ಕರ್ನಾಟಕದ ಶಾಸಕರ ವಾರ್ಷಿಕ ಆದಾಯವೇ ಹೆಚ್ಚು!


Team Udayavani, Sep 18, 2018, 12:23 PM IST

karnataka.jpg

ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ಹಾಲಿ ಶಾಸಕರು ಗಳಿಸುವ ವಾರ್ಷಿಕ ಆದಾಯದ ಪಟ್ಟಿಯಲ್ಲಿ ಕರ್ನಾಟಕದ ಶಾಸಕರು ಮೊದಲ ಸ್ಥಾನದಲ್ಲಿ ಇದ್ದಾರೆ. ಛತ್ತೀಸ್‌ಗಡದ ಶಾಸಕರು ಕೊನೆಯ ಸ್ಥಾನದಲ್ಲಿದ್ದಾರೆ. ಈ ಬಗ್ಗೆ “ಎಸೋಸಿಯೇಷನ್‌ ಫಾರ್‌ ಡೆಮಾಕ್ರಾಟಿಕ್‌ ರಿಫಾಮ್ಸ್‌ì’ ಮತ್ತು “ನ್ಯಾಷನಲ್‌ ಇಲೆಕ್ಷನ್‌ ವಾಚ್‌’ ಸಂಘಟನೆ ಜಂಟಿಯಾಗಿ ಅಧ್ಯಯನ ನಡೆಸಿವೆ.

ಈ ವರದಿಯ ಪ್ರಕಾರ ಪ್ರತಿ ಶಾಸಕನ ಸರಾಸರಿ ಆದಾಯ ವರ್ಷಕ್ಕೆ 24.59 ಲಕ್ಷ ರೂ. ಇದೆ. ಈ ಪೈಕಿ ಕರ್ನಾಟಕದಲ್ಲಿನ ಪ್ರತಿ ಶಾಸಕರು ವರ್ಷಕ್ಕೆ ಸರಾಸರಿ 1 ಕೋಟಿ ರೂ. ಆದಾಯ ಪಡೆಯುತ್ತಾರೆ ಎಂದು ಹೇಳಿಕೊಂಡಿದೆ. ಛತ್ತೀಸ್‌ಗಡದ ಶಾಸಕರು ವಾರ್ಷಿಕವಾಗಿ ಕನಿಷ್ಠ 5.4 ಲಕ್ಷ ರೂ. ಆದಾಯ ಪಡೆದುಕೊಳ್ಳುತ್ತಿದ್ದಾರೆ.

ಶಾಸಕರಿಗೆ ಹೋಲಿಕೆ ಮಾಡಿದರೆ, ಶಾಸಕಿಯರಿಗೆ ಕಡಿಮೆ ಆದಾಯ ಬರುತ್ತದೆ. ಹೀಗಾಗಿ ಅದರಲ್ಲಿಯೂ ಲಿಂಗ ತಾರತಮ್ಯ ಇದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಅನಕ್ಷರಸ್ಥರು ಎಂದು ಘೋಷಿಸಿಕೊಂಡ ಶಾಸಕರೂ ವಾರ್ಷಿಕವಾಗಿ 9.31 ಲಕ್ಷ ರೂ. ಆದಾಯ ಪಡೆಯುತ್ತಾರೆ. ಅರ್ಧಕ್ಕಿಂತ ಹೆಚ್ಚು ಶಾಸಕರು ತಮ್ಮ ವೃತ್ತಿಯನ್ನು ಕೃಷಿ ಅಥವಾ ವ್ಯಾಪಾರ ಎಂದು ಘೋಷಿಸಿಕೊಂಡಿದ್ದಾರೆ.

4,086 ಶಾಸಕರ ಪೈಕಿ 3,145 ಶಾಸಕರು ಸಲ್ಲಿಸಿರುವ ಅಫಿಡವಿಟ್‌ಗಳನ್ನು ಪರಿಶೀಲಿಸಿದ ಬಳಿಕ ಈ ವರದಿ ಸಿದ್ಧಗೊಳಿಸಲಾಗಿದೆ ಎಂದು “ಎಸೋಸಿಯೇಷನ್‌ ಫಾರ್‌ ಡೆಮಾಕ್ರಾಟಿಕ್‌ ರಿಫಾಮ್ಸ್‌ì’ ಮತ್ತು “ನ್ಯಾಷನಲ್‌ ಇಲೆಕ್ಷನ್‌ ವಾಚ್‌’ ಹೇಳಿಕೊಂಡಿವೆ.  941 ಶಾಸಕರು ತಮ್ಮ ಆದಾಯವನ್ನೇ ಘೋಷಣೆ ಮಾಡಿಲ್ಲ. 

