ಇಂಗ್ ಈಸ್ ಕಿಂಗ್
Team Udayavani, Sep 19, 2018, 6:00 AM IST
ಇಂಗುವಿನ ಲಾಭಗಳು
ಶ್ರಾವಣ ಮಾಸದ ವಿಶೇಷ ಪೂಜೆಗಳಂದು ಅಡುಗೆ ತಯಾರಿಸುವಾಗ, ಈರುಳ್ಳಿ-ಬೆಳ್ಳುಳ್ಳಿಯ ಬದಲಾಗಿ ಇಂಗು ಉಪಯೋಗಿಸುವ ವಾಡಿಕೆಯಿದೆ. ತೀಕ್ಷ್ಣ, ಕಟು ಗುಣವುಳ್ಳ, ಪರಿಮಳಯುಕ್ತ ಇಂಗು, ವಾತ-ಕಫಗಳನ್ನು ಶಮನಗೊಳಿಸಿ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಚಿಕ್ಕಮಕ್ಕಳಲ್ಲಿ ಅಜೀರ್ಣ, ಹೊಟ್ಟೆಯುಬ್ಬರ, ಭೇದಿ ಕಾಣಿಸಿಕೊಂಡಾಗ ಇಂಗನ್ನು ಬಿಸಿನೀರಿನಲ್ಲಿ ಕದಡಿ ಅಥವಾ ಮಜ್ಜಿಗೆಯಲ್ಲಿ ಕದಡಿ ಕುಡಿಸಬಹುದು. ನೆಗಡಿ, ಅಸ್ತಮಾ, ಫೂ ಜ್ವರಗಳಿಗೂ ಇಂಗು ಉತ್ತಮ ಮನೆಮದ್ದು. ಇಷ್ಟೆಲ್ಲಾ ಔಷಧೀಯ ಗುಣ ಹೊಂದಿರುವ ಇಂಗು, ಸೌಂದರ್ಯವರ್ಧಕವೂ ಹೌದು. ಚಿಟಿಕೆ ಇಂಗನ್ನು ಒಗ್ಗರಣೆಗಷ್ಟೇ ಅಲ್ಲ, ತ್ವಚೆಯ ಕಾಂತಿವರ್ಧನೆಗೂ ಬಳಸಬಹುದು ಅನ್ನೋದು ಗೊತ್ತಿದೆಯಾ?
1. ಇಂಗನ್ನು ಬಿಸಿನೀರಿನಲ್ಲಿ ತೇಯ್ದು ಮೊಡವೆ, ಗುಳ್ಳೆಗಳಿಗೆ ಲೇಪಿಸಿದರೆ ಶೀಘ್ರ ಗುಣ ಕಾಣುತ್ತದೆ.
2. ಕಡಲೆಹಿಟ್ಟು, ಬಟಾಣಿ ಹಿಡ್ಡಿನ ಮಿಶ್ರಣಕ್ಕೆ ಸ್ವಲ್ಪ ಇಂಗಿನ ಹುಡಿ ಬೆರೆಸಿ ಮುಖಕ್ಕೆ ಲೇಪಿಸಿದರೆ ಮುಖದ ಚರ್ಮ ಬಿಳಿಯಾಗುವುದಲ್ಲದೆ, ನೆರಿಗೆಗಳೂ ನಿವಾರಣೆಯಾಗುತ್ತದೆ.
3. ಇಂಗಿನ ಹುಡಿಯನ್ನು ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಲೇಪಿಸಿ 20 ನಿಮಿಷದ ಬಳಿಕ ತೊಳೆದರೆ ಹೊಟ್ಟು ನಿವಾರಣೆಯಾಗಿ, ಕೂದಲು ಉದುರುವುದು ನಿಲ್ಲುತ್ತದೆ.
4. ಒಂದು ಬೌಲ್ನಲ್ಲಿ ಮುಲ್ತಾನಿ ಮಿಟ್ಟಿ , ಜೇನು ಹಾಗೂ ರೋಸ್ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ. ಅದಕ್ಕೆ 3 ಚಿಟಿಕೆ ಇಂಗು ಬೆರೆಸಿ ಮುಖಕ್ಕೆ ಲೇಪಿಸಿ, 10-15 ನಿಮಿಷದ ಬಳಿಕ ತೊಳೆದರೆ ತ್ವಚೆಯ ಕಾಂತಿ ಹೆಚ್ಚುತ್ತದೆ.
-ಡಾ. ಅನುರಾಧಾ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.