ಪ್ರತಿನಿತ್ಯ ನಷ್ಟದಲ್ಲಿ ಓಡುತ್ತಿರುವ ಬಿಎಂಟಿಸಿ


Team Udayavani, Sep 22, 2018, 1:15 PM IST

pratinitya.jpg

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಈಗಿರುವ ಎಲ್ಲ ನಿರ್ವಹಣಾ ವೆಚ್ಚಗಳ ಜತೆಗೆ ತನಗೆ ಅರಿವಿಲ್ಲದೆ ಹೆಚ್ಚುವರಿಯಾಗಿ ನಿತ್ಯ ಸರಿಸುಮಾರು ನಾಲ್ಕು ಲಕ್ಷ ರೂ. ನಷ್ಟ ಅನುಭವಿಸುತ್ತಿದೆ. ಈ ನಷ್ಟ ಕಳೆದ ಐದು ತಿಂಗಳಿಂದ ನಿರಂತರವಾಗಿ ಆಗುತ್ತಿದ್ದು, ಈ ಮೊತ್ತದಲ್ಲಿ ಸಂಸ್ಥೆ ಹತ್ತು ಬಸ್‌ಗಳನ್ನು ಖರೀದಿಸಬಹುದಿತ್ತು!

ಹೌದು, ಎಲೆಕ್ಟ್ರಿಕ್‌ ಬಸ್‌ಗಳ ಖರೀದಿ ಅಥವಾ ಲೀಸ್‌ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ಧೋರಣೆಯು ಈಗ ನಷ್ಟದಲ್ಲಿ ಪರಿಣಮಿಸುತ್ತಿದೆ. ಟೆಂಡರ್‌ ಕರೆಯಲಾದ ಕೇವಲ 80 ಎಲೆಕ್ಟ್ರಿಕ್‌ ಬಸ್‌ಗಳನ್ನೇ ಸರ್ಕಾರ ತಕ್ಷಣ ರಸ್ತೆಗಿಳಿಸಿದರೂ ನಿಗಮಕ್ಕೆ ಆಗುತ್ತಿರುವ ಈ ಹೆಚ್ಚುವರಿ ನಷ್ಟವನ್ನು ತಪ್ಪಿಸಬಹುದು.

60 ಹವಾನಿಯಂತ್ರಿತ ಮತ್ತು 20 ನಾನ್‌ ಎಸಿ ಸೇರಿದಂತೆ 80 ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆಯಲ್ಲಿ ಪಡೆದು, ಕಾರ್ಯಾಚರಣೆ ಮಾಡಲು ಕಳೆದ ಡಿಸೆಂಬರ್‌ನಲ್ಲೇ ಟೆಂಡರ್‌ ಕರೆಯಲಾಗಿದೆ. ಅಂದುಕೊಂಡಂತೆ ಎಲ್ಲವೂ ಆಗಿದ್ದರೆ, ಮೇನಲ್ಲೇ ಈ ಬಸ್‌ಗಳು ರಸ್ತೆಗಿಳಿಯಬೇಕಿತ್ತು.

ಆದರೆ, ಹತ್ತು ತಿಂಗಳಾದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಹಾಗಾಗಿ, ಅವುಗಳ ಬದಲಿಗೆ ಡೀಸೆಲ್‌ ಆಧಾರಿತ ಬಸ್‌ಗಳ ಅವಲಂಬನೆ ಅನಿವಾರ್ಯವಾಗಿದೆ. ಇದರಿಂದ ದಿನಕ್ಕೆ ಲಕ್ಷಾಂತರ ರೂ. ಹೆಚ್ಚುವರಿ ವೆಚ್ಚ ತಗಲುತ್ತಿದೆ ಎಂದು ಸಾರಿಗೆ ತಜ್ಞರು ವಿಶ್ಲೇಷಿಸುತ್ತಾರೆ.

