ವೇತನದಲ್ಲಿ ಮೋಸ: ಇಎಸ್‌ಐಸಿ ಕಾರ್ಮಿಕರ ಆಕ್ರೋಶ
Team Udayavani, Sep 20, 2018, 10:32 AM IST
ಕಲಬುರಗಿ: ಇಎಸ್‌ಐಸಿ ಆಸ್ಪತ್ರೆಯಲ್ಲಿನ ಹೌಸಿಂಗ್, ಕೀಪಿಂಗ್ ಕೆಲಸಗಾರರಿಗೆ ವೇತನದಲ್ಲಿ ಮೋಸ ಮಾಡಲಾಗುತ್ತಿದ್ದು,
ಕೂಡಲೇ ಸಂಬಂಧಿ ಸಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ದಲಿತ ಸೇನೆ ನೇತೃತ್ವದಲ್ಲಿ
ಕಾರ್ಮಿಕರು ಇಎಸ್‌ಐಸಿ ಆಸ್ಪತ್ರೆ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಪ್ರತಿಭಟನೆಕಾರರು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿ, ಮ್ಯಾನ್ ಪವರ್ ಏಜೆನ್ಸಿ ಮೂಲಕ ಕೆಲಸ ಮಾಡುತ್ತಿರುವ
ಕಾರ್ಮಿಕರು ಟೆಂಡರ್ ಪಡೆದ ಏಜೆನ್ಸಿಗಳ ದಬ್ಟಾಳಿಕೆಗೆ ಒಳಗಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು
ಆರೋಪಿಸಿದರು.
ಮ್ಯಾನ್ ಪವರ್ ಏಜೆನ್ಸಿ ಗುಲಾಮಗಿರಿಗೆ ಬಗ್ಗದ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುತ್ತಿವೆ. ವೇತನದಲ್ಲಿ
ಮೋಸ ಮಾಡಿ ಕಿರುಕುಳ ನೀಡುತ್ತಿವೆ. ಇಂತಹ ಸಂಕಷ್ಟಕ್ಕೆ ಇಎಸ್‌ಐಸಿಯ ನೂರಾರು ಕಾರ್ಮಿಕರು ಈಡಾಗಿದ್ದಾರೆ
ಎಂದರು.
ಇಎಸ್‌ಐಸಿ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಿಂದ ವಿವಿಧ ವಿಭಾಗಗಳಲ್ಲಿ 192 ಜನ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಏಜೆನ್ಸಿಗಳ ಅಡಿಯಲ್ಲಿ ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದಾರೆ. ಮುಂಬೈ ಮೂಲದ ಓರಿಯಂಟಲ್ ಪೆಸ್ಸಾಲಿಟಿ ಎಂಬ ಹೆಸರಿನ ಮ್ಯಾನ್ ಪವರ್ ಏಜೆನ್ಸಿ ಟೆಂಡರ್ ಪಡೆದು, ಈ ಹಿಂದೆ
ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಕಾರ್ಮಿಕರನ್ನು ಯಥಾವತ್ತಾಗಿ ಮುಂದುವರಿಸಿಕೊಂಡು ಬಂದಿದೆ ಎಂದು ವಿವರಿಸಿದರು.
ಪ್ರತಿ ಕಾರ್ಮಿಕರ ವೇತನ ಮಾಸಿಕ 12024 ರೂ. ಆಗಿದ್ದು, ಅದರಲ್ಲಿ ಭವಿಷ್ಯನಿ ಧಿಗಾಗಿ 1441ರೂ., ಇಎಸ್
ಐಸಿಗಾಗಿ 12 ರೂ., ಸಮವಸ್ತ್ರಗಳಿಗಾಗಿ 125 ರೂ. ಸೇರಿ ಒಟ್ಟು 1789ರೂ.ಗಳನ್ನು ಕಡಿತಗೊಳಿಸಲಾಗುತ್ತಿದೆ. ಇದು
ಏಜೆನ್ಸಿಯ ಮೋಸವಾಗಿದ್ದು, ಕಳೆದ ಜೂನ್‌ನಲ್ಲಿ ಈ ಅಕ್ರಮ ಬಯಲಾಗಿದೆ ಎಂದು ಆರೋಪಿಸಿದರು.
ಏಜೆನ್ಸಿ ವ್ಯವಸ್ಥಾಪಕ ಛತ್ರಪತಿ ಚವ್ಹಾಣ, ಶಿವಶರಣಪ್ಪ ಮೂಲಗೆ ಅವರನ್ನು ಕೇಳಿದರೆ ಅವರು ಬೇಜವಾಬ್ದಾರಿಯಿಂದ
ಮಾತನಾಡುತ್ತಾರೆ. ಏನಾದರೂ ಹೆಚ್ಚು ಕಡಿಮೆ ಆದಲ್ಲಿ ಓಡಿಸುವುದಾಗಿ ಬೆದರಿಕೆ ಹಾಕುತ್ತಾರೆ. ವ್ಯವಸ್ಥಾಪಕ
ನಿರ್ದೇಶಕ ನವೀನ್ ಅವರು ದುರ್ವರ್ತನೆ ತೋರಿದ್ದಾರೆ.
ಈ ಕುರಿತು ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ದರಿಂದ ಏಜೆನ್ಸಿ ವಿರುದ್ಧ ಪ್ರಕರಣ
ದಾಖಲಿಸಿ, ವೇತನದಲ್ಲಿ ಆಗುತ್ತಿರುವ ಮೋಸ ತಡೆಯಬೇಕು ಹಾಗೂ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು. ಧರಣಿಯಲ್ಲಿ ದಲಿತ ಸೇನೆ ಡಿ.ಕೆ. ಮದನಕರ್, ಪಂಚಶೀಲ ಚಾಂಬಾಳ, ಮೂಲಗೆ ಹಾಗೂ ಇತರ ಕಾರ್ಮಿಕರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.