ಶಿರ್ವ ಪಾಂಬೂರು: ಮತ್ತೂಂದು ಚಿರತೆ ಬೋನಿಗೆ
Team Udayavani, Sep 21, 2018, 1:35 AM IST
ಶಿರ್ವ: ಪಡುಬೆಳ್ಳೆ, ಸಡಂಬೈಲು, ಪಾಂಬೂರು,ಬಂಟಕಲ್ಲು ಪರಿಸರದಲ್ಲಿ ಆಗಾಗ ಪ್ರತ್ಯಕ್ಷಗೊಂಡು ನಾಗರಿಕರಲ್ಲಿ ಭೀತಿ ಹುಟ್ಟಿಸಿದ್ದ ಮತ್ತೂಂದು ಚಿರತೆ ಪಾಂಬೂರಿನಲ್ಲಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಗುರುವಾರ ನಸುಕಿನ ವೇಳೆ ಬಿದ್ದಿದೆ. ಕಳೆದ ತಿಂಗಳು ಇದೇ ಪರಿಸರದಲ್ಲಿ ಸುಮಾರು 8 ವರ್ಷದ ಗಂಡು ಚಿರತೆಯನ್ನು ಸೆರೆಹಿಡಿಯಲಾಗಿತ್ತು.
ಪಾಂಬೂರು ಪರಿಸರದಲ್ಲಿ ಚಿರತೆ ಅಡ್ಡಾಡುವ ದೂರು ಬಂದ ಹಿನ್ನೆಲೆಯಲ್ಲಿ ಪಡುಬೆಳ್ಳೆ ಪಾಂಬೂರು ಹಿ.ಪ್ರಾ. ಶಾಲೆಯ ಬಳಿಯ ಮೊನಿಕಾ ಮತಾಯಸ್ ಅವರ ಮನೆಯ ಸಮೀಪ ಅರಣ್ಯ ಇಲಾಖೆ ಸಿಬಂದಿ ಬುಧವಾರ ರಾತ್ರಿ ಬೋನು ಇರಿಸಿದ್ದರು. ಗುರುವಾರ ಮಧ್ಯರಾತ್ರಿ 2 ಗಂಟೆಯ ವೇಳೆಗೆ ಸುಮಾರು 4 ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ.
ಕಳೆದ ಕೆಲವು ಸಮಯದಿಂದ ಪಾಂಬೂರು ಪರಿಸರದಲ್ಲಿ ನಾಟಿಕೋಳಿ, ಸಾಕು ನಾಯಿಗಳು ಕೊಂದು ತಿನ್ನುತ್ತಿರುವ ಚಿರತೆ ಕಾಟದಿಂದ ಜನತೆ ಭಯಭೀತರಾಗಿದ್ದರು.ಒಂದು ಚಿರತೆ ಸೆರೆ ಹಿಡಿದರೂ ಮತ್ತೂಂದು ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿಯಾಗಿ ತಿಂಗಳ ಅಂತರದಲ್ಲಿ 2 ಚಿರತೆಗಳು ಬೋನಿಗೆ ಬಿದ್ದರೂ ಇನ್ನು ಕೂಡಾ ಚಿರತೆ ಮರಿಗಳು ಪರಿಸರದಲ್ಲೇ ಓಡಾಡಿಕೊಂಡಿವೆ ಎಂದು ಸ್ಥಳೀಯ ನಾಗರಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಆ. 9 ರ ಉದಯವಾಣಿ ವರದಿ
ಪಾಂಬೂರು ಪರಿಸರದಲ್ಲಿ ಆ. 7 ರಂದು ದೊಡ್ಡ ಗಾತ್ರದ ಚಿರತೆ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಬಿದ್ದಿದ್ದರೂ ಮರುದಿನ ಆದೇ ಪರಿಸರದಲ್ಲಿ ಇನ್ನೊಂದು ಚಿರತೆ ಸಂಚರಿಸಿರುವುದು ಕಂಡು ಬಂದಿತ್ತು. ಗಂಡು ಚಿರತೆ ಬಿದ್ದರೂ ಹೆಣ್ಣು ಚಿರತೆ ಮತ್ತು ಮರಿಗಳು ಇಲ್ಲೇ ಇವೆ ಎಂದು ಬೆಳ್ಳೆ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಶೆಟ್ಟಿ ಪತ್ರಿಕೆಗೆ ಮಾಹಿತಿ ನೀಡಿದ್ದರು. ಚಿರತೆ ಹಾವಳಿಯಿಂದ ಸ್ಥಳೀಯ ಜನರು ಭಯಭೀತರಾಗಿರುವ ಬಗ್ಗೆ ಆ.9 ರಂದು ಉದಯವಾಣಿ ವರದಿ ಪ್ರಕಟಿಸಿತ್ತು.
ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ, ಉಪ ವಲಯ ಅರಣ್ಯಾಧಿಕಾರಿ ದಯಾನಂದ ಕೆ. ಅವರ ಮಾರ್ಗದರ್ಶನದಂತೆ ಬೆಳ್ಳೆ ಗಸ್ತಿನ ಅರಣ್ಯ ರಕ್ಷಕ ಗಣಪತಿ ನಾಯಕ್‌ಮತ್ತು ಶಿರ್ವ ಗಸ್ತಿನ ಅರಣ್ಯ ರಕ್ಷಕ ಜಯರಾಮ ಶೆಟ್ಟಿ, ಅರಣ್ಯ ವೀಕ್ಷಕ ಅಶ್ವಿನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಎಸ್‌ಕೆ ಬೋರ್ಡರ್‌ನ ವನ್ಯಜೀವಿ ವಿಭಾಗದ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.