ಸತ್ಯ ಹರಿಶ್ಚಂದ್ರ – ಶೂರ್ಪನಖಾ ವಿವಾಹ ಮಕರಾಕ್ಷಕಾಳಗ 


Team Udayavani, Sep 21, 2018, 6:00 AM IST

z-5.jpg

ಬ್ರಾಮರೀ ಯಕ್ಷಮಿತ್ರರು ( ರಿ. ) ಮಂಗಳೂರು ಇದರ ತೃತೀಯ ವಾರ್ಷಿಕೋತ್ಸವದ ಅಂಗವಾಗಿ ಇತ್ತೀಚಿಗೆ ಮಂಗಳೂರಿನ ಪುರಭವನದಲ್ಲಿ ಜರಗಿದ ಯಕ್ಷಗಾನ ಆಖ್ಯಾನಗಳು ಹಲವು ವರ್ಷಗಳ ತನಕ ನೆನಪಲ್ಲುಳಿಯುವ ಉತ್ತಮ ಪ್ರಸ್ತುತಿಯ ಪ್ರದರ್ಶನ . ಸುಪ್ರಸಿದ್ಧ ಕಲಾವಿದರ ಸಂಯೋಜನೆಯೂ ಇದಕ್ಕೆ ಪೂರಕವಾಯಿತು . 

ಪ್ರಥಮ ಪ್ರಸಂಗ ಸತ್ಯ ಹರಿಶ್ಚಂದ್ರ ಚೆಂಡೆಯ ಝೇಂಕಾರಕ್ಕೆ ಅವಕಾಶವಿಲ್ಲದ , ಕರುಣರಸಕ್ಕೇ ಪ್ರಾಧಾನ್ಯ ಹೊಂದಿರುವ ಪ್ರಸಂಗ . ಹರಿಶ್ಚಂದ್ರನಾಗಿ ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆಯವರು ಭಾವ, ರಸ, ಅಭಿನಯ ಹಾಗೂ ಸಂಭಾಷಣೆಯ ಸಮಪಾಕದಲ್ಲಿ ಪೌರಾಣಿಕ ಲೋಕವನ್ನೇ ಸೃಷ್ಟಿಸಿದರು. ಹೆಂಡತಿ ಮಕ್ಕಳನ್ನು ಮಾರಾಟ ಮಾಡುವ ಹರಿಶ್ಚಂದ್ರನ ಸತ್ಯಬದ್ಧತೆ , ತನ್ನನ್ನೇ ಮಾರಾಟ ಮಾಡುವ ವಚನಬದ್ಧತೆ ಹಾಗೂ ತನ್ನ ಸ್ವಂತ ಮಗನ ಹೆಣವನ್ನೂ ಸುಡಲಾಗದ ಕರ್ತವ್ಯಬದ್ಧತೆಯನ್ನು ಸಮುಚಿತವಾಗಿ ಪ್ರಸ್ತುತಗೊಳಿಸಿದರು . ಚಂದ್ರಮತಿಯಾಗಿ ಶಶಿಕಾಂತ ಶೆಟ್ಟರದು ಭಾವಪೂರ್ಣ ಅಭಿನಯ . ಹೆಂಡತಿ ಎಂಬ ಮಮಕಾರಕ್ಕೊಳಗಾಗಿ ಸತ್ಯದ ದಾರಿ ಬಿಡಬೇಡಿ ಎಂದು ಪತಿಗೇ ಧರ್ಮಸೂಕ್ಷ್ಮ ನೆನಪಿಸಿ ಪತಿಗೆ ಸಹಕಾರಿಯಾಗಿರುವುದೇ ಸತೀಧರ್ಮ ಎಂಬುದನ್ನು ಸಮರ್ಥಿಸಿಕೊಂಡರು . ರೋಹಿತಾಶ್ವನಾಗಿ ಮುಚ್ಚಾರು ಲೋಕೇಶರದ್ದು ಮನ ಮಿಡಿಯುವ ಪಾತ್ರ ನಿರ್ವಹಣೆ . ನಕ್ಷತ್ರಿಕನ ಪಾತ್ರದಲ್ಲಿ ಸೀತಾರಾಮ ಕುಮಾರ್‌ ಕಟೀಲುರವರು ಪಾತ್ರದ ಚಿತ್ರಣ ಚೆನ್ನಾಗಿ ಅಥೆìçಸಿಕೊಂಡಿರುವುದು ಕಂಡು ಬಂತು . ಹಾಸ್ಯದ ಸಿಂಚನವಿದ್ದರೂ ಪೀಡಿಸುವ ನಕ್ಷತ್ರಿಕನಿಗೇ ಒತ್ತುಕೊಟ್ಟು ಪಾತ್ರೋಚಿತವಾದ ಕ್ರೌರ್ಯವನ್ನು ಬಿಂಬಿಸಿದರು. ವಿಶ್ವಾಮಿತ್ರನಾಗಿ ಅನುಭವೀ ಕಲಾವಿದರಾದ ರಾಧಾಕೃಷ್ಣ ನಾವುಡ , ಹರಿಶ್ಚಂದ್ರನ ಸಖನಾಗಿ ದಿನೇಶ ಕೋಡಪದವು ಶುದ್ಧ ಯಕ್ಷಗಾನೀಯ ಹಾಸ್ಯದ ಮೂಲಕ ರಂಜಿಸಿದರು . ವಿಶ್ವಾಮಿತ್ರನ ಸೃಷ್ಟಿಯ ಮಾತಂಗ ಕನ್ಯೆಯರಾಗಿ ಅಕ್ಷಯ ಮಾರ್ನಾಡು ಹಾಗೂ ರಕ್ಷಿತ್‌ ಪಡ್ರೆಯವರ ನಾಟ್ಯ , ಅಭಿನಯ , ಮಾತುಗಾರಿಕೆಯಲ್ಲಿ ಪಾತ್ರೋಚಿತವಾದ ಸ್ಪರ್ಧೆ ಕಂಡು ಬಂತು . ವೇಷಭೂಷಣದಲ್ಲಿ ಸಹಜತೆ ಇದ್ದರೂ , ವಿಶ್ವಾಮಿತ್ರನ ಕೃತಕ ಸೃಷ್ಟಿಯ ಮಾತಂಗ ಕನ್ಯೆಯರಾದ ಕಾರಣ , ಮುಖವರ್ಣಿಕೆಯು ಹೊಗೆಕಪ್ಪು ವರ್ಣವಾಗಿದ್ದರೆ ಚೆನ್ನಾಗಿತ್ತು . 

