ಹೈಫಾ ಯುದ್ಧದ ಸೈನಿಕ ಕುಟುಂಬಗಳಿಗೆ ಸನ್ಮಾನ
Team Udayavani, Sep 19, 2018, 11:53 AM IST
ಮೈಸೂರು: ಇಸ್ರೇಲ್‌ನ ಹೈಫಾದಲ್ಲಿ ನಡೆದ ಯುದ್ಧದಲ್ಲಿ 1918ರ ಸೆ.23ರಂದು ವಿಜಯ ಸಾಧಿಸಿದ ಶತಮಾನೋತ್ಸವದ ಸ್ಮರಣಾರ್ಥ 23ರಂದು ಮೈಸೂರಿನಲ್ಲಿ, ಇಸ್ರೇಲ್ ಪರವಾಗಿ ನಡೆದ ಯುದ್ಧದಲ್ಲಿ ಭಾಗಿಯಾಗಿದ್ದ ಮೈಸೂರು ಸಂಸ್ಥಾನದ ಕೆಲ ಸೈನಿಕರ ಕುಟುಂಬದವರನ್ನು ಸನ್ಮಾನಿಸಲಾಗುವುದು ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಸಂಸ್ಥಾನದ ಒಡೆಯರ್, ಜೋಧ್‌ಪುರ ಸಂಸ್ಥಾನ ಹಾಗೂ ಹೈದ್ರಾಬಾದ್ ಲಾನ್ಸರ್ ಜೊತೆಗೂಡಿ ಇಸ್ರೇಲ್‌ನ ಹೈಫಾದಲ್ಲಿ ನಡೆದ ಮಹಾಯುದ್ಧದಲ್ಲಿ ಆಟೋಮಾನ್ ಟರ್ಕರ ವಿರುದ್ಧ ಜಯಗಳಿಸಿದ ಶತಮಾನೋತ್ಸವದ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೈಸೂರು ಸಂಸ್ಥಾನದಲ್ಲಿ ಇದ್ದ ನಾಲ್ಕು ಸಾವಿರ ಸೈನಿಕರ ಪೈಕಿ ಸುಮಾರು 2500ರಿಂದ 3 ಸಾವಿರ ಸೈನಿಕರು ಹೈಫಾ ಯುದ್ಧದಲ್ಲಿ ಭಾಗಿಯಾಗಿದ್ದ ಮಾಹಿತಿ ಇದೆ. ಯುದ್ಧ ವಿಜಯದ ಸಂಕೇತವಾಗಿ ಹೈಫಾದಲ್ಲಿ ಇಂದಿನ ಮೈಸೂರು ಸಂಸ್ಥಾನದ ಗಂಡಭೇರುಂಡ ಲಾಂಛನವನ್ನು ಇರಿಸಲಾಗಿದೆ ಎಂದರು.
ಅರಸು ಸಂಘದಿಂದ ಮೈಸೂರಿನಲ್ಲಿ ಹೈಫಾ ಯುದ್ಧದಲ್ಲಿ ಭಾಗಿಯಾಗಿದ್ದ ಸೈನಿಕರ ಐದು ಕುಟುಂಬದವರ ಬಗ್ಗೆ ಮಾಹಿತಿ ದೊರೆತಿದ್ದು, ಸೆ.23ರಂದು ಸಂಜೆ 6 ಗಂಟೆಗೆ ನಗರದ ರಾಜೇಂದ್ರ ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದು, ಸಂಸದರಾದ ಆರ್.ಧ್ರುವನಾರಾಯಣ, ಪ್ರತಾಪ್ ಸಿಂಹ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಜೊತೆಗೆ ಈ ಮಹಾಯುದ್ಧದ ಇತಿಹಾಸವನ್ನು ಪ್ರತಿಯೊಬ್ಬರಿಗೂ ತಿಳಿಸಲು ಸ್ವಯಂ ಸೇವಕರು ಶಾಲೆಗಳಲ್ಲಿ ಕಥೆ ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಪ್ರಬಂಧ, ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗುವುದು ಎಂದು ಹೇಳಿದರು. ಬೆಂಗಳೂರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲೇ ಯುದ್ಧ ಸ್ಮಾರಕ ಮಾಡಲಾಗಿದೆ.
ಅದೇ ರೀತಿಯಲ್ಲಿ ಮೈಸೂರಿನಲ್ಲೂ ಯುದ್ಧ ಸ್ಮಾರಕ ನಿರ್ಮಿಸುವಂತೆ ಹೈಫಾ ಯುದ್ಧದ ವಿಶೇಷತೆಯ ಮಾಹಿತಿಯನ್ನು ಸರ್ಕಾರಕ್ಕೆ ನೀಡಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಹೈಫಾ ಶತಮಾನೋತ್ಸವ ಆಚರಣಾ ಸಮಿತಿ ಕಾರ್ಯದರ್ಶಿ ಹರೀಶ್ ಶೆಣೈ, ವಿಶ್ವನಾಥ್ ಉಪಸ್ಥಿತರಿದ್ದರು.
ಅರಮನೆಯಲ್ಲಿ ದಸರಾ ಸಿದ್ಧತೆಗಳು ಪ್ರತಿವರ್ಷದಂತೆಯೇ ನಡೆದಿದೆ. ಅ.10ರಂದು ನವರಾತ್ರಿ ಪ್ರಾರಂಭವಾಗಿ ಆ.19ರಂದು ವಿಜಯದಶಮಿ ಮೆರವಣಿಗೆಯೊಂದಿಗೆ ಮುಕ್ತಾಯಗೊಳ್ಳಲಿದ್ದು, ಪದ್ಧತಿ ಪ್ರಕಾರವೇ ದಸರಾ ಆಚರಣೆ ನಡೆಯಲಿದೆ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಅರಮನೆಯ ದಸರಾ ಆಚರಣೆ ಪದ್ಧತಿ ಪ್ರಕಾರವೇ ನಡೆಯಲಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಅಂಬಾರಿ ವಿವಾದದ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ವಿಚಾರವನ್ನು ಅಮ್ಮ ನೋಡಿಕೊಳ್ಳುತ್ತಾರೆ ಎಂದರು.
ತಮ್ಮ ಪತ್ನಿ ತ್ರಿಷಿಕಾ ಕುಮಾರಿ ಅವರಿಗೆ ಅರಣ್ಯ, ಆದಿವಾಸಿಗಳ ಬಗ್ಗೆ ವಿಶೇಷ ಆಸಕ್ತಿ. ಹೀಗಾಗಿ ಗಿರಿಜನರ ಜೀವನ ಪದ್ಧತಿ ಕುರಿತು ಅಧ್ಯಯನ ನಡೆಸಲು ಆಸಕ್ತಿವಹಿಸಿದ್ದಾರೆ. ಪಿಎಚ್.ಡಿಗೆ ಇನ್ನೂ ಹೆಸರು ನೋಂದಣಿ ಮಾಡಿಸಿಲ್ಲ ಎಂದು ತಿಳಿಸಿದರು.
ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ. ಸದ್ಯ ಧಾರ್ಮಿಕ, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಯಾವ ರಾಜಕೀಯ ಪಕ್ಷದ ನಾಯಕರೂ ನನ್ನೊಂದಿಗೆ ಮಾತನಾಡಿಲ್ಲ. ನಾನೂ ಯಾವ ರಾಜಕೀಯ ನಾಯಕರೊಂದಿಗೆ ಮಾತನಾಡಿಲ್ಲ.
-ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Ullala Resort: ಮೃತ ಯುವತಿಯ ಕುಟುಂಬಸ್ಥರ ಆಕ್ರಂದನ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.