ಎರಡು ಅಣುಬಾಂಬುಗಳಿಂದ ಬದುಕುಳಿದ ಸುಟೋಮು
Team Udayavani, Sep 20, 2018, 6:00 AM IST
ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ.
1945ರಲ್ಲಿ ಅಮೆರಿಕ ಹಿರೋಶಿಮಾ ಮೇಲೆ ಅಣುಬಾಂಬು ಹಾಕಿದಾಗ ಆ ದಾಳಿಯಿಂದ ಅದು ಹೇಗೋ ಬಚಾವಾದವರಲ್ಲಿ ಸುಟೋಮು ಯಮಗುಚಿ ಕೂಡಾ ಒಬ್ಬರು. ಅವರ ಕಿವಿ ಮತ್ತು ಕಣ್ಣುಗಳು ಘಾಸಿಗೊಂಡವು. ಗಾಯಗೊಂಡ ಸುಟೋಮು ಅವರು ಆ ಸ್ಥಿತಿಯಲ್ಲೇ ತಮ್ಮ ಹುಟ್ಟೂರಿಗೆ ರೈಲು ಹತ್ತಿದರು. ಅವರ ಹುಟ್ಟೂರು ನಾಗಸಾಕಿ ಪಟ್ಟಣವಾಗಿತ್ತು. ಹಿರೋಷಿಮಾ ಮೇಲೆ ಅಣುಬಾಂಬು ದಾಳಿ ನಡೆಸಿದ ಎರಡು ದಿನಗಳ ನಂತರ ಅಮೆರಿಕ, ನಾಗಸಾಕಿ ಪಟ್ಟಣದ ಮೇಲೆ ಅಣುಬಾಂಬು ಹಾಕಿತು. ಅದೃಷ್ಟವಶಾತ್ ಸುಟೋಮು ಅವರು ಆ ದಾಳಿಯಲ್ಲೂ ಬದುಕುಳಿದರು. ಅವರನ್ನು ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದವು. ಅನೇಕ ಸಾಕ್ಷ್ಯಚಿತ್ರಗಳು ಅವರ ಕತೆಯನ್ನು ಜಗತ್ತಿಗೆ ಸಾರಿದವು. ಜಗತ್ತಿನಾದ್ಯಂತ ಶಾಂತಿ ಪರ ಹೋರಾಟ ನಡೆದಾಗಲೆಲ್ಲ ಹೋರಾಟಗಾರರು ನಿಶ್ಯಸ್ತ್ರೀಕರಣದ ರಾಯಭಾರಿಯಾಗಿ ಅವರನ್ನೇ ಉದಾಹರಿಸುತ್ತಾರೆ. ಸುಟೋಮು ತಮ್ಮ ಕೊನೆಗಾಲವನ್ನು ನಾಗಸಾಕಿಯಲ್ಲೇ ಕಳೆದರು. 2010ರಲ್ಲಿ ನಿಧನ ಹೊಂದಿದಾಗ ಅವರಿಗೆ 93 ವರ್ಷ ವಯಸ್ಸಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.