ಆಫ್ಘಾನಿಸ್ತಾನ ಪ್ರಚಂಡ ಜಯ: ಲಂಕನ್ನರಿಗೆ ಮತ್ತೆ ಮುಖಭಂಗ
Team Udayavani, Sep 18, 2018, 9:38 AM IST
ಅಬುಧಾಬಿ: ಶ್ರೀಲಂಕಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಅಫಘಾನಿಸ್ತಾನ ಏಷ್ಯಾ ಕಪ್ ನ್ ಅಚ್ಚರಿ ಫಲಿತಾಂಶ ಕ್ಕೆ ಸಾಕ್ಷಿಯಾಗಿದೆ. ಪಂದ್ಯಾವಳಿಯ ಸೋಮವಾರದ ಮುಖಾಮುಖೀಯಲ್ಲಿ ಶ್ರೀಲಂಕಾ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಫ್ಘಾನಿಸ್ಥಾನ, ಸರಿಯಾಗಿ 50 ಓವರ್‌ಗಳಲ್ಲಿ 249 ರನ್ನಿಗೆ ಆಲೌಟ್ ಆಗಿತ್ತು. ಗುರಿ ಬೆನ್ನಟ್ಟಿದ ಶ್ರೀಲಂಕಾ 41.2 ಓವರ್ ಗಳಲ್ಲಿ ಕೇವಲ158 ರನ್ ಗಳಿಗೆ ಅಲ್ ಔಟ್ ಆಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನ್‌ಗೆ ಅಗ್ರ ಕ್ರಮಾಂಕದ ಆಟಗಾರರು ಉತ್ತಮ ಅಡಿಪಾಯ ನಿರ್ಮಿಸಿದರು. ಆರಂಭಿಕರಾದ ಮೊಹಮ್ಮದ್ ಶಾಜಾದ್ (34) ಮತ್ತು ಇಹ್ಸಾನುಲ್ಲ (45) 11.4 ಓವರ್‌ಗಳಿಂದ 57 ರನ್ ಒಟ್ಟುಗೂಡಿಸಿದ ಬಳಿಕ ರಹಮತ್ ಷಾ ಕ್ರೀಸ್ ಆಕ್ರಮಿಸಿಕೊಂಡರು.
ಷಾ ಆಕರ್ಷಕ ಬ್ಯಾಟಿಂಗ್
ಅಫ್ಘಾನ್ ಸರದಿಯಲ್ಲಿ ಸರ್ವಾಧಿಕ ರನ್ ಬಾರಿಸಿದ ಹೆಗ್ಗಳಿಕೆ ಷಾ ಅವರದಾಯಿತು. 90 ಎಸೆತ ನಿಭಾಯಿಸಿದ ಷಾ 5 ಬೌಂಡರಿ ನೆರವಿನಿಂದ 72 ರನ್ ಬಾರಿಸಿದರು. ಇದು ಅವರ 12ನೇ ಅರ್ಧ ಶತಕ. ನಾಯಕ ಅಸರ್ ಅಫ್ಘಾನ್ (1) ಬೇಗನೇ ಪೆವಿಲಿಯನ್ ಸೇರಿಕೊಂಡ ಬಳಿಕ ಷಾ-ಹಶ್ಮತುಲ್ಲ ಶಾಹಿದಿ (37) 4ನೇ ವಿಕೆಟಿಗೆ 80 ರನ್ ಜತೆಯಾಟ ನಿಭಾಯಿಸಿದರು.
ತಿಸರ ಪೆರೆರ ಘಾತಕ ದಾಳಿ
ಕೊನೆಯ 10 ಓವರ್‌ಗಳಲ್ಲಿ ತಿಸರ ಪೆರೆರ ಘಾತಕ ದಾಳಿ ಸಂಘಟಿಸಿದ್ದರಿಂದ ಅಫ್ಘಾನ್‌ನ ದೊಡ್ಡ ಮೊತ್ತದ ಯೋಜನೆ ವಿಫಲವಾಯಿತು. ಪೆರೆರ 55 ರನ್ನಿನ್ನು 5 ವಿಕೆಟ್ ಕಿತ್ತರು. ಅವರು ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಕಿತ್ತ 4ನೇ ಸಂದರ್ಭ ಇದಾಗಿದೆ.
ಅಫ್ಘಾನ್ ಬಿಗು ದಾಳಿ
ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್, ನಬಿ, ನೈಬ್ ಬಿಗು ದಾಳಿಗೆ ಲಂಕನ್ನರು ಪತರುಗುಟ್ಟಿದರು. ಪ್ರತಿಯೊಬ್ಬರೂ ತಲಾ 2 ವಿಕೆಟ್ ಪಡೆದು ಮಿಂಚಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.