ಕಿ.ಮೀ.ಗೆ 30 ರೂ. ಉಳಿತಾಯ: ಡೀಸೆಲ್‌ ಆಧಾರಿತ ವೋಲ್ವೊ ಬಸ್‌ಗೆ ಪ್ರತಿ ಕಿ.ಮೀ.ಗೆ 85 ರೂ. ಖರ್ಚಾಗುತ್ತದೆ. ಅದೇ ರೀತಿ, ಸಾಮಾನ್ಯ ಬಸ್‌ಗೆ 55ರೂ. ವ್ಯಯ ಮಾಡಲಾಗುತ್ತಿದೆ. ಈಗ ಟೆಂಡರ್‌ನಲ್ಲಿ ಭಾಗವಹಿಸಿರುವ ಕಂಪನಿಗಳು ವಿದ್ಯುತ್‌ ಮತ್ತು ನಿರ್ವಾಹಕರ ವೆಚ್ಚ ಸೇರಿ ಕ್ರಮವಾಗಿ 54.55 ರೂ. ಹಾಗೂ 40ರೂ.ಗಳಲ್ಲಿ ಎಲೆಕ್ಟ್ರಿಕ್‌ ಬಸ್‌ ಸೇವೆ ನೀಡಲು ಮುಂದೆಬಂದಿವೆ.

ಅಂದರೆ, ಎರಡೂ ಮಾದರಿ ಬಸ್‌ಗಳ ನಿರ್ವಹಣಾ ವೆಚ್ಚದಲ್ಲಿ ಕ್ರಮವಾಗಿ 30ರೂ. ಹಾಗೂ 15 ರೂ. ವ್ಯತ್ಯಾಸ ಇದೆ. ಪ್ರತಿ ದಿನ ಒಂದು ಬಸ್‌ ಕನಿಷ್ಠ 200 ಕಿ.ಮೀ. ಕಾರ್ಯಾಚರಣೆ ಮಾಡುತ್ತದೆ. ಇದರೊಂದಿಗೆ ನಿರ್ವಹಣಾ ವೆಚ್ಚದ ಅಂತರವನ್ನು ಲೆಕ್ಕಹಾಕಿದರೆ, ಆ ಮೊತ್ತ ನಾಲ್ಕು ಲಕ್ಷ ರೂ. ದಾಟುತ್ತದೆ ಎಂದು ನಿಗಮದ ತಜ್ಞರು ಅಂದಾಜಿಸುತ್ತಾರೆ. 

ಕಳೆದ ಐದು ತಿಂಗಳ ನಷ್ಟದ ಬಾಬ್ತು ನಾಲ್ಕು ಕೋಟಿ ರೂ. ದಾಟುತ್ತದೆ. ಇದು 8-10 ಡೀಸೆಲ್‌ ಆಧಾರಿತ ಸಾಮಾನ್ಯ ಬಸ್‌ಗಳ ಖರೀದಿ ಮೊತ್ತಕ್ಕೆ ಸಮವಾಗಿದೆ. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನಿಗಮವು ಇದರಿಂದ ಹೊರಬರಲು ಪ್ರಯಾಣ ದರ ಏರಿಕೆ ಬರೆ ಎಳೆಯಲು ಮುಂದಾಗಿದೆ. ಮತ್ತೂಂದೆಡೆ ತನ್ನ ವಿಳಂಬ ಧೋರಣೆಯಿಂದ ಆರ್ಥಿಕ ಹೊರೆ ಅನುಭವಿಸುತ್ತಿದೆ.

ಹೆಚ್ಚು-ಕಡಿಮೆ ಕಳೆದ ಒಂದೂವರೆ ವರ್ಷದಿಂದ ಬಿಎಂಟಿಸಿಯು ಎಲೆಕ್ಟ್ರಿಕ್‌ ಬಸ್‌ ಖರೀದಿ ಮಾಡಬೇಕೇ ಅಥವಾ ಗುತ್ತಿಗೆ ಪಡೆದು ರಸ್ತೆಗಿಳಿಸಬೇಕೇ ಎಂಬ ಗೊಂದಲದಲ್ಲೇ ಕಾಲಹರಣ ಮಾಡುತ್ತಿದೆ. ಅಂತಿಮವಾಗಿ ಹಿಂದಿನ ಸರ್ಕಾರದಲ್ಲಿ ಹತ್ತು ವರ್ಷ “ಲೀಸ್‌’ನಲ್ಲಿ ಪಡೆಯಲು ನಿರ್ಧರಿಸಿತು.