ಕೌಕಭಟ್ಟನಾಗಿ ಅರುಣ ಜಾರ್ಕಳ ,ಪತ್ನಿಯಾಗಿ ಅಂಬಾಪ್ರಸಾದ್‌ ಪಾತಾಳ , ವೀರಬಾಹುವಾಗಿ ಉಬರಡ್ಕ ಉಮೇಶ ಶೆಟ್ಟರ ನಿರ್ವಹಣೆಯು ಪ್ರಸಂಗದ ಒಟ್ಟಂದದ ಪ್ರಸ್ತುತಿಗೆ ಪೂರಕವಾಯಿತು . ಕೊನೆಯಲ್ಲಿ ಈಶ್ವರನಾಗಿ ವಾದಿರಾಜ ಕಲ್ಲೂರಾಯರು ಹರಿಶ್ಚಂದ್ರನ ಸತ್ಯದ ಬದ್ಧತೆಯನ್ನು ವಿವರಿಸಿ ,ಪ್ರಸಂಗವನ್ನು ಉಪಸಂಹಾರಗೊಳಿಸಿದರು . ಪ್ರಪುಲ್ಲಚಂದ್ರ ನೆಲ್ಯಾಡಿ ಮತ್ತು ಪಟ್ಲ ಸತೀಶ ಶೆಟ್ಟರ ಸುಶ್ರಾವ್ಯವಾದ ಭಾಗವತಿಕೆ ಮನ ಸೆಳೆಯಿತು ಚೆಂಡೆ- ಮದ್ದಲೆ ವಾದನದಲ್ಲಿ ಗುರುಪ್ರಸಾದ್‌ ಬೊಳಿಂಜಡ್ಕ , ಚೈತನ್ಯಕೃಷ್ಣ ಪದ್ಯಾಣ ಗಮನ ಸೆಳೆದರು .

ಎರಡನೇ ಪ್ರಸಂಗ ಶೂರ್ಪನಖಾ ವಿವಾಹ ಅಪರೂಪದ ಪ್ರಸಂಗ . ಪ್ರೇಕ್ಷಕರ ಅತಿ ನಿರೀಕ್ಷೆಯ ವಿದ್ಯುಜಿಹ್ವನ ಪಾತ್ರದಲ್ಲಿ ಯುವ ಕಲಾವಿದ ಪ್ರಜ್ವಲ್‌ ಕುಮಾರ್‌ ಗುರುವಾಯನಕೆರೆ ಅಬ್ಬರದ ಪ್ರವೇಶ ಕೊಟ್ಟು ಹಾಸ್ಯಮಿಶ್ರಿತ ಸಂಭಾಷಣೆಯ ಮೂಲಕ ರಂಜಿಸಿದರು . ಪ್ರಹಸ್ತನಾಗಿ ಉಜ್ರೆ ನಾರಾಯಣ ತಿಳಿ ಹಾಸ್ಯವನ್ನು ಬಳಸಿ , ಪಾತ್ರದ ಘನತೆಯನ್ನು ಉಳಿಸಿ ಪ್ರಬುದ್ಧತೆ ಮೆರೆದರು . ರಾವಣನಾಗಿ ಹರಿನಾರಾಯಣ ಭಟ್‌ , ಎಡನೀರು ಪರಂಪರೆಯ ಶೈಲಿಯಲ್ಲೇ ಪಾತ್ರ ನಿರ್ವಹಿಸಿದರು . ಶೂರ್ಪನಖೀಯಾಗಿ ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರರು ಸಾಂಪ್ರದಾಯಿಕ ಹೆಣ್ಣುಬಣ್ಣದ ಚಿತ್ರಣ ನೀಡಿದರು . ಭಾಗವತಿಕೆಯಲ್ಲಿ ರಾಮಕೃಷ್ಣ ಮಯ್ಯ , ಚೆಂಡೆ – ಮದ್ದಲೆ ವಾದನದಲ್ಲಿ ನೆಕ್ಕರೆಮೂಲೆ ಹಾಗೂ ಅಡೂರು ಗಣೇಶರ ನಿರ್ವಹಣೆ ಪ್ರಸಂಗದ ಯಶಸ್ಸಿಗೆ ಕಾರಣವಾಯಿತು. ಕೊನೆಯ ಪ್ರಸಂಗ ಮಕರಾಕ್ಷ ಕಾಳಗ ಮೂರನೇ ಕಾಲಗತಿಗನುಸಾರವಾಗಿ ವೇಗವಾಗಿ ಸಾಗಿತು . ಪೂರ್ವಾರ್ಧದ ಮಕರಾಕ್ಷನಾಗಿ ಸುಬ್ರಾಯ ಹೊಳ್ಳರು ಉತ್ತಮವಾಗಿ ನಿರ್ವಹಿಸಿದರು . 

