ರಾಷ್ಟ್ರೀಯ ಹೆದ್ದಾರಿಗೆ ತೇಪೆ
Team Udayavani, Sep 18, 2018, 1:50 AM IST
ಕುಂದಾಪುರ: ಕೊನೆಗೂ ಇಲ್ಲಿನ ರಾಷ್ಟ್ರೀಯ ಹೆದ್ದಾರಿಗೆ ತೇಪೆ ಭಾಗ್ಯ ಒದಗಿ ಬಂದಿದೆ. ರವಿವಾರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ನವಯುಗ ಕಂಪೆನಿಯವರು ರಾಷ್ಟ್ರೀಯ ಹೆದ್ದಾರಿ 66ಕ್ಕೆ ಡಾಮರು ಹಾಕಿದ್ದಾರೆ. ಆದರೆ ಅದರ ಅನಂತರ ಸಂಗಂ ಮೊದಲಾದೆಡೆ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದುಕೊಂಡ ಐಆರ್‌ಬಿ ಕಂಪೆನಿಯವರು ಗಮನವೇ ಹರಿಸಿಲ್ಲ.
ಪುರಸಭೆ ವ್ಯಾಪ್ತಿ ಆರಂಭವಾಗುವಲ್ಲಿಂದಲೇ ಹದಗೆಟ್ಟ ರಸ್ತೆ ಕುಂದಾಪುರ ನಗರಕ್ಕೆ ಬಿಳಿಧೂಳಿನ ಸ್ವಾಗತ ನೀಡುತ್ತದೆ. ಬಸ್ರೂರು ಮೂರುಕೈಯಲ್ಲಿ ಶಿವಮೊಗ್ಗಕ್ಕೆ ಹೋಗುವ ತಿರುವಿನಲ್ಲೂ ಹದಗೆಟ್ಟಿದೆ. ಸಂಗಮ್‌ವರೆಗೂ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಮಳೆ ಬಂದಾಗ ರಸ್ತೆಯ ಹೊಂಡಗಳಲ್ಲಿ ನೀರು ತುಂಬಿ ರಸ್ತೆ-ಹೊಂಡ, ರಸ್ತೆ ಅಂಚು ತಿಳಿಯದೆ ವಾಹನ ಸವಾರರು ತ್ರಾಸ ಪಡುತ್ತಾರೆ.
ಧೂಳಿನಿಂದ ಸಮಸ್ಯೆ
ಮಳೆ ಬಂದಾಗ ಇಂತಹ ದುರವಸ್ಥೆಯಾದರೆ ಬಿಸಿಲಿದ್ದಾಗ ಈ ಪ್ರದೇಶವಿಡೀ ಧೂಳುಮಯ. ನಡೆದಾಡಲೂ ಅಸಾಧ್ಯ. ಜತೆಗೆ ಅಕ್ಕಪಕ್ಕದ ಅಂಗಡಿಯವರಿಗೂ ಧೂಳು ತಿನ್ನುವ ಸಂಕಷ್ಟ. ಇದರಿಂದ ಕಾಯಿಲೆ ಭೀತಿ ಬೇರೆ. ರಾಷ್ಟ್ರೀಯ ಹೆದ್ದಾರಿಯಾದ ಕಾರಣ ವಾಹನಗಳ ಓಡಾಟ ನಿಲ್ಲುವುದೇ ಇಲ್ಲ. ಹಾಗೆ ವಾಹನ ಹೋದಾಗಲೆಲ್ಲ ಧೂಳು ಹಾರಾಡುತ್ತಿರುತ್ತದೆ. ಈ ಬಗ್ಗೆ ಉದಯವಾಣಿ ಸೆ. 13ರಂದು ವರದಿ ಪ್ರಕಟಿಸಿತ್ತು. ಇದೀಗ ನವಯುಗ ಕಂಪೆನಿ ತೇಪೆ ಕಾರ್ಯ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ
Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ
Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್ ಶೆಟ್ಟಿ
Ajekar Case: ನ್ಯಾಯಾಂಗ ಬಂಧನ ವಿಸ್ತರಣೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
MUST WATCH
ಹೊಸ ಸೇರ್ಪಡೆ
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.