ಬತ್ತಿ ಬರಿದಾದ ಪ್ರವಾಸಿ ತಾಣ ಅಗಸ್ತ್ಯತೀರ್ಥ !
Team Udayavani, Sep 22, 2018, 7:00 AM IST
ಬಾದಾಮಿ: ವಿಶ್ವದ ಗಮನ ಸೆಳೆದಿರುವ ಪ್ರವಾಸಿ ತಾಣ, ಹಲವಾರು ಚಲನಚಿತ್ರಗಳ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿರುವ ಇಲ್ಲಿನ ಅಗಸ್ತ್ಯತೀರ್ಥ ಹೊಂಡ ಬರೋಬ್ಬರಿ 46 ವರ್ಷಗಳ ಬಳಿಕ ಬತ್ತಿ ಬರಿದಾಗಿದೆ.
ಪಟ್ಟಣದ ಸುತ್ತಲಿನ ಸಿ ಆಕಾರದ ಗುಡ್ಡಗಳ ಮಧ್ಯೆ ಇರುವ ಅಗಸ್ತ್ಯತೀರ್ಥ ಹೊಂಡಕ್ಕೆ ಇತಿಹಾಸವಿದೆ. ಈ ಹೊಂಡದಲ್ಲೇ ಬಾದಾಮಿ ಚಾಲುಕ್ಯ ಅರಸರ ಕಾಲದ ಕಲ್ಲಿನಲ್ಲಿ ನಿರ್ಮಿಸಲಾದ ಸುಂದರ ಭೂತನಾಥ ದೇವಾಲಯವಿದ್ದು ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ. ಪಕ್ಕದಲ್ಲೇ ಮೇಣಬಸದಿ ಇದ್ದು, ಬಾದಾಮಿಗೆ ಬರುವ ಸಾವಿರಾರು ಪ್ರವಾಸಿಗರು ಅಗಸ್ತ್ಯತೀರ್ಥ ಹೊಂಡ, ಭೂತನಾಥ ದೇವಾಲಯ, ಮ್ಯೂಜಿಯಂ (ವಸ್ತು ಸಂಗ್ರಹಾಲಯ), ಮೇಣಬಸದಿ ನೋಡಿ ಆನಂದ ಪಡುತ್ತಾರೆ.
ಕ್ರಿಕೆಟ್ ಮೈದಾನವಾಯ್ತು: 1972ರಲ್ಲಿ ತೀವ್ರ ಬರ ಆವರಿಸಿದ್ದಾಗ ಅಗಸ್ತ್ಯತೀರ್ಥ ಹೊಂಡ ಬತ್ತಿತ್ತು. ಅದಾದ ಬಳಿಕ ಎಷ್ಟೇ ಮಳೆ ಕೊರತೆ ಕಂಡು ಬಂದರೂ ಹೊಂಡ ಒಮ್ಮೆಯೂ ಬತ್ತಿರಲಿಲ್ಲ. ಆದರೀಗ ಸಂಪೂರ್ಣ ಬತ್ತಿದ್ದು, ಭೂತನಾಥ ದೇವಾಲಯ ಎದುರು ಭಣಗುಡುತ್ತಿದೆ. ಅಗಸ್ತ್ಯತೀರ್ಥ ಹೊಂಡದ ಆವರಣವನ್ನು ಯುವಕರು ಕ್ರಿಕೆಟ್ ಮೈದಾನವನ್ನಾಗಿ ಮಾಡಿಕೊಂಡಿದ್ದಾರೆ.