ಉತ್ತರಾರ್ಧದ ಮಕರಾಕ್ಷನಾಗಿ ಸಂತೋಷ್‌ ಮಾನ್ಯರ ಅಬ್ಬರದ ಪ್ರವೇಶದೊಂದಿಗೆ ವೀರರಸದ ಉತ್ಕರ್ಷೆಯಾಯಿತು . ಶ್ರೀರಾಮನಾಗಿ ದಿನೇಶ್‌ ಶೆಟ್ಟಿ ಕಾವಳಕಟ್ಟೆ ಉತ್ತಮ ಅಭಿನಯ , ಮಾತುಗಾರಿಕೆಯ ಮೂಲಕ ಪಾತ್ರದ ಘನತೆಯನ್ನು ಮೆರೆದರು . ರಾಜೇಶ್‌ ಆಚಾರ್ಯ , ರಾಹುಲ್‌ ಕುಡ್ಲ , ವೆಂಕಟೇಶ ಕಲ್ಲುಗುಂಡಿ , ಕಿಶೋರ್‌ ಕೊಮ್ಮೆ , ರಾಜೇಶ್‌ ನಿಟ್ಟೆಯವರ ನಿರ್ವಹಣೆ ಪ್ರಸಂಗಕ್ಕೆ ಪೂರಕವಾಯಿತು .ಕುಂಭ – ನಿಕುಂಭರಾಗಿ ದಿವಾಕರ ರೈ ಹಾಗೂ ಶಶಿಧರ ಕುಲಾಲರು ಪೈಪೋಟಿಯ ನಾಟ್ಯ , ಧಿಗಿಣದ ಮೂಲಕ ವೀರರಸದ ಪ್ರಸ್ತುತಿ ನೀಡಿದರು . ಪ್ರಸಂಗದ ಪ್ರಾರಂಭದಲ್ಲೇ ಬಲಿಪ ಪ್ರಸಾದ ಭಟ್‌ ಹಾಗೂ ಪುಂಡಿಕಾಯಿ ಗೋಪಾಲಕೃಷ್ಣ ಭಟ್ಟರು ಏರು ಕಂಠದಲ್ಲಿ ಬಲಿಪ ಶೈಲಿಯಲ್ಲಿ ದ್ವಂದ್ವ ಭಾಗವತಿಕೆಯ ಮೂಲಕ ಮನ ಗೆದ್ದರು . ಮದ್ದಲೆಯಲ್ಲಿ ನೆಕ್ಕರೆಮೂಲೆ ಹಾಗೂ ಚೆಂಡೆವಾದನದಲ್ಲಿ ಅಡೂರು ಗಣೇಶ್‌ ಹಾಗೂ ಅಡೂರು ಲಕ್ಷ್ಮೀನಾರಾಯಣ ರಾವ್‌ ದ್ವಂದ್ವ ವಾದನದಿಂದ ಚಪ್ಪಾಳೆ ಗಿಟ್ಟಿಸಿದರು . ಚಕ್ರತಾಳದಲ್ಲಿ ರಾಜೇಂದ್ರಕೃಷ್ಣಸಹಕರಿಸಿದರು .

ಎಂ.ಶಾಂತರಾಮ ಕುಡ್ವ 

ಟಾಪ್ ನ್ಯೂಸ್

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

vidan-soudha-kannada

Golden Jubilee: ಕನ್ನಡವೇ ಅಧಿಕಾರಿಗಳ‌ ಹೃದಯದ ಭಾಷೆ ಆಗಲಿ

KSRTC

Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.