ಏಕಕಾಲಕ್ಕೆ ಭಾರತ-ಬಾಂಗ್ಲಾ; ಪಾಕ್‌-ಅಫ್ಘಾನ್‌ ಸ್ಪರ್ಧೆ


Team Udayavani, Sep 21, 2018, 6:00 AM IST

asia-ban-ind-pak-af.jpg

ದುಬಾೖ: ಬಿಡುವಿಲ್ಲದ ವೇಳಾಪಟ್ಟಿಗೆ ಆಕ್ಷೇಪ ವ್ಯಕ್ತವಾಗುತ್ತಲೇ “ಏಶ್ಯ ಕಪ್‌’ ಕ್ರಿಕೆಟ್‌ ಪಂದ್ಯಾವಳಿ “ಸೂಪರ್‌ ಫೋರ್‌’ ದಿಕ್ಕಿನತ್ತ ಮುಖ ಮಾಡಿದೆ. 

ಗುರುವಾರದ ಅಂತಿಮ ಗ್ರೂಪ್‌ ಪಂದ್ಯ ಮುಗಿಯುತ್ತಿದ್ದಂತೆಯೇ ಶುಕ್ರವಾರದಿಂದಲೇ ಮುಂದಿನ ಸುತ್ತಿನ ಹಣಾಹಣಿ ಮೊದಲ್ಗೊಳ್ಳಲಿದೆ. ಭಾರತ, ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನ ತಂಡಗಳು ಈ ಹಂತದಲ್ಲಿ ಪರಸ್ಪರ ಮುಖಾಮುಖೀಯಾಗಲಿವೆ.

ಶುಕ್ರವಾರ ಮತ್ತು ರವಿವಾರ ಏಕಕಾಲಕ್ಕೆ 2 ಪಂದ್ಯಗಳು ನಡೆಯುವುದು ಈ ಕೂಟದ ವೇಳಾಪಟ್ಟಿಯ ಮತ್ತೂಂದು ಎಡವಟ್ಟು. ಸೂಪರ್‌ ಫೋರ್‌ ಹಂತದ ಒಂದು ಸುತ್ತಿನ ಪಂದ್ಯದ ಬಳಿಕ ಶನಿವಾರ ಕೂಟಕ್ಕೆ ವಿರಾಮ ನೀಡಲಾಗಿದೆ. ಕೊನೆಯ 2 ಸೂಪರ್‌ ಫೋರ್‌ ಪಂದ್ಯಗಳು ಮಂಗಳವಾರ ಹಾಗೂ ಬುಧವಾರ ನಡೆಯಲಿವೆ.

ಭಾರತ ಗ್ರೂಪ್‌ ಹಂತದಲ್ಲಿ ಸತತ 2 ದಿನ 2 ಪಂದ್ಯಗಳನ್ನಾಡುವ ಅನಿವಾರ್ಯತೆಗೆ ಸಿಲುಕಿತ್ತು. ಈಗ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನಕ್ಕೂ ಈ ಒತ್ತಡ ಎದುರಾಗಿದೆ. ಗುರುವಾರ ಕೊನೆಯ ಗ್ರೂಪ್‌ ಪಂದ್ಯ ಆಡಲಿರುವ ಈ ತಂಡಗಳು ಶುಕ್ರವಾರವೇ ಸೂಪರ್‌ ಫೋರ್‌ ಮುಖಾಮುಖೀಗೆ ಅಣಿಯಾಗಬೇಕಿದೆ!

ಭಾರತಕ್ಕೆ ಬಾಂಗ್ಲಾ ಸವಾಲು
ದುಬಾೖಯಲ್ಲಿ ನಡೆಯುವ ಪಂದ್ಯದಲ್ಲಿ ಟೀಮ್‌ ಇಂಡಿಯಾ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ. ಅಬುಧಾಬಿಯಲ್ಲಿ ಪಾಕಿಸ್ಥಾನ-ಅಫ್ಘಾನಿಸ್ಥಾನ ಸೆಣಸಾಡಲಿವೆ. ಹಾಂಕಾಂಗ್‌ ಮತ್ತು ಶ್ರೀಲಂಕಾ ಕೂಟದಿಂದ ಹೊರಬಿದ್ದಿವೆ.

ಹಾಂಕಾಂಗ್‌ ವಿರುದ್ಧ ಪರದಾಡಿ, ಪಾಕಿಸ್ಥಾನದ ಸದ್ದಡಗಿಸಿದ ರೋಹಿತ್‌ ಶರ್ಮ ನಾಯಕತ್ವದ ಭಾರತ, ಶುಕ್ರವಾರದ ಸೂಪರ್‌ ಫೋರ್‌ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ. ಮಶ್ರಫೆ ಮೊರ್ತಜ ನಾಯಕತ್ವದ ಬಾಂಗ್ಲಾ ಏಕದಿನ ಮಟ್ಟಿಗೆ ಬಲಿಷ್ಠ ಹಾಗೂ ಸಶಕ್ತ ತಂಡವೇ ಆಗಿದೆ. ಭಾರತ ಸ್ವಲ್ಪವೇ ಯಾಮಾರಿದರೂ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇಲ್ಲದಿಲ್ಲ.

