![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 21, 2018, 1:33 PM IST
ಆಧುನಿಕ ಕಾರುಗಳಲ್ಲಿ/ ಬೈಕುಗಳಲ್ಲಿ ಯಾವತ್ತೂ ಉರಿಯುತ್ತಿರುವ ಎಲ್‌ಇಡಿ ಲೈಟ್‌ಗಳನ್ನು ನೋಡಿರಬಹುದು. ಇದಕ್ಕೆ ಡಿಆರ್‌ಎಲ್‌ಗಳು (ಡೇ ಟೈಮ್ ರನ್ನಿಂಗ್ ಲೈಟ್ಸ್) ಎಂದು ಕರೆಯುತ್ತಾರೆ. ಹೆಡ್‌ಲೈಟ್ ಕೆಳಭಾಗದಲ್ಲಿ ಅಥವಾ ಫಾಗ್ ಲ್ಯಾಂಪ್ ಸುತ್ತಲೂ ಈ ಲೈಟ್‌ಗಳು ಉರಿಯುತ್ತಿರುತ್ತವೆ. ಬ್ಯಾಟರಿಗೆ ನೇರ ಕನೆಕ್ಷನ್ ಹೊಂದಿರುವುದರಿಂದ ವಾಹನದ ಕೀ ಆನ್ ಮಾಡಿದ ಕೂಡಲೇ ಈ ಲೈಟ್ ಗಳು ಉರಿಯುತ್ತವೆ.
ಏನು ಪ್ರಯೋಜನ?
ಎಲ್‌ಇಡಿ ಡಿಆರ್‌ಎಲ್‌ಗಳ ಬಳಕೆ ಹೆಚ್ಚಾಗಿ ಬಳಕೆಗೆ ಬಂದಿದ್ದು ವಿದೇಶಗಳಲ್ಲಿ. ಅಲ್ಲಿನ ದಟ್ಟ ಮಂಜಿನ ಪರಿಸ್ಥಿತಿಯಲ್ಲಿ ಪಾದಚಾರಿಗಳಿಗೆ, ಇತರ ವಾಹನ ಚಾಲಕರಿಗೆ ವಾಹನ ಗುರುತಿಸಲು ಇದು ನೆರವು ನೀಡುತ್ತಿತ್ತು. ಈ ಲೈಟ್‌ಗಳು ಈಗ ಎಲ್ಲೆಡೆ ಸಾಮಾನ್ಯವಾಗಿದೆ. 5ರಿಂದ 20 ವ್ಯಾಟ್ಸ್ ಸಾಮರ್ಥ್ಯದ ಎಲ್‌ಇಡಿ ಲೈಟ್‌ಗಳು ಇವಾಗಿದ್ದು ತಿಳಿ ನೀಲಿ ಬಣ್ಣ ಹೊಂದಿರುತ್ತವೆ. ಮಸುಕಾದ ವಾತಾವರಣದಲ್ಲೂ ಇವುಗಳು ಸ್ಪಷ್ಟವಾಗಿ, ಹಗಲಲ್ಲೂ ಗೋಚರವಾಗುತ್ತವೆ. ಇದರಿಂದ ಎದುರಿನ ಚಾಲಕ ಅಲರ್ಟ್ ಆಗಲು ನೆರವಾಗುತ್ತದೆ. ಇನ್ನೊಂದು ವಾಹನಕ್ಕೆ ಅಂದವನ್ನೂ ಇದು ನೀಡುವುದರಿಂದ ವಿವಿಧ ವಿನ್ಯಾಸದ ಎಲ್‌ಇಡಿ ಡಿಆರ್‌ಎಲ್‌ಗಳು ಈಗ ಸಾಮಾನ್ಯವಾಗಿವೆ.
ಸುರಕ್ಷತೆಗೆ ಆದ್ಯತೆ
ಹೆಚ್ಚು ಬೆಳಕಿನ ಪ್ರದೇಶಗಳಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳ ಅಗತ್ಯ ಅಷ್ಟೇನೂ ಇಲ್ಲ. ಆದರೆ ಸೂರ್ಯನ ಬೆಳಕು ಕಡಿಮೆ ಇರುವ ಪ್ರದೇಶಗಳಲ್ಲಿ ಉದಾ: ಉತ್ತರ ಧ್ರುವದ ಸನಿಹದ ದೇಶಗಳು, ಬೆಟ್ಟ ಗುಡ್ಡಗಳಿಂದ ಆವೃತವಾದ ಈಶಾನ್ಯ/ಹಿಮಾಚಲ ಪ್ರದೇಶದಂತಹ ರಾಜ್ಯಗಳು, ಹೆಚ್ಚು ಮಂಜಿನ ಪ್ರದೇಶಗಳಾದ ಮಡಿಕೇರಿಯಂತ ಊರುಗಳಲ್ಲಿ ಈ ಡಿಆರ್‌ಎಲ್‌ಗಳು ಉಪಯುಕ್ತ. ಇದರಿಂದ ವಾಹನ ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ.
