ಕೈ ಬೀಸಿ ಕರೆದಿವೆ ಸ್ಟಾಫ್ ಸೆಲೆಕ್ಷನ್ ಕಮಿಷನ್!
Team Udayavani, Sep 18, 2018, 6:00 AM IST
ಸ್ಟಾಫ್ ಸೆಲೆಕ್ಷನ್ ಕಮಿಷನ್ ಜೂನಿಯರ್ ಇಂಜಿನಿಯರ್, ಸೈಂಟಿಫಿಕ್ ಅಸಿಸ್ಟೆಂಟ್ ಸೇರಿದಂತೆ 1136 ಹುದ್ದೆಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ನೌಕರಿಯ ಹುಡುಕಾಟದಲ್ಲಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಹುದ್ದೆಗಳ ವಿವರ
ಜೂನಿಯರ್ ಫಿಸಿಯೋಥರೆಪಿಸ್ಟ್-26, ಜೂನಿಯರ್ ಇಂಜಿನಿಯರ್-115, ಸೈಂಟಿಫಿಕ್ ಅಸಿಸ್ಟೆಂಟ್-99, ಜೂನಿಯರ್ ಸೀಡ್ ಅನಾಲಿಸ್ಟ್- 1, ಹೆರಾಲೆಡಿಕ್ ಅಸಿಸ್ಟೆಂಟ್-1, ಇನ್‌ವೆಸ್ಟಿಗೇಟರ್-7, ಬಾಟಾನಿಕಲ್ ಅಸಿಸ್ಟೆಂಟ್-31, ಡಾಟಾ ಪ್ರೊಸೆಸಿಂಗ್ ಅಸಿಸ್ಟೆಂಟ್-48, ಲೈಬ್ರರಿ ಅಂಡ್ ಇನ್ಫರ್ಮೆಷನ್ ಅಸಿಸ್ಟೆಂಟ್-25, ಫರ್ಟಿಲೈಜರ್ ಇನ್ಸ್‌ಪೆಕ್ಟರ್-2, ಸಬ್ ಎಡಿಟರ್-02, ಲೈಬ್ರರಿ ಇನ್ಫರ್‌ವೆುಷನ್ ಅಸಿಸ್ಟೆಂಟ್-3, ಡಯಾಟೀಶಿಯನ್-9, ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್-11, ಜಿಯೋಗ್ರಾಫರ್-1, ಸೀನಿಯರ್ ಇನ್ಸ್‌ಟ್ರಕ್ಟರ್-2, ಸೀನಿಯರ್ ಹಿಂದಿ ಟೈಪಿಸ್ಟ್-1, ಸೌಂಡ್ ಟೆಕ್ನಿಷಿಯನ್-1, ಅಕೌಂಟೆಂಟ್-1, ಪ್ಲಾನಿಂಗ್ ಅಸಿಸ್ಟೆಂಟ್-2, ಟೆಕ್ನಿಕಲ್ ಅಸಿಸ್ಟೆಂಟ್-4, ಅಸಿಸ್ಟೆಂಟ್-11, ಸೀನಿಯರ್ ಟ್ರಾನ್ಲàಟರ್-8, ಲಾಗ್ವೇಜ್ ಇನ್ಸ್‌ಟ್ರಕ್ಟರ್-3, ಎಕಾನಾಮಿಕ್ ಇನ್ವೇಸ್ಟಿಕೇಟರ್-2, ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-6, ಟೆಕ್ಸ್‌ಟೇಲ್ ಡಿಸೈನರ್-4, ಟೆಕ್ನಿಷಿಯನ್-10, ರೀಸರ್ಚ್ ಇನ್‌ವೆಸ್ಟಿಗೇಟರ್-3, ರೀಸರ್ಚ್ ಅಸಿಸ್ಟೆಂಟ್-7, ಲ್ಯಾಬೋರೇಟರಿ ಅಸಿಸ್ಟೆಂಟ್-10, ಜೂನಿಯರ್ ಕಂಪ್ಯೂಟರ್ ಅಸಿಸ್ಟೆಂಟ್-20, ಸೆಕ್ಷನ್ ಆಫೀಸರ್-12, ಅಸಿಸ್ಟೆಂಟ್ ಡ್ರಗ್ ಇನ್ಸ್‌ಪೆಕ್ಟರ್-15, ಸೀನಿಯರ್ ಆಡಿಯೋ, ವಿಶುಯಲ್ ಅಸಿಸ್ಟೆಂಟ್- 1, ಹಿಂದಿ ಇನ್ಸ್‌ಟ್ರಕ್ಟರ್- 1, ಅಸಿಸ್ಟೆಂಟ್ ಪ್ಲಾಂಟ್ ಪೊ›ಟೆಕ್ಷನ್ ಆಫೀಸರ್-68, ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್- 1, ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್-1, ಡ್ರಾಫ್ಟ್ಮೆನ್- 54, ಅಸಿಸ್ಟೆಂಟ್ ವೆಲ್‌ಫೇರ್ ಅಡ್ಮಿನಿಸ್ಟ್ರೆಟರ್- 1, ಫೋಟೋಗ್ರಾಫರ್-1, ಅಸಿಸ್ಟೆಂಟ್ ಮ್ಯಾಪ್‌ಕ್ಯುರೇಟರ್-5, ಟೆಕ್ನಿಕಲ್ ಕ್ಲರ್ಕ್-1, ಡೆಪ್ಯುಟಿ ರೇಂಜರ್-1, ಅಸಿಸ್ಟೆಂಟ್ ಸ್ಟೋರ್ ಕೀಪರ್-14, ಫೋರ್‌ವೆುನ್-13, ಲ್ಯಾಬೋರೇಟರಿ ಅಟೆಂಡೆಂಟ್-69, ಸ್ಟೋರ್ ಕೀಪರ್ ಕಮ್ ಕೇರ್‌ಟೇಕರ್-1, ಸೀನಿಯರ್ ಲೈಬ್ರರಿ ಅಟೆಂಡೆಂಟ್-1, ಸ್ಟೋಕ್‌ವೆುನ್-2, ಪೊ›ಸೆಸಿಂಗ್ ಅಸಿಸ್ಟೆಂಟ್-1, ಕ್ಲರ್ಕ್-3, ಡೇಟಾ ಎಂಟ್ರಿ ಆಪರೇಟರ್-1, ನ್ಯಾವಿಗೇಷನಲ್ ಅಸಿಸ್ಟೆಂಟ್-19, ಲೇಡಿ ಮೆಡಿಕಲ್ ಅಟೆಂಡೆಂಟ್- 16, ಟೆಕ್ನಿಕಲ್ ಆಪರೇಟರ್-201, ಮೆಡಿಕಲ್ ಅಟೆಂಡೆಂಟ್-36, ಸ್ಟೆನೋಗ್ರಾಫರ್-1, ಫೋಟೋ ಆರ್ಟಿಸ್ಟ್-1, ಜೂನಿಯರ್ ಡ್ರಾಫ್ಟ್ಮೆನ್-1, ಕ್ಯಾಂಟೀನ್ ಅಟೆಂಡೆಂಟ್-115, ಲೇಡಿ ಕ್ಲರ್ಕ್-1, ಫಿಟ್ಟರ್ ಪಂಪ್ ಡ್ರೆçವರ್-1, ಅಸಿಸ್ಟೆಂಟ್ ಫೋಟೊಗ್ರಾಫರ್-1 ಹುದ್ದೆಗಳಿವೆ.
ವಯೋಮಿತಿ- ವಿದ್ಯಾರ್ಹತೆ
ಹುದ್ದೆಗಳಿಗೆ ಅನುಗುಣವಾಗಿ ಆಯಾ ಆಭ್ಯರ್ಥಿಯ ಅನುಭವ, ಹುದ್ದೆಯ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ. ವಯೋಮಿತಿಯನ್ನು ಜೂನಿಯರ್, ಸೀನಿಯರ್, ಅಸಿಸ್ಟೆಂಟ್‌ಗಳಿಗೆ ಪ್ರತ್ಯೇಕವಾಗಿದೆ. ಪರಿಶಿಷ್ಟರಿಗೆ 5 ವರ್ಷ, ಒಬಿಸಿ-3, ಪಿಬ್ಲೂ$Âಡಿ-10 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.
ಅಭ್ಯರ್ಥಿಗಳ ಆಯ್ಕೆ ಹೇಗೆ?
ಮಲ್ಟಿಪಲ್ ಚಾಯ್ಸ, ಕಂಪ್ಯೂಟರ್ ಲಿಖೀತ ಪರೀಕ್ಷೆ ಮೂಲಕ ಹುದ್ದೆಗಳ ಆಯ್ಕೆ ನಡೆಯುತ್ತದೆ. ಪರೀಕ್ಷೆ ಆನ್‌ಲೈನ್ ಮೂಲಕವೇ ನಡೆಯುತ್ತದೆ. ಅಭ್ಯರ್ಥಿಗಳು ಗಳಿಸುವ ಪರೀಕ್ಷಾಂಕಗಳು, ಹುದ್ದೆಗಳಿಗನುಗುಣವಾದ ದಾಖಲೆ ಪರಿಶೀಲನೆ, ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಕೆಲ ಹುದ್ದೆಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನೂ ನಡೆಸುವುದುಂಟು.
ಅರ್ಜಿ ಸಲ್ಲಿಕೆ
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸ್ಟಾಫ್ ಸೆಲೆಕ್ಷನ್ ಕಮಿಷನ್ನಿನಲ್ಲಿ www.ssconline.nic.in ನೋಂದಣಿ ಮಾಡಿಕೊಂಡು, ತಾವು ಹೊಂದಬೇಕಾಗಿರುವ ಹುದ್ದೆ ಅರ್ಜಿಗೆ ಅಗತ್ಯ ಮಾಹಿತಿ ತುಂಬಬೇಕು. ಬಳಿಕ ಚಲನ್ ಒಂದು ಜನರೇಟ್ ಆಗುತ್ತದೆ. ಅದನ್ನು ಎಸ್‌ಬಿಐ ಬ್ಯಾಂಕಿನಲ್ಲಿ ನೂರು ರೂಪಾಯಿಗಳ ಶುಲ್ಕ ಪಾವತಿಸಿ ಅಲ್ಲಿ ದೊರೆಯುವ ಕೋಡ್ ನಂಬರ್ ಅನ್ನು ಜಾಲತಾಣದಲ್ಲಿ ರಿಜಿಸ್ಟರ್ ಮಾಡಬೇಕು.
ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ: tinyurl.com/y993csgu
ಎನ್. ಅನಂತನಾಗ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.