ಶಿಥಿಲಾವಸ್ಥೆಯಲ್ಲಿವೆ ಕೃಷಿ ಇಲಾಖೆ ಸಂಬಂಧಿತ ಕಟ್ಟಡಗಳು


Team Udayavani, Sep 20, 2018, 10:52 AM IST

20-sepctember-3.jpg

ಬೆಳ್ತಂಗಡಿ: ತಾಲೂಕಿನ ಕೃಷಿ ಇಲಾಖೆಗೆ ಬೆಳ್ತಂಗಡಿ ನಗರದ ಸನಿಹದಲ್ಲೇ ವಿಸ್ತಾರವಾದ ಸ್ಥಳವಿದ್ದು, ಪ್ರಸ್ತುತ ಇಲ್ಲಿರುವ ಕೆಲವು ಶಿಥಿಲಾವಸ್ಥೆಯ ಕಟ್ಟಡಗಳು ಉಪಯೋಗಿಸಲಾಗದೇ ಇರುವ ಸ್ಥಿತಿಗೆ ತಲುಪಿವೆ. ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯದ ಮುಂದೆಯೇ ಈ ಕಟ್ಟಡಗಳಿದ್ದು, ಕನಿಷ್ಠ ಅವುಗಳನ್ನು ತೆರವುಗೊಳಿಸುವುದಕ್ಕಾದರೂ ಇಲಾಖೆ ಮನಸ್ಸು ಮಾಡಬೇಕಿದೆ.

ಈ ಕಟ್ಟಡವನ್ನು ಪೊದೆಗಳು ತುಂಬಿಕೊಂಡಿದ್ದು, ಸನಿಹದಲ್ಲೇ ಸಹಕಾರಿ ಸಿಬಂದಿಯ ಮನೆಗಳಿವೆ. ಹೀಗಾಗಿ ಅಲ್ಲಿಗೆ ವಿಷಜಂತುಗಳು ಆಗಮಿಸುವ ಭಯವನ್ನು ದೂರ ಮಾಡುವ ನಿಟ್ಟಿನಲ್ಲಾದರೂ ಅವುಗಳಿಗೆ ಕಾಯಕಲ್ಪ ಕಲ್ಪಿಸಬೇಕಿದೆ. ಕೃಷಿಯಂತ್ರಧಾರೆ ಇರುವ ಕಟ್ಟಡದ ಒಂದು ಬದಿಯೂ ಶಿಥಿಲಾವಸ್ಥೆಗೆ ತಲುಪಿದ್ದು, ಕನಿಷ್ಠ ಅದನ್ನಾದರೂ ದುರಸ್ತಿ ಮಾಡುವುದಕ್ಕೆ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.

ಪ್ರಸ್ತುತ ಆ ಕಟ್ಟಡಗಳ ಅವ್ಯವಸ್ಥೆ ಗಮನಿಸುವಾಗ ಇಲ್ಲಿ ಕೃಷಿ ಇಲಾಖೆಯ ಅಸ್ತಿತ್ವದಲ್ಲಿದೆಯೇ ಸಂಶಯ ಮೂಡುವ ಸ್ಥಿತಿಗೆ ತಲುಪಿದೆ. ಆದರೆ ಕೃಷಿ ಇಲಾಖೆಯ ಕಚೇರಿ ಮತ್ತೂಂದು ಸ್ಥಳದಲ್ಲಿರುವ ಕಾರಣ ಅದು ಅಧಿಕಾರಿಗಳ ಗಮನಕ್ಕೆ ಬಂದಿರಲಿಕ್ಕಿಲ್ಲ. ಕಳೆದ ಆ. 21ರಂದು ಕೃಷಿ ಸಚಿವರು ಅಲ್ಲಿಗೆ ಭೇಟಿ ನೀಡಿದ ಬಳಿಕವೂ ಆ ಕಟ್ಟಡಗಳು ಹಾಗೇ ಇವೆ.

ದುರಸ್ತಿ ಕಷ್ಟ ಸಾಧ್ಯ
ಹಂಚಿನ ಹಳೆಯ ಕಟ್ಟಡಗಳು ಇದಾಗಿದ್ದು, ಅವುಗಳ ದುರಸ್ತಿ ಕಷ್ಟಸಾಧ್ಯ. ಅದರ ಮೇಲ್ಛಾವಣಿ ಸಂಪೂರ್ಣ ಹೋಗಿದ್ದು, ಪ್ರಸ್ತುತ ಗೋಡೆಗಳ ಅವಶೇಷಗಳು ಉಳಿದಿವೆ. ಅವುಗಳನ್ನು ದುರಸ್ತಿ ಮಾಡಲು ಹೋದರೆ ಹೊಸ ಕಟ್ಟಡ ನಿರ್ಮಿಸಿದಷ್ಟೇ ಖರ್ಚು ತಗಲಬಹುದು. ಹೀಗಾಗಿ ಅವುಗಳನ್ನು ಸಂಪೂರ್ಣ ತೆಗೆದರೆ ಅಲ್ಲಿನ ಪರಿಸರವಾದರೂ ಸ್ವಲ್ಪ ಸ್ಪಷ್ಟವಾಗಬಹುದು.

