ಅ.10 -19: ಮಂಗಳೂರು ದಸರಾ, ಕುದ್ರೋಳಿ: ಪೂರ್ವಭಾವಿ ಸಭೆ
Team Udayavani, Sep 19, 2018, 10:53 AM IST
ಮಹಾನಗರ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ‘ಮಂಗಳೂರು ದಸರಾ ಮಹೋತ್ಸವ’ ಅ. 10ರಿಂದ 19ರವರೆಗೆ ಜರ ಗಲಿದ್ದು, ಇದರ ಅಂಗವಾಗಿ ಪೂರ್ವಭಾವಿ ಸಭೆ ಶ್ರೀ ಗೋಕರ್ಣನಾಥ ಸಭಾಂಗಣದಲ್ಲಿ ನಡೆಯಿತು.
ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಅಧ್ಯಕ್ಷತೆ ವಹಿಸಿ, ಈ ಬಾರಿಯೂ ಮಂಗಳೂರು ದಸರಾವನ್ನು ವೈಭವದಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಉತ್ಸವಕ್ಕೆ ಬೀದಿ ದೀಪಾಲಂಕಾರ ನಡೆಸುವ ಕಂಟ್ರ್ಯಾಕ್ಟ್ ದಾರರ ಸಭೆ ಕರೆದು ಚರ್ಚೆ ನಡೆಸಲಾಗಿದೆ. ಈ ಬಾರಿ ವಿದ್ಯುದ್ದೀಪಾಲಂಕಾರವನ್ನು ಮತ್ತಷ್ಟು ವಿಭಿನ್ನ, ವೈಭವವಾಗಿ ರಚಿಸುವಂತೆ ಸೂಚನೆ ನೀಡಲಾಗಿದೆ. ವಿಶೇಷ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಇದನ್ನು ಪ್ರಕಟಿಸಲಾಗುವುದು ಎಂದರು.
ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, 10ಕ್ಕೂ ಅಧಿಕ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿ ತಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಲಿದೆ. ದಸರಾ ಮೆರವಣಿಗೆ ವೈಭವವನ್ನು ಹೆಚ್ಚಿಸುವ ಟ್ಯಾಬ್ಲೋ (ಸ್ತಬ್ಧಚಿತ್ರ)ಗಳು ಬಗ್ಗೆ ಚರ್ಚಿಸಲು ಟ್ಯಾಬ್ಲೋ ಮುಖ್ಯಸ್ಥರ ಸಭೆ ಕರೆಯಲಾಗುವುದು. ಈ ಸಂದರ್ಭ ಮೆರವಣಿಗೆಯನ್ನು ಸಾಂಗವಾಗಿ ನಡೆಸಲು ಕೆಲವೊಂದು ಸೂಚನೆ ನೀಡಲಾಗುವುದು ಎಂದರು.
ದಸರಾ ಸಂದರ್ಭ ಪೂಜಿಸಲ್ಪಡುವ ಮೂರ್ತಿಗಳ ಸಿದ್ಧತಾ ಕಾರ್ಯಗಳು ಸೆ. 13ರಿಂದ ಆರಂಭಗೊಂಡಿದೆ. ದಸರಾ ಮಹೋತ್ಸವ ನಡೆಯುವ ದರ್ಬಾರು ಮಂಟಪವನ್ನು ಈ ಬಾರಿಯೂ ವಿಭಿನ್ನವಾಗಿ ಅಲಂಕರಿಸಲಾಗುವುದು ಎಂದರು.
ಆಡಳಿತ ಸಮಿತಿ ಸದಸ್ಯ ಶೇಖರ್ ಪೂಜಾರಿ, ದೇವೇಂದ್ರ ಪೂಜಾರಿ, ಮಾಧವ ಸುವರ್ಣ, ರವಿಶಂಕರ್ ಮಿಜಾರು, ಡಿ.ಡಿ. ಕಟ್ಟೆಮಾರ್, ಡಾ| ಅನಸೂಯಾ, ಡಾ| ಬಿ.ಜಿ. ಸುವರ್ಣ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಪಡು, ಯುವವಾಹಿನಿ ಅಧ್ಯಕ್ಷ ಜಯಂತ್ ನಡುಬೈಲ್, ಕಾರ್ಪೊರೇಟರ್‌ಗಳಾದ ರಾಧಾಕೃಷ್ಣ, ದೀಪಕ್ ಪೂಜಾರಿ, ನೀಲಾಕ್ಷ ಕರ್ಕೇರ, ಚಿತ್ತರಂಜನ್ ಗರೋಡಿ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.