ಸಹ ನಿರ್ಮಾಪಕ ಜೈಲು ಪಾಲು
Team Udayavani, Sep 20, 2018, 10:53 AM IST
ಬೆಂಗಳೂರು: ಸಗಟು ವ್ಯಾಪಾರಿಗಳಿಗೆ ಅಕ್ಕಿ ಸರಬರಾಜು ಮಾಡುವ ವ್ಯವಹಾರದಲ್ಲಿ ನಷ್ಟವುಂಟಾಗಿದ್ದರಿಂದ ಚಲನಚಿತ್ರ
ನಿರ್ಮಾಣಕ್ಕಿಳಿದು, ಬಂಡವಾಳ ಹೊಂದಿಸಲು ಒಂದೇ ಮನೆಯ ದಾಖಲೆಗಳ ಕಲರ್ ಝೆರಾಕ್ಸ್ ಪ್ರತಿಗಳನ್ನು ನೀಡಿ ಬ್ಯಾಂಕ್ ಹಾಗೂ ಚಿಟ್ ಫಂಡ್‌ನಿಂದ 76 ಲಕ್ಷ ರೂ. ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ನಿರ್ಮಾಪಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
“ನೀರ್ ದೋಸೆ’ ಸಹ ನಿರ್ಮಾಪಕ ಹಾಗೂ “ಬ್ಯೂಟಿಫುಲ್ ಮನಸುಗಳು’ ನಿರ್ಮಾಪಕ ಎಸ್. ಪ್ರಸನ್ನ (43) ಬಂಧಿತ ಆರೋಪಿ. ಸಿಂಡಿಕೇಟ್ ಬ್ಯಾಂಕ್‌ಗೆ ತನ್ನ ಎರಡಂತಸ್ತಿನ ಮನೆಯ ದಾಖಲೆಗಳ ಕಲರ್ ಝೆರಾಕ್ಸ್ ಪ್ರತಿಗಳನ್ನು ನೀಡಿ ಪಡೆದುಕೊಂಡ ಸಾಲದಲ್ಲಿ 17 ಲಕ್ಷ ರೂ. ವಾಪಾಸ್ ನೀಡದ ಆರೋಪ ಪ್ರಕರಣದಲ್ಲಿ ಆರೋಪಿ ಪ್ರಸನ್ನನನ್ನು ಬಂಧಿಸಲಾಗಿದೆ ಎಂದು ಶೇಷಾದ್ರಿಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ವಿಜಯನಗರದ ಸುಬ್ಬಣ್ಣ ಗಾರ್ಡನ್ ನಿವಾಸಿ ಪ್ರಸನ್ನ, ಕೆಂಪಾಪುರ ಹೊಸಹಳ್ಳಿ ಬಳಿಯಿರುವ ಎರಡಂತಸ್ತಿನ ಮನೆಯ
ದಾಖಲೆಗಳ ಕಲರ್ ಝೆರಾಕ್ಸ್ ಪ್ರತಿಗಳನ್ನು ನೀಡಿ ಶೇಷಾದ್ರಿಪುರಂನ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ 38 ಲಕ್ಷ ರೂ. ಸಾಲ ಪಡೆದು ಕಟ್ಟಿರಲಿಲ್ಲ. ಇದರಿಂದ ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ, ಆತ ನೀಡಿದ ದಾಖಲೆಗಳು ಅಸಲಿಯೋ ನಕಲಿಯೋ ಎಂದು ಖಚಿತಪಡಿಸಿಕೊಳ್ಳುವ ಸಲುವಾಗಿ ಜಮೀನಿನ ಇ.ಸಿ ತೆಗೆಸಿದಾಗ, ಅದೇ ದಾಖಲೆಗಳನ್ನು ನೀಡಿ ದೈವಜ್ಞ ಕೋ ಆಪರೇಟಿವ್ ಸೊಸೈಟಿಯಲ್ಲೂ ಸಾಲ ಪಡೆದಿರುವುದು ಗೊತ್ತಾಗಿದೆ. ಈ ಕುರಿತು ಪ್ರಸನ್ನ ಅವರನ್ನು ಪ್ರಶ್ನಿಸಿದಾಗ 17 ಲಕ್ಷ ರೂ. ಬ್ಯಾಂಕ್‌ಗೆ ಕಟ್ಟಿ, ಉಳಿದ 17 ಲಕ್ಷ ರೂ. ಮೊತ್ತದ ಚೆಕ್ ನೀಡಿದ್ದು, ಆ ಚೆಕ್ ಬೌನ್ಸ್ ಆಗಿದೆ.