ಆಯ್ಕೆ ಹೇಗೆ?
ಡಿಆರ್‌ಎಲ್‌ಗಳನ್ನು ವಾಹನದ ಸೌಂದರ್ಯದ ದೃಷ್ಟಿಯಿಂದಲೂ ಅಳವಡಿಸುತ್ತಾರೆ. ಡಿಆರ್‌ಎಲ್ ಗಳ ಆಯ್ಕೆಗೆ ಲ್ಯುಮೆನ್ಸ್ ಆಧಾರದಲ್ಲಿ ಆಯ್ದುಕೊಳ್ಳಬಹುದು. ಎಷ್ಟು ದೂರಕ್ಕೆ ಬೆಳಕು ಬೀರುತ್ತದೆ ಎಂಬುದು ಲ್ಯುಮೆನ್ಸ್‌ನಲ್ಲಿ ಅಳೆಯಲಾಗುತ್ತದೆ. ಸುಮಾರು 200ಕ್ಕಿಂತ ಹೆಚ್ಚು ಲ್ಯುಮೆನ್ಸ್‌ಗಳ ಡಿಆರ್‌ಎಲ್‌ಗಳು ಉತ್ತಮ. ಲಕ್ಸುರಿ ಕಾರುಗಳಲ್ಲಿ 3000 ಲ್ಯುಮೆನ್ಸ್ ವರೆಗೆ ಎಲ್‌ಇಡಿ ಡಿಆರ್‌ಎಲ್ ಗಳಿದ್ದು, ಪ್ರಖರ ಬೆಳಕನ್ನೂ ನೀಡುತ್ತವೆ. ಜತೆಗೆ ಎಷ್ಟು ವ್ಯಾಟ್‌ನದ್ದು ಅಗತ್ಯ, ಬಣ್ಣ ಎಷ್ಟು ಬೇಕು ಎಂಬುದನ್ನು ನೋಡಿ ಆಯ್ಕೆ ಮಾಡಬಹುದು. ಇದರೊಂದಿಗೆ ಎಷ್ಟು ಗಂಟೆಗಳ ಕಾಲ ಇವುಗಳು ಬಾಳಿಕೆ ಬರುತ್ತವೆ ಎಂಬುದನ್ನು ಖರೀದಿ ಮುನ್ನ ನೋಡಬೇಕು. ಸುಮಾರು 5 ಸಾವಿರ ದಿಂದ 10 ಸಾವಿರ ಗಂಟೆಗಳ ವರೆಗೆ ಇವುಗಳ ಆಯುಷ್ಯ ಸಾಮಾನ್ಯವಾಗಿ ಇರುತ್ತದೆ. ಗುಣಮಟ್ಟದ ಲೈಟ್ ಗಳಲ್ಲಿ ಇದು ಇನ್ನೂ ಹೆಚ್ಚಿರಬಹುದು.
ಅಳವಡಿಕೆ
ಎಲ್‌ಇಡಿ ಡಿಆರ್‌ಎಲ್‌ಗಳು ಇಲ್ಲದ ವಾಹನಗಳಲ್ಲಿ ಅವುಗಳ ಅಳವಡಿಕೆಗೆ ಪುಟ್ಟ ಬದಲಾವಣೆ ಮಾಡಿಕೊಳ್ಳಬಹುದು. ಕಾರುಗಳಲ್ಲಿ ಬಂಪರ್ ಗ್ರಿಲ್, ಸೈಡ್ ಗ್ರಿಲ್ ಮತ್ತು ಸೆಂಟರ್ ಹುಡ್ ಗ್ರಿಲ್‌ಗಳಲ್ಲಿ ಇವುಗಳನ್ನು ಸೂಕ್ತ ವೈರಿಂಗ್ ಮೂಲಕ ಅನುಸ್ಥಾಪಿಸಿಕೊಳ್ಳಬಹುದು. ಬೈಕ್ ಗಲ್ಲಾದರೆ ಕ್ರಾಶ್‌ಗಾಡ್‌ಗಳಿಗೆ ಅಳವಡಿಕೆ ಮಾಡಿಕೊಳ್ಳಬಹುದು. ಸಾಮಾನ್ಯ ಬಲ್ಬ್ ಗಳಿಂದ ಇವುಗಳು ದೀರ್ಘಕಾಲ ಬಾಳಿಕೆ ಹೊಂದಿದ್ದು, ಬೈಕ್ ಗಳಲ್ಲಾದರೆ ಹೆಡ್‌ಲೈಟ್ ಹಾಳಾದ ಸಂದರ್ಭಗಳಲ್ಲಿ ಎಲ್‌ಇಡಿ ಡಿಆರ್‌ಎಲ್ ಬಳಸಬಹುದು.
ಈಶ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.