ಮಳೆ ಆದ್ರೆ ನೀರು: ಅಗಸ್ತ್ಯತೀರ್ಥ ಹೊಂಡಕ್ಕೆ ಕೆರೆ ತುಂಬುವಂತಹ ಯೋಜನೆಗಳು ಕೈಗೊಳ್ಳಲು ಸಾಧ್ಯವೇ ಇಲ್ಲ. ಈಗಾಗಲೇ ಅವಕಾಶ ಇರುವ ಬನಶಂಕರಿ ಹೊಂಡವನ್ನೇ ತುಂಬಿಸಲು ಅಧಿಕಾರಸ್ಥರು ಮುಂದಾಗಿಲ್ಲ. ಇನ್ನು ಸಣ್ಣ ಕೆಲಸಕ್ಕೂ ತಕರಾರು ತೆಗೆಯುವ ಎಎಸ್‌ಐ (ಭಾರತೀಯ ಪುರಾತತ್ವ ಇಲಾಖೆ), ಈ ಹೊಂಡಕ್ಕೆ ನೀರು ತುಂಬಿಸಲು 3 ಅಡಿಯ ಪೈಪ್ ಹಾಕಲು ಅನುಮತಿ ಕೊಡಲ್ಲ. ಅಲ್ಲದೇ ಗುಹಾಂತರ ದೇವಾಲಯಗಳ ಮಾರ್ಗವಾಗಿ, ಅಗಸ್ತ್ಯತೀರ್ಥ ಹೊಂಡಕ್ಕೆ ಪೈಪ್‌ಲೈನ್ ಮಾಡಲು ಬೇರೆ ಮಾರ್ಗವಿಲ್ಲ. ಹೀಗಾಗಿ ಕೆರೆ ತುಂಬುವಂತಹ ಯೋಜನೆ ಅಳವಡಿಸುವುದು ದುಸ್ಸಾಹಸದ ಕೆಲಸ ಎನ್ನುತ್ತಾರೆ ಪ್ರಜ್ಞಾವಂತರು.
ಸಿ ಆಕಾರದ ಗುಡ್ಡಗಳೇ ಆಸರೆ: ಅಗಸ್ತ್ಯತೀರ್ಥ ಹೊಂಡದ ಸುತ್ತಲೂ ಸಿ ಆಕಾರದ ಗುಡ್ಡಗಳಿವೆ. ಅದರಲ್ಲಿ ಪೂರ್ವ ಭಾಗದ ಮಹಾಕೂಟ ಭಾಗದ ಗುಡ್ಡ (ಕಾರಂಜಿ)ಗಳು ಸಿ ಆಕಾರದಲ್ಲಿವೆ. ಜತೆಗೆ ಅಕ್ಕ-ತಂಗಿ ದಿಡಗು ಮೂಲಕ ಈ ಹೊಂಡಕ್ಕೆ ನೀರು ಬರುತ್ತದೆ. ಅದು ಬಾದಾಮಿ ಸುತ್ತಲಿನ ಈ ಗುಡ್ಡಗಳ ಮೇಲೆ ಮಳೆ ಆದರೆ ಮಾತ್ರ. ಅದು ಅಕ್ಕ- ತಂಗಿ ದಿಡಗು, ಮಹಾಕೂಟ ಭಾಗದ ಗುಡ್ಡಗಳ ಮೂಲಕ ಬರುವ ಕಾರಂಜಿ ನೀರು ಹೊರತುಪಡಿಸಿದರೆ ಬೇರೆ ಜಲಮೂಲಗಳೇ ಇಲ್ಲ.
ಅಗಸ್ತ್ಯತೀರ್ಥ ಹೊಂಡ ಅದ್ಭುತ ಹಾಗೂ ಐತಿಹಾಸಿಕ ಪ್ರೇಕ್ಷಣೀಯ ಸ್ಥಳ. ನಮ್ಮ ಹಿರಿಯರು ಹೇಳುವಂತೆ ಇದು 1972ರಲ್ಲಿ ಬತ್ತಿತ್ತು. ಆ ಬಳಿಕ ಒಮ್ಮೆಯೂ ಬತ್ತಿರಲಿಲ್ಲ. ಈ ವರ್ಷ ಸಂಪೂರ್ಣ ಖಾಲಿಯಾಗಿದೆ. ಇದಕ್ಕೆ ಕೆರೆ ತುಂಬುವಂತಹ ಯೋಜನೆ ಕೈಗೊಳ್ಳುವುದು ದೂರದ ಮಾತು. ಹೊಂಡ ತುಂಬಲು ಮಳೆರಾಯನ ಕೃಪೆಯೇ ಬೇಕು.
– ಇಷ್ಟಲಿಂಗ ಶಿರಸಿ, ಸಾಮಾಜಿಕ ಹೋರಾಟಗಾರ, ಬಾದಾಮಿ
– ಶಶಿಧರ ವಸ್ತ್ರದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.