ತುಳುನಾಡ ಐಸಿರಿ ವಾಪಿ: ಸ್ನೇಹ ಸಮ್ಮಿಲನ
Team Udayavani, Sep 19, 2018, 4:33 PM IST
ವಾಪಿ: ವಾಪಿ-ವಲ್ಸಾಡ್-ದಮನ್-ಸಿಲ್ವಸಾ ಮತ್ತು ಉಂಬೆರ್ ಗಾಂವ್‌ನಲ್ಲಿರುವ ನೆಲೆಸಿರುವ ತುಳು-ಕನ್ನಡಿಗರ ಪ್ರತಿಷ್ಠಿತ ತುಳುನಾಡ ಐಸಿರಿ ವಾಪಿ ಇದರ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸೆ. 2 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ದಮನ್‌ನ ಹೊಟೇಲ್ ಹನಿಗಾರ್ಡನ್ ಸಭಾಂಗಣದಲ್ಲಿ ನಡೆಯಿತು.
ಸುಮಾರು 300 ಕ್ಕೂ ಅಧಿಕ ತುಳು-ಕನ್ನಡಿಗರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ಪದಾಧಿಕಾರಿಗಳು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಗೌರವಾಧ್ಯಕ್ಷ ಸದಾಶಿವ ಪೂಜಾರಿ ಮತ್ತು ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ನವೀನ್ ಶೆಟ್ಟಿ, ಕಾರ್ಯದರ್ಶಿ ಉದಯ ಶೆಟ್ಟಿ, ಕೋಶಾಧಿಕಾರಿ ಪ್ರದೀಪ್ ಪೂಜಾರಿ, ಜತೆ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಜತೆ ಕೋಶಾಧಿಕಾರಿ ಕಿರಣ್ ಅಂಚನ್, ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.
ಗಣ್ಯ ಉದ್ಯಮಿಗಳಾದ ಅರುಣ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ದಮನ್, ರಾಧಾಕೃಷ್ಣ ನಾಯರ್ ಉಮರ್‌ಗಾಂವ್, ಮಾಲ್ಕಮ್ ಪಿರೇರಾ, ಬಾಲಕೃಷ್ಣ ಶೆಟ್ಟಿ, ಮಹೇಶ್ ಶೆಟ್ಟಿ, ದಿವಾಕರ ಶೆಟ್ಟಿ, ಶಿವಾನಂದ ಪೂಜಾರಿ ಸಿಲ್ವಾಸ್, ದಿವಾಕರ ಶೆಟ್ಟಿ, ಹರೀಶ್ ಶೆಟ್ಟಿ ವಲ್ಸಾಡ್, ಮಹಿಳಾ ಗಣ್ಯರುಗಳಾದ ವಿಮಲಾ ಶೆಟ್ಟಿ ಮಾಸಾಡ್, ರಜನಿ ಶೆಟ್ಟಿ, ಅರುಧಂತಿ ಶೆಟ್ಟಿ, ಶಾಲಿನಿ ಶೆಟ್ಟಿ ಹಾಗೂ ಸೃಷ್ಟಿತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ತಾರಾ ಶೆಟ್ಟಿ ಮತ್ತು ಪೂರ್ಣಿಮಾ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಗೌರವಾಧ್ಯಕ್ಷ ಸದಾಶಿವ ಪೂಜಾರಿ ಅವರು ಮಾತನಾಡಿ ಶುಭಹಾರೈಸಿದರು. ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಉದಯ ಶೆಟ್ಟಿ ಅವರು ತುಳುನಾಡ-ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳನ್ನು ತಿಳಿಸಿ, ಸಂಸ್ಥೆಯ ಉದ್ಧೇಶವನ್ನ ವಿವರಿಸಿದರು.
ಉಪಾಧ್ಯಕ್ಷ ನವೀನ್ ಶೆಟ್ಟಿ ಶೆಟ್ಟಿ ಅವರು ಮಾತನಾಡಿ, ತುಳು ಭಾಷೆ ಹಾಗೂ ತುಳುನಾಡಿನ ವೀರರ ತ್ಯಾಗ ಮನೋಭಾವನೆಯನ್ನು ವಿವರಿಸಿದರು. ತುಳು ಐಸಿರಿ ಸಂಸ್ಥೆಯ ಹಿತಚಿಂತಕರಾದ ಮಾಲ್ಕಾಮ್ ಪಿರೇರಾ ಮತ್ತು ರಾಧಾಕೃಷ್ಣ ಕೆ. ನಾಯರ್ ಅವರು ತುಳು ಭಾಷೆ, ಸಂಸ್ಕೃತಿಯನ್ನು ಯುವಪೀಳಿಗೆಗೆ ಯಾವ ರೀತಿಯಲ್ಲಿ ಅರಿವು ಮೂಡಿಸಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದರು. ಸುಕೇಶ್ ಶೆಟ್ಟಿ ವಂದಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಶ್ರೀಧರ ಶೆಟ್ಟಿ ಮತ್ತು ಜನಾರ್ಧನ ಮೇಲಂತ ಅವರನ್ನು ಅಭಿನಂದಿಸಲಾಯಿತು.
ರಜನಿ ಶೆಟ್ಟಿ ಮತ್ತು ಅರುಂಧತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ತೆಂಗಿನ ಕಾಯಿ ಕಟ್ಟುವ ಸ್ಪರ್ಧೆ ನಡೆಯಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಮಹಿಳಾ ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸದಸ್ಯ ಬಾಂಧವರು, ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.