ಹೀಗಾಗಿ ಬ್ಯಾಂಕ್ ಅಧಿಕಾರಿಗಳು ಪ್ರಸನ್ನ ವಿರುದ್ಧ ವಂಚನೆ ದೂರು ನೀಡಿದ್ದರು. ಆರೋಪಿ ಬ್ಯಾಂಕ್ ಹಾಗೂ ಚಿಟ್‌ಫಂಡ್
ಕಂಪನಿಗೆ ನಕಲಿ ದಾಖಲೆಗಳನ್ನು ನೀಡಿ 76 ಲಕ್ಷ ರೂ ಸಾಲ ಪಡೆದುಕೊಂಡಿದ್ದಾನೆ. ಸಾಲ ಪಡೆದ ಹಣವನ್ನೇ ಚಲನಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿರುವ ಸಾಧ್ಯತೆಯಿದೆ. ಸದ್ಯ, ಸಿಂಡಿಕೇಟ್ ಬ್ಯಾಂಕ್‌ನವರು ಮಾತ್ರವೇ ಆರೋಪಿ ವಿರುದ್ಧ
ದೂರು ನೀಡಿದ್ದು, ಇತರೆ ದೂರುಗಳು ಬಂದಿಲ್ಲ. ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು ಸಗಟು ವ್ಯಾಪಾರಿಗಳಿಗೆ ಅಕ್ಕಿ ಸರಬರಾಜು ಮಾಡುತ್ತಿದ್ದ ಆರೋಪಿ ಪ್ರಸನ್ನ, ನಷ್ಟ ಅನುಭವಿಸಿದ್ದ. ಹೀಗಾಗಿ ಚಿತ್ರರಂಗದಲ್ಲಿ ಹಣ ಹೂಡಿ ಲಾಭ ಗಳಿಸುವ ಯೋಜನೆ ಹಾಕಿಕೊಂಡು ತನ್ನ ಮನೆ ದಾಖಲೆಗಳನ್ನು ಅಡವಿಟ್ಟು 1 ಕೋಟಿ ರೂ. ಹಣ ಹೊಂದಿಸಲು ನಿರ್ಧರಿಸಿದ್ದ. ಬಳಿಕ, 2015ರಲ್ಲಿ ಮನೆಯ ದಾಖಲೆಗಳನ್ನು ಶೇಷಾದ್ರಿಪುರದ ದೈವಜ್ಞ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಡವಿಟ್ಟು 20 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾನೆ.
ನೀರ್‌ದೋಸೆ ಸಿನಿಮಾಗೆ ಹಣ 2015ರ ಡಿಸೆಂಬರ್‌ನಲ್ಲಿ ಜಮೀನಿನ ಕಲರ್ ಝೆರಾಕ್ಸ್ ಪ್ರತಿಗಳನ್ನು ಸಿಂಡಿಕೇಟ್ ಬ್ಯಾಂಕ್ ಶಾಖೆಗೆ ನೀಡಿ 38 ಲಕ್ಷ ರೂ., ಮಾರ್ಗದರ್ಶಿ ಚಿಟ್‌ಫಂಡ್‌ನಿಂದ 38 ಲಕ್ಷ ರೂ. ಸಾಲ ಪಡೆದು ವಂಚಿಸಿದ್ದಾನೆ. ಬ್ಯಾಂಕ್ ಹಾಗೂ ಚಿಟ್‌ಫಂಡ್‌ನಲ್ಲಿ ಸಾಲ ಪಡೆದ ಪ್ರಸನ್ನ, ಮೊದಲಿಗೆ ನಟ ಜಗ್ಗೇಶ್ ಅಭಿನಯದ ನೀರ್‌ದೋಸೆ ಚಿತ್ರಕ್ಕೆ ಸಹ ನಿರ್ಮಾಪಕನಾಗಿ ಬಂಡವಾಳ ಹೂಡಿದ್ದಾನೆ. ಈ ಚಿತ್ರ 2016ರಲ್ಲಿ ಬಿಡುಗಡೆಗೊಂಡು ತಕ್ಕಮಟ್ಟಿಗೆ ಲಾಭವೂ ಬಂದಿತ್ತು.
ನಂತರ 2017ರ ಜನವರಿಯಲ್ಲಿ ಬಿಡುಗಡೆಯಾದ ನೀನಾಸಂ ಸತೀಶ್ ಅಭಿನಯದ ಬ್ಯೂಟಿಫುಲ್ ಮನಸುಗಳು ಚಲನಚಿತ್ರ ನಿರ್ಮಾಣ ಮಾಡಿದ್ದು, ಮತ್ತೂಂದು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದ. ಆದರೆ ಹಣಕಾಸಿನ ಕೊರತೆಯಿಂದ ನಿಲ್ಲಿಸಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಹೊಸ ಸೇರ್ಪಡೆ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.