ಅ.10-19ರವರೆಗೆ ದಸರಾ: ಯದುವೀರ್
Team Udayavani, Sep 19, 2018, 6:00 AM IST
ಮೈಸೂರು: ಅರಮನೆಯಲ್ಲಿ ಅ.10ರಂದು ನವರಾತ್ರಿ ಪ್ರಾರಂಭವಾಗಿ 19ರಂದು ವಿಜಯದಶಮಿ ಮೆರವಣಿಗೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು
ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಬಾರಿ ವಿವಾದದ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ವಿಚಾರವನ್ನು ಅಮ್ಮ ನೋಡಿಕೊಳ್ಳುತ್ತಾರೆ. ಆದರೆ, ಅರಮನೆಯ ದಸರಾ ಆಚರಣೆ ಪದಟಛಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. ತಮ್ಮ ಪತ್ನಿ ತ್ರಿಷಿಕಾ ಕುಮಾರಿ, ಗಿರಿಜನರ ಜೀವನ ಪದ್ಧತಿ ಕುರಿತು ಅಧ್ಯಯನ ನಡೆಸಲು ಆಸಕ್ತಿ ವಹಿಸಿದ್ದಾರೆ. ಆದರೆ, ಪಿಎಚ್ಡಿಗೆ ಇನ್ನೂ ಹೆಸರು ನೋಂದಣಿ ಮಾಡಿಸಿಲ್ಲ ಎಂದರು.
ಹೈಫಾ ಯುದ್ಧದ ಸೈನಿಕರಿಗೆ ಸನ್ಮಾನ: 1918ರ ಸೆ.23ರಂದು ಇಸ್ರೇಲ್ನ ಹೈಫಾದಲ್ಲಿ ನಡೆದ ಯುದ್ಧದಲ್ಲಿ ವಿಜಯ ಸಾಧಿಸಿದ ಶತಮಾನೋತ್ಸವದ ಸ್ಮರಣಾರ್ಥ ಇದೇ 23ರಂದು ಮೈಸೂರಿನಲ್ಲಿ, ಇಸ್ರೇಲ್ ಪರವಾಗಿ ನಡೆದ ಯುದ್ಧದಲ್ಲಿ ಭಾಗಿಯಾಗಿದ್ದ ಮೈಸೂರು ಸಂಸ್ಥಾನದ ಕೆಲ ಸೈನಿಕರ ಕುಟುಂಬದವರನ್ನು ಸನ್ಮಾನಿಸಲಾಗುವುದು ಎಂದರು. ಮೈಸೂರು ಸಂಸ್ಥಾನದ ಒಡೆಯರ್, ಜೋಧ್ ಪುರ ಸಂಸ್ಥಾನ ಹಾಗೂ ಹೈದ್ರಾಬಾದ್ ಲಾನ್ಸರ್
ಜೊತೆಗೂಡಿ ಇಸ್ರೇಲ್ನ ಹೈಫಾದಲ್ಲಿ ನಡೆದ ಮಹಾಯುದ್ಧದಲ್ಲಿ ಆಟೋಮಾನ್ ಟರ್ಕರ ವಿರುದ್ಧ ಜಯಗಳಿಸಿದ ಶತಮಾನೋತ್ಸವದ ಸ್ಮರಣಾರ್ಥ ಈ
ಕಾರ್ಯಕ್ರಮ ಆಯೋಜಿಸಲಾಗಿದೆ. ಮೈಸೂರು ಸಂಸ್ಥಾನದಲ್ಲಿ ಇದ್ದ ನಾಲ್ಕು ಸಾವಿರ ಸೈನಿಕರ ಪೈಕಿ ಸುಮಾರು 2,500 ರಿಂದ 3 ಸಾವಿರ ಸೈನಿಕರು ಹೈಫಾ ಯುದ್ಧದಲ್ಲಿ ಭಾಗಿಯಾಗಿದ್ದರ ಮಾಹಿತಿ ಇದೆ. ಯುದ್ಧ ವಿಜಯದ ಸಂಕೇತವಾಗಿ ಹೈಫಾದಲ್ಲಿ ಇಂದಿನ ಮೈಸೂರು ಸಂಸ್ಥಾನದ ಗಂಡಭೇರುಂಡ ಲಾಂಛನವನ್ನು ಇರಿಸಲಾಗಿದೆ ಎಂದರು.
ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ. ಸದ್ಯ ಧಾರ್ಮಿಕ, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿ ದ್ದೇನೆ. ಯಾವ ರಾಜಕೀಯ ಪಕ್ಷದ ನಾಯಕರೂ ನನ್ನೊಂದಿಗೆ ಮಾತನಾಡಿಲ್ಲ. ನಾನೂ ಯಾವುದೇ ರಾಜಕೀಯ ನಾಯಕರೊಂದಿಗೆ ಮಾತನಾಡಿಲ್ಲ.
● ಯದುವೀರ್ ಕೃಷ್ಣದತ್ತ ಒಡೆಯರ್ ರಾಜವಂಶಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
BSY: ಬಿಎಸ್ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.