲು ಕಷ್ಟವಿರಲಿಲ್ಲ. ಕಾಡಿಗೆ ಹೋಗಿ ಕಂಬ, ಗೂಟಗಳನ್ನು ಕಡಿದು ತಂದು ಗಟ್ಟಿಯಾದ ಚಪ್ಪರಗಳನ್ನು ಹಾಕಬಹುದಿತ್ತು. ರಬ್ಬರ್ ಕೃಷಿ ವಿಸ್ತರಿಸಿದ ಬಳಿಕ ಕಾಡುಗಳು ಮಾಯವಾಗಿವೆ. ಚಪ್ಪರ ಹಾಕಲು ಬೇಕಾದ ಸಲಕರಣೆಗಳು ಸಿಗುವುದಿಲ್ಲವೆಂಬುದು ತರಕಾರಿ ಬೆಳೆಗಾರರ ಪಾಲಿಗೆ ತಲೆನೋವಾಗಿದೆ.
ಇಂಥ ಸಮಸ್ಯೆಗಳಿಗೆ ಬಹು ಸುಲಭವಾಗಿ ಉತ್ತರ ಹುಡುಕಿದ್ದಾರೆ ವೆಂಕಟರಮಣ ಎಡಪಡಿತ್ತಾಯರು. ಶಾಲಾ ಶಿಕ್ಷಕರಾಗಿ ಕೆಲವು ದಶಕಗಳ ಕಾಲ ಸೇವೆ ಸಲ್ಲಿಸಿ ವೃತ್ತರಾದ ಬಳಿಕ, ಮಂಗಳೂರು ತಾಲೂಕಿನ ಮೂಡು ಕೊಣಾಜೆಯಲ್ಲಿ ಕೃಷಿ ಜಾಗ ಖರೀದಿಸಿ ಅಡಿಕೆ,ತೆಂಗುಗಳ ಜತೆಗೆ ವೈವಿಧ್ಯಮಯವಾದ ತರಕಾರಿಗಳನ್ನೂ ಅವರು ಬೆಳೆಯುತ್ತಿದ್ದಾ ರೆ. ಬೇಸಗೆಯಲ್ಲಿ ಬೇರೆ, ಮಳೆಗಾಲದಲ್ಲಿ ಬೇರೆ ಬಗೆಯ ತರಕಾರಿಗಳ ಕೃಷಿ ಮಾಡಿ ಮನೆಗೆ ಬೇಕಾದಷ್ಟು ತಾಜಾ ಕಾಯಿಪಲ್ಲೆ ಪಡೆಯುತ್ತಿದ್ದಾರೆ.
ಹೀಗೆ ಬೆಳೆಯುವ ತರಕಾರಿ ಬಳ್ಳಿಗಳಿಗೆ ಚಪ್ಪರ ಹಾಕಲು ಎಡಪಡಿತ್ತಾಯರಿಗೆ ಸನಿಹದಲ್ಲಿ ಕಾಡು ಇಲ್ಲ. ಕಂಬಗಳನ್ನು ಕಡಿದು ತಂದು ಕೆಲಸ ಮಾಡಲು ಶಕ್ತಿಯೂ ಇಲ್ಲ. ಅದಕ್ಕಾಗಿ ಅವರು ಸುಲಭವಾದ ಒಂದು ಉಪಾಯವನ್ನು ಕಂಡು ಹಿಡಿದಿದ್ದಾರೆ. ಅದು ನಿರರ್ಥಕವೆಂದು ಮೂಲೆಗೆಸೆದ ಪಿಸಿ ಪೈಪ್ಗ್ಳಿಂದ ಸರಳವಾಗಿ ನಿರ್ಮಿಸುವ ಚಪ್ಪರ. ತುಂಡಾದ ಪೈಪ್ಗಳು, ಜೋಡಣೆಗಳು, ಟಿ ಗಳು ಇದನ್ನೆಲ್ಲ ಬಳಸಿ ಸಿದ್ಧವಾಗುವ ಚಪ್ಪರವದು.
ಕಂಬದ ಬದಲಿಗೆ ಸ್ವಲ್ಪ ದಪ್ಪವಿರುವ ಪೈಪ್ ಗಳನ್ನು ನಾಲ್ಕು ಮೂಲೆಗಳಲ್ಲಿ ಹೂಳುತ್ತಾರೆ. ಜೋಡಣೆಗಳನ್ನು ಉಪಯೋಗಿಸಿ ಮೇಲ್ಭಾಗದ ತೋಳುಗಳನ್ನು ಬೆಸೆದಿದ್ದಾರೆ. ಒಂದಿಂಚಿನ ತುಂಡು ಪೈಪ್ಗಳನ್ನು ಮೇಲೆ ಹರಡಿ ಇದರ ಮೇಲೆ ತೊಂಡೆ, ಹೀರೆ ಮೊದಲಾದ ತರಕಾರಿಗಳ ಬಳ್ಳಿಗಳನ್ನು ಹಬ್ಬಲು ಬಿಡುತ್ತಾರೆ.
ಎಡಪಡಿತ್ತಾಯರ ತರಕಾರಿ ಚಪ್ಪರ ಪರಿಸರ ಸ್ನೇಹಿ. ಅದಕ್ಕಾಗಿ ಮರಗಳನ್ನು ಕಡಿಯಬೇಕಾಗಿಲ್ಲ. ಕೂಲಿಗಳ ಅಗತ್ಯವಿಲ್ಲ. ಕೆಲವೇ ನಿಮಿಷಗಳಲ್ಲಿ ಚಪ್ಪರ ಸಿದ್ಧವಾಗುತ್ತದೆ. ವರ್ಷಗಳ ಕಾಲ ಉಳಿದುಕೊಳ್ಳುತ್ತದೆ. ಬೇರೆಡೆಗೂ ಸ್ಥಳಾಂತರಿಸಬಹುದು. ತರಕಾರಿ ಬೆಳೆಗಾರರ ಪಾಲಿಗೆ ಖರ್ಚಿಲ್ಲದ ಚಪ್ಪರ ಪೇಟೆಯಲ್ಲಿ ಹಿತ್ತಿಲಿನಲ್ಲಿ ತರಕಾರಿ ಬೆಳೆಯುವವರಿಗೂ ಅನುಕೂಲವಾಗಬಹುದು.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.