ಈ ವರದಿಯ ಪ್ರಕಾರ 3,145 ಶಾಸಕರ ವಾರ್ಷಿಕ ಆದಾಯ 24.59 ಲಕ್ಷ ರೂ. ಇದೆ. ದಕ್ಷಿಣ ಭಾರತದ 711 ಶಾಸಕರ ಸರಾಸರಿ ವಾರ್ಷಿಕ ಆದಾಯ 51.99 ಲಕ್ಷ ರೂ. ಇದೆ. ರಾಜ್ಯವಾರು ಹೇಳುವುದಿದ್ದರೆ ಕರ್ನಾಟಕದ 203 ಶಾಸಕರ ಅಫಿಡವಿಟ್‌ಗಳನ್ನು ಅಧ್ಯಯನ ಮಾಡಲಾಗಿದ್ದು, ಸರಾಸರಿ ಆದಾಯ 111.4 ಲಕ್ಷ ರೂ. ಇದೆ. ಈ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಮಹಾರಾಷ್ಟ್ರ 2ನೇ ಸ್ಥಾನದಲ್ಲಿದ್ದು, 256 ಶಾಸಕರ ವಿವರ ಪರಿಶೀಲನೆ ಬಳಿಕ ಪ್ರತಿ ಶಾಸಕರಿಗೆ 43.4 ಲಕ್ಷ ರೂ., ಛತ್ತೀಸ್‌ಗಡದ 63 ಶಾಸಕರಿಗೆ 5.4 ಲಕ್ಷ ರೂ. ಆದಾಯ, ಜಾರ್ಖಂಡ್‌ನ‌ 72 ಶಾಸಕರ ವಿವರಗಳ ಪರಿಶೀಲನೆ ಬಳಿಕ 7.4 ಲಕ್ಷ ರೂ. ಆದಾಯ ಇದೆ. 55 ಶಾಸಕರು ತಮ್ಮ ವೃತ್ತಿ ಯಾವುದು ಎಂದು ನಮೂದಿಸಿಲ್ಲ. 771 ಶಾಸಕರು ತಮ್ಮ ವೃತ್ತಿ ಉದ್ಯಮ, 758 ಮಂದಿ ಕೃಷಿ ಅಥವಾ ರೈತ ಎಂದು ವಿವರಿಸಿದ್ದಾರೆ.

ರೈತ ಅಥವಾ ಕೃಷಿ ತಮ್ಮ ಉದ್ಯಮ ಎಂದು ಹೇಳಿಕೊಂಡವರ ಪೈಕಿ 57.81 ಲಕ್ಷ ರೂ. ಆದಾಯ ಪಡೆಯುವವರಿದ್ದಾರೆ. ರಿಯಲ್‌ ಎಸ್ಟೇಟ್‌, ಸಿನಿಮಾ ಮತ್ತು ನಟನಾ ಕ್ಷೇತ್ರ ಎಂದು ನಮೂದಿಸಿರುವವರ ಪ್ರಮಾಣ ಶೇ.1. ಆದರೆ ಅತ್ಯಂತ ಹೆಚ್ಚು ಆದಾಯ ಪಡೆಯುವ ಮೊದಲ ನಾಲ್ಕು ಸ್ಥಾನಗಳಲ್ಲಿದ್ದಾರೆ. ಗೃಹಿಣಿ, ಅಧ್ಯಾಪಕಿ, ಪಿಂಚಣಿದಾರರು ಮತ್ತು ವಕೀಲರು ಎಂದು ನಮೂದಿಸಿಕೊಂಡವರು ಕಡಿಮೆ ಆದಾಯ ಪಡೆಯುವ ವರ್ಗದಲ್ಲಿದ್ದಾರೆ.

ಟಾಪ್ ನ್ಯೂಸ್

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

16-cm

Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ

15-ccb

Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್‌ ಸಾಧ್ಯತೆ

14-fruad

Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.