ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ
Team Udayavani, Sep 17, 2018, 12:23 PM IST
ಬೆಂಗಳೂರು: ನಗರದ ದಂಡು ಪ್ರದೇಶದ ವ್ಯಾಪ್ತಿಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ 251 ಗಣೇಶ ಮೂರ್ತಿಗಳನ್ನು ಭಾನುವಾರ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು. ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಶಿವಾಜಿನಗರ, ಕಾಮರಾಜ್ ರಸ್ತೆ ಮೂಲಕ ಮೆರವಣಿಗೆಯಲ್ಲಿ ಸಾಗಿ ಅಲಸೂರು ಕರೆಯಲ್ಲಿ ವಿಸರ್ಜಿಸಲಾಯಿತು.
ಉತ್ಸವ ಉದ್ದೇಶಿಸಿ ಮಾತನಾಡಿದ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಭಿನವ ಚನ್ನಬಸವರಾಧ್ಯ ಶಿವಚಾರ್ಯ , ಶಿವಾಜಿನಗರದಲ್ಲಿ ಜಾತಿ, ಮತ ಭೇದವಿಲ್ಲದೇ 27ವರ್ಷದಿಂದ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತಿದೆ. ಅಂಕಲ ಸಿದ್ದೇಶ್ವರ ಸ್ವಾಮಿ ಜಂಗಮ ಮಠದ ಸಮ್ಮುಖದಲ್ಲಿ ಗಣೇಶೋತ್ಸವ ನಡೆಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ, ವಸಂತ ನಗರ ವಾರ್ಡ್‌ನ ಪಾಲಿಕೆ ಸದಸ್ಯ ಸಂಪತ್‌ಕುಮಾರ್, ಭಾರತ ಮಾತಾ ಆಶ್ರಮದ ಸಾಧುರಂಗರಾಜನ್, ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ರಾಜಗಣಪತಿ ಗುರುಕ್ಕಲ್, ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ಶನಿವಾರ 1,19,410 ಮೂರ್ತಿಗಳ ವಿಸರ್ಜನೆ: ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಮೂರು ದಿನಗಳು ಕಳೆದ ಹಿನ್ನೆಲೆಯಲ್ಲಿ ಶನಿವಾರ ನಗರದ ವಿವಿಧ ಕೆರೆಗಳಲ್ಲಿ ಒಟ್ಟು 1,19,410 ಗಣೇಶ ಮೂರ್ತಿಗಳ ವಿಸರ್ಜನೆಯಾಗಿದೆ. ಈ ಪೈಕಿ ಪಾಲಿಕೆ ದಕ್ಷಿಣ ವಲಯದ ಕೆರೆಗಳಲ್ಲಿ 19,425, ಪೂರ್ವ ವಲಯ 39,892, ಪಶ್ಚಿಮ 31,935, ಯಲಹಂಕ ವಲಯ 10,470, ಮಹದೇವಪುರ ವಲಯ 9,789, ಬೊಮ್ಮನಹಳ್ಳಿ ವಲಯ 2,842, ರಾಜರಾಜೇಶ್ವರಿ ನಗರ ವಲಯ 3,313, ದಾಸರಹಳ್ಳಿ ವಲಯದಲ್ಲಿ 1,744 ಮೂರ್ತಿಗಳು ವಿಸರ್ಜಜನೆಯಾಗಿವೆ. ಇವುಗಳಲ್ಲಿ 7 ಸಾವಿರ ಪಿಒಪಿ ಮೂರ್ತಿಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wedding Story: ಕಂಕಣ ಕಾಲ-4: ಲಗ್ನಪತ್ರಿಕೆ ಹೋಯ್ತು, ವಾಟ್ಸಾಪ್‌ನಲ್ಲೇ ಕರೆ ಬಂತು!
Bengaluru: ಚಕ್ರ ವಾಹನಗಳು, ಮನೆ ಕಳ್ಳತನ: ಮೂವರು ಆರೋಪಿಗಳ ಬಂಧನ
Bengaluru: ಸಿನಿಮಾ ಡ್ರೋನ್ ಟೆಕ್ನಿಷಿಯನ್ ಆತ್ಮಹತ್ಯೆ ಯತ್ನ
Bengaluru: ಮುನಿರತ್ನ ವಿರುದ್ದ ಇನ್ನೊಂದು ಹನಿಟ್ರ್ಯಾಪ್, ಕೊಲೆ ಯತ್ನ ಕೇಸ್
Bengaluru:ಅಕ್ರಮ ಸಂಬಂಧ: ಪತಿ ಹತ್ಯೆ-ಪ್ರಿಯಕರ,ಆತನ ಸ್ನೇಹಿತನ ಜತೆಗೆ ಸೇರಿ ಕೊಲೆಗೈದ ಪತ್ನಿ
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Ballari: ಸ್ವಾಮೀಜಿಗಳ ಮೇಲಿನ ಕ್ರಮ, ಕರಿಯಾ ಎಂದವರ ಮೇಲೆ ಏಕಿಲ್ಲ; ಅಶೋಕ್
ಕರ್ನಾಟಕ ಸರ್ಕಾರದ ಜೊತೆ 11,000 ಕೋಟಿ ಬಂಡವಾಳ ಹೂಡಿಕೆಗೆ ಹೀರೊ ಫ್ಯೂಚರ್ ಎನರ್ಜಿಸ್ ಒಪ್ಪಂದ
Kalaburagi: ಸಹಕಾರಿ ಸಾಲದ ಮೇಲಿನ ಬಡ್ಡಿ ಹಣ ಡಿಸಿಸಿ ಬ್ಯಾಂಕ್ ಗೆ ಬಿಡುಗಡೆ
Wedding Story: ಕಂಕಣ ಕಾಲ-4: ಲಗ್ನಪತ್ರಿಕೆ ಹೋಯ್ತು, ವಾಟ್ಸಾಪ್‌ನಲ್ಲೇ ಕರೆ ಬಂತು!
Manipal: ಉದಯವಾಣಿಯ ಸಹಾಯಕ ಸುದ್ದಿ ಸಂಪಾದಕರಾಗಿದ್ದ ದಾಮೋದರ ಕಕ್ರಣ್ಣಾಯ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.