ಪಾಕನ್ನು ಮಣಿಸಿದ ಹುರುಪು
ಇತ್ತ ಬದ್ಧ ಎದುರಾಳಿ ಪಾಕ್‌ ವಿರುದ್ಧ ನಿರೀಕ್ಷೆಗೂ ಮೀರಿದ ಪ್ರದರ್ಶನವಿತ್ತು ಗೆದ್ದು ಬಂದ ಭಾರತ ಹೊಸ ಹುರುಪಿನಲ್ಲಿದೆ. ಬಾಂಗ್ಲಾ ವಿರುದ್ಧವೂ ಇದೇ ಲಯವನ್ನು ಕಾಯ್ದುಕೊಳ್ಳುವುದು ರೋಹಿತ್‌ ಪಡೆಯ ಮುಂದಿರುವ ಯೋಜನೆ.

ಆರಂಭಿಕರಾದ ರೋಹಿತ್‌ ಶರ್ಮ-ಶಿಖರ್‌ ಧವನ್‌ ಎರಡೂ ಪಂದ್ಯಗಳಲ್ಲಿ ಉತ್ತಮ ಅಡಿಪಾಯ ನಿರ್ಮಿಸಿದ್ದಾರೆ. ವಿರಾಟ್‌ ಕೊಹ್ಲಿ ಗೈರಲ್ಲಿ ಅಂಬಾಟಿ ರಾಯುಡು ಆಟ ಭರವಸೆದಾಯಕವಾಗಿದೆ. ಹೀಗಾಗಿ ಕೆ.ಎಲ್‌. ರಾಹುಲ್‌ ವೇಟಿಂಗ್‌ ಲಿಸ್ಟ್‌ನಲ್ಲೇ ಇರಬೇಕೋ ಏನೋ. ದಿನೇಶ್‌ ಕಾರ್ತಿಕ್‌ ಮೇಲೆ ಆಡಳಿತ ಮಂಡಳಿಗೆ ಭಾರೀ ವಿಶ್ವಾಸ ಇರುವುದರಿಂದ ಮನೀಷ್‌ ಪಾಂಡೆಗೆ ಅವಕಾಶ ದೂರ ಎಂದೇ ಭಾವಿಸಬೇಕಾಗುತ್ತದೆ. ಹಾಂಕಾಂಗ್‌ ಎದುರು ಸೊನ್ನೆ ಸುತ್ತಿದ ಅನುಭವಿ ಧೋನಿ ಅವರ ಬ್ಯಾಟಿಂಗ್‌ ಫಾರ್ಮ್ ಹೇಗೆ ಎಂಬುದನ್ನು ತಿಳಿಯಬೇಕಿದೆ. ಕೇದಾರ್‌ ಜಾಧವ್‌ ಅವರ ಆಲ್‌ರೌಂಡ್‌ ಯಶಸ್ಸು ಭಾರತದ ಪಾಲಿಗೊಂದು ಬೋನಸ್‌ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಹಾರ್ದಿಕ್‌ ಪಾಂಡ್ಯ ಗೈರು ಭಾರತಕ್ಕೆ ದೊಡ್ಡ ಹೊಡೆತವೇನೂ ಅಲ್ಲ. ಇವರ ಬದಲು ಮತ್ತೆ ಖಲೀಲ್‌ ಅಹ್ಮದ್‌ ಆಡುವ ಸಾಧ್ಯತೆ ಇದೆ.
ಪಾಕಿಸ್ಥಾನವನ್ನು ಉರುಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಭುವನೇಶ್ವರ್‌ ಆ್ಯಂಡ್‌ ಕಂಪೆನಿ ತನ್ನ “ಘಾತಕ ಮಟ್ಟ’ವನ್ನು ಉಳಿಸಿಕೊಂಡೀತೆಂಬ ವಿಶ್ವಾಸ ಇದೆ.

ಏಶ್ಯ ಕಪ್‌: ಸೂಪರ್‌-4 ವೇಳಾಪಟ್ಟಿ
ದಿನಾಂಕ    ಪಂದ್ಯ    ಸ್ಥಳ    ಆರಂಭ

ಸೆ. 21 (ಶುಕ್ರವಾರ)    ಭಾರತ-ಬಾಂಗ್ಲಾದೇಶ    ದುಬಾೖ    ಸಂಜೆ 5.00
ಸೆ. 21 (ಶುಕ್ರವಾರ)    ಪಾಕಿಸ್ಥಾನ-ಅಫ್ಘಾನಿಸ್ಥಾನ    ಅಬುಧಾಬಿ    ಸಂಜೆ 5.00
ಸೆ. 23 (ರವಿವಾರ)    ಭಾರತ-ಪಾಕಿಸ್ಥಾನ    ದುಬಾೖ        ಸಂಜೆ 5.00
ಸೆ. 23 (ರವಿವಾರ)    ಬಾಂಗ್ಲಾದೇಶ-ಅಫ್ಘಾನಿಸ್ಥಾನ    ಅಬುಧಾಬಿ    ಸಂಜೆ 5.00
ಸೆ. 25 (ಮಂಗಳವಾರ)    ಭಾರತ-ಅಫ್ಘಾನಿಸ್ಥಾನ    ದುಬಾೖ    ಸಂಜೆ 5.00
ಸೆ. 26 (ಬುಧವಾರ)    ಪಾಕಿಸ್ಥಾನ-ಬಾಂಗ್ಲಾದೇಶ    ಅಬುಧಾಬಿ    ಸಂಜೆ 5.00
* ಸಮಯ: ಭಾರತೀಯ ಕಾಲಮಾನ
* ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

ಟಾಪ್ ನ್ಯೂಸ್

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police

Udupi: ಕೋಳಿ ಅಂಕಕ್ಕೆ ದಾಳಿ; 9 ಕೋಳಿ ಸಹಿತ ನಾಲ್ವರ ವಶ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

1-dhanjay

Ullal; ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ವಂಚನೆ ಯತ್ನ: ಬಂಧನ

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.