2017ರ ಅಂತ್ಯದಲ್ಲಿ ಟೆಂಡರ್‌ ಕೂಡ ಕರೆಯಿತು. ಇದಕ್ಕೆ ಸಬ್ಸಿಡಿ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುಮತಿ ಪಡೆದಿದ್ದೂ ಆಯ್ತು. ಆದರೆ, ಹೊಸ ಸರ್ಕಾರದಲ್ಲಿ ಈ ಮಾದರಿಗೆ ಅಪಸ್ವರ ಕೇಳಿಬರುತ್ತಿದೆ. ಖರೀದಿಯೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹಾಗಾಗಿ, ಎಲೆಕ್ಟ್ರಿಕ್‌ ಬಸ್‌ ಸೇವೆ ಮತ್ತಷ್ಟು ವಿಳಂಬವಾಗುವುದು ಖಚಿತ. 

ಮರುಪರಿಶೀಲನೆಗೆ ಸೂಚನೆ; ಸಚಿವ: “ಪ್ರಸ್ತುತ ಎಲೆಕ್ಟ್ರಿಕ್‌ ಬಸ್‌ಗಳನ್ನು ಲೀಸ್‌ನಲ್ಲಿ ತೆಗೆದುಕೊಂಡು ಸೇವೆ ಒದಗಿಸಲು ಟೆಂಡರ್‌ ಕರೆಯಲಾಗಿದೆ. ಆದರೆ, ಕೇವಲ ಒಂದೇ ಕಂಪನಿಗೆ ಗುತ್ತಿಗೆ ನೀಡಿರುವುದು ಅನುಮಾನಕ್ಕೆ ಎಡೆಮಾಡಿದೆ. ಅಲ್ಲದೆ, ಇನ್ನೂ ಕಡಿಮೆ ದರದಲ್ಲಿ ಸೇವೆ ಸಿಗುವ ಸಾಧ್ಯತೆ ಇದೆ. ಹಾಗಾಗಿ, ಈ ನಿಟ್ಟಿನಲ್ಲಿ ಮರುಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ “ಉದಯವಾಣಿ’ಗೆ ಸ್ಪಷ್ಟಪಡಿಸಿದರು. 

ಅಷ್ಟೇ ಅಲ್ಲ, ಲೀಸ್‌ ಪಡೆದ ಬಸ್‌ಗಳ ನಿರ್ವಹಣೆಗೆ ಬಿಎಂಟಿಸಿ ಜಾಗವನ್ನು ಕೊಡಬೇಕಾಗುತ್ತದೆ. ಸಂಸ್ಥೆಗೆ ಇರುವ ಆಸ್ತಿ ಎಂದರೆ ಈ ಭೂಮಿ. ಇದನ್ನೂ ನಿರ್ವಹಣೆ ನೆಪದಲ್ಲಿ ಕೊಟ್ಟರೆ, ಸಂಸ್ಥೆಗೆ ಸಾಕಷ್ಟು ನಷ್ಟವಾಗುತ್ತದೆ. ಈ ಎಲ್ಲ ದೃಷ್ಟಿಯಿಂದ ಮೊದಲ ಹಂತದಲ್ಲಿ ನಾವೇ (ಬಿಎಂಟಿಸಿ) ಯಾಕೆ ಬಸ್‌ಗಳನ್ನು ಖರೀದಿಸಬಾರದು ಎಂಬ ಆಲೋಚನೆಯೂ ಇದೆ ಎಂದು ಸಚಿವರು ಮಾಹಿತಿ ನೀಡಿದರು. 