ಒಂದು ವೇಳೆ ದುರಸ್ತಿ ಮಾಡಿ ಉಪಯೋಗಿಸದೇ ಬಿಟ್ಟರೆ ಮತ್ತದೇ ಸ್ಥಿತಿಗೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಪರಿಸರ ಸ್ವತ್ಛತೆ ದೃಷ್ಟಿಯಿಂದ ಅಲ್ಲಿನ ಪೊದೆಗಳನ್ನು ತೆಗೆದು ಸಮತಟ್ಟುಗೊಳಿಸಿದರೆ ಉತ್ತಮ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಜನಸಂಚಾರವಿಲ್ಲದ ಕಾರಣ ಶಿಥಿಲಾವಸ್ಥೆಯ ಕಟ್ಟಡಗಳು ಯಾರ ಗಮನಕ್ಕೂ ಬಂದಿಲ್ಲ.

ಸಿಬಂದಿ ಕೊರತೆ ಕಾರಣ
ಕೃಷಿ ಇಲಾಖೆಯಲ್ಲಿ ಸಿಬಂದಿ ಕೊರತೆ ಇರುವ ಕಾರಣ ಅವರಿಗಾಗಿ ಮೀಸಲಿಟ್ಟ ಮನೆಗಳು ಪಾಳು ಬೀಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಿರ್ವಹಣೆ ಇಲ್ಲದೇ ಇದ್ದಾಗ ಅದು ಶಿಥಿಲಗೊಳ್ಳುತ್ತದೆ. ಸದ್ಯಕ್ಕೆ ಬೆಳ್ತಂಗಡಿ ಕೃಷಿ ಇಲಾಖೆಯ ಸಿಬಂದಿ ಮನೆಯನ್ನು ಮನೆ ಬಾಡಿಗೆ ಭತ್ತೆ (ಎಚ್‌ಆರ್‌ಎ) ಪಡೆದು ಇತರ ಸರಕಾರಿ ನೌಕರರಿಗೆ ನೀಡಲಾಗಿದೆ. ಬೆಳ್ತಂಗಡಿ ನಗರದ ಸಮೀಪದಲ್ಲೇ ಆ ಕಟ್ಟಡಗಳು ಇರುವುದರಿಂದ ಪ್ರಸ್ತುತ ವಾಸ್ತವ್ಯವಿರುವ ಸಿಬಂದಿಗೆ ಅನುಕೂಲವಾಗುವ ಜತೆಗೆ ಕೃಷಿ ಇಲಾಖೆಗೂ ತಮ್ಮ ಕಟ್ಟಡಗಳು ನಿರ್ವಹಣೆಯಾದಂತಾಗುತ್ತದೆ. ಇಲ್ಲದಿದ್ದಲ್ಲಿ ಇಲ್ಲಿರುವ ಇತರ ಕಟ್ಟಡಗಳಂತೆ ಅದೂ ಪಾಳು ಬಿದ್ದು, ಹಾಳಾಗಿ ಹೋಗುತ್ತಿತ್ತು.

ಎಂಜಿನಿಯರ್‌ ಮಾಹಿತಿಯಂತೆ ಮುಂದಿನ ಕ್ರಮ
ಎಂಜಿನಿಯರ್‌ಗಳ ಬಳಿ ಮಾಹಿತಿ ಕೇಳಿ ಅದನ್ನು ಉಪಯೋಗಿಸಲು ಸಾಧ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹಿಂದೆ ಅಗ್ರಿಕಲ್ಚರಲ್‌ ಸ್ಕೂಲ್‌ ಇರುವಾಗ ಆ ಕಟ್ಟಡದ ಅಗತ್ಯವಿತ್ತು. ಈಗ ಸಿಬಂದಿ ಕೊರತೆಯಿಂದ ಸಿಬಂದಿಯ ಮನೆಗಳನ್ನೂ ಇತರ ಇಲಾಖೆಗೆ ಬಾಡಿಗೆಗೆ ನೀಡಲಾಗಿದೆ.
– ಆ್ಯಂಟನಿ ಇಮ್ಯಾನುವೆಲ್‌
ಜಂಟಿ ಕೃಷಿ ನಿರ್ದೇಶಕರು, ದ.ಕ.

ಟಾಪ್ ನ್ಯೂಸ್

IPL 2024: Pant has the ambition to become India’s cricket captain: Parth Jindal

IPL 2024: ಭಾರತ ಕ್ರಿಕೆಟ್‌ ನಾಯಕನಾಗುವ ಉದ್ದೇಶ ಪಂತ್‌ ಗಿದೆ: ಜಿಂದಾಲ್‌

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

BGT 2024: Good news for Team India; A key player back in the team

BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

9-kottigehara

Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ

IPL 2024: Pant has the ambition to become India’s cricket captain: Parth Jindal

IPL 2024: ಭಾರತ ಕ್ರಿಕೆಟ್‌ ನಾಯಕನಾಗುವ ಉದ್ದೇಶ ಪಂತ್‌ ಗಿದೆ: ಜಿಂದಾಲ್‌

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.