ಖರೀದಿ ಮತ್ತೂಂದು ಹಗರಣವಾದರೆ, ಯಾರು ಹೊಣೆ?: ಎಲೆಕ್ಟ್ರಿಕ್‌ ಬಸ್‌ಗಳ ಖರೀದಿ ಬಗ್ಗೆ ಸಚಿವರು ಒಲವು ತೋರುತ್ತಿರುವ ಬೆನ್ನಲ್ಲೇ ಇಂತಹದ್ದೊಂದು ಪ್ರಶ್ನೆ ಕೇಳಿಬರುತ್ತಿದೆ.  ಈ ಹಿಂದೆ 98 ಮಾರ್ಕೊಪೋಲೊ ಬಸ್‌ಗಳನ್ನು ಖರೀದಿಸಲಾಗಿತ್ತು. ಕೆಲವೇ ದಿನಗಳಲ್ಲಿ ಬಸ್‌ಗಳಲ್ಲಿ ದೋಷ ಕಂಡುಬಂದು, ಗುಜರಿಗೆ ಹಾಕಲಾಯಿತು. ಇದರಿಂದ ಕೋಟ್ಯಂತರ ರೂ. ನಷ್ಟವನ್ನೂ ಅನುಭವಿಸಬೇಕಾಯಿತು.

ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಯಲ್ಲೂ ಇದು ಪುನರಾವರ್ತನೆಯಾದರೆ, ಯಾರು ಹೊಣೆ ಎಂಬ ಪ್ರಶ್ನೆ ಎದ್ದಿದೆ. ಇದೇ ಕಾರಣಕ್ಕೆ ಹಿಂದೇಟು ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಲೀಸ್‌ನಲ್ಲಾದರೆ ಇದಾವುದರ ಕಿರಿಕಿರಿ ಇರುವುದಿಲ್ಲ. ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಗುತ್ತಿಗೆ ಪಡೆದ ಕಂಪನಿ ಮೇಲೆ ಇರುತ್ತದೆ. ಸಂಸ್ಥೆಗೆ ಎಂದಿನಂತೆ ಸೇವೆ ಜತೆಗೆ ಉಳಿತಾಯ ಆಗಲಿದೆ ಎಂಬುದು ಇದರ ಹಿಂದಿನ ಲೆಕ್ಕಾಚಾರ. 

1 ರೂ. ಹೆಚ್ಚಾದರೂ 1 ಕೋಟಿ ಹೊರೆ!: ಈ ಮಧ್ಯೆ ಡೀಸೆಲ್‌ ಬೆಲೆ 1 ರೂ. ಹೆಚ್ಚಳವಾದರೂ ಬಿಎಂಟಿಸಿಗೆ ಒಂದು ತಿಂಗಳಿಗೆ ಒಂದು ಕೋಟಿ ರೂ. ಹೊರೆ ಆಗುತ್ತದೆ. ಕಳೆದ ಒಂದು ವರ್ಷದ ಅಂತರದಲ್ಲಿ ಡೀಸೆಲ್‌ ಬೆಲೆ 13 ರೂ. ಏರಿಕೆ ಕಂಡುಬಂದಿದೆ. 2017ರ ಸೆಪ್ಟೆಂಬರ್‌ನಲ್ಲಿ ಡೀಸೆಲ್‌ ಬೆಲೆ ಪ್ರತಿ ಲೀ.ಗೆ 56.27 ರೂ. ಇತ್ತು. ಆಗಸ್ಟ್‌ ಅಂತ್ಯಕ್ಕೆ 69.67 ರೂ. ತಲುಪಿದೆ. ಒಂದು ತಿಂಗಳಿಗೆ ಬಿಎಂಟಿಸಿ ಒಂದು ಕೋಟಿ ಲೀ. ಡೀಸೆಲ್‌ ಖರೀದಿಸುತ್ತದೆ.

ಡೀಸೆಲ್‌ ಆಧಾರಿತ ಬಸ್‌ ಮತ್ತು ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಹಣಾ ವೆಚ್ಚ ಹೀಗಿದೆ
ಬಸ್‌ ಮಾದರಿ    ಪ್ರತಿ ಕಿ.ಮೀ.ಗೆ ತಗಲುವ ವೆಚ್ಚ    

-ವೋಲ್ವೊ    85 ರೂ.
-ಸಾಮಾನ್ಯ ಬಸ್‌    55 ರೂ.
-ಎಸಿ ಎಲೆಕ್ಟ್ರಿಕ್‌    54.55 ರೂ. 
-ನಾನ್‌ ಎಸಿ ಎಲೆಕ್ಟ್ರಿಕ್‌    40.03 ರೂ.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

4-bng

Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.