ಅಧಿಕ ರಕ್ತದೊತ್ತಡ


Team Udayavani, Sep 23, 2018, 6:00 AM IST

high-blood.jpg

ಅಧಿಕ ರಕ್ತದೊತ್ತಡವು ಸಾಮುದಾಯಿಕ ಆರೋಗ್ಯ ಸಮಸ್ಯೆಯಾಗಿ ಕಳವಳಕಾರಿ ಸ್ವರೂಪದಲ್ಲಿದೆ. ಈ ಕುರಿತಂತೆ ಜ್ಞಾನ ವೃದ್ಧಿ, ಗುರುತಿಸುವಿಕೆ, ಚಿಕಿತ್ಸೆ ಮತ್ತು ಅಧಿಕ ರಕ್ತದೊತ್ತಡದ ನಿಯಂತ್ರಣಗಳು ಇನ್ನೂ ಸಮರ್ಪಕವಾಗಿಲ್ಲ. ರೋಗಿಗಳಿಗೆ ಶಿಕ್ಷಣ ನೀಡುವುದು ಮತ್ತು ಪ್ರೇರೇಪಿಸುವುದು ಅತ್ಯಂತ ಪ್ರಾಮುಖ್ಯವಾದುದು. ಜನ ಸಮುದಾಯಗಳ ಭಾಗವಹಿಸುವಿಕೆಯನ್ನು ಒಳಗೊಂಡ ರೋಗ ತಪಾಸಣೆ, ಪತ್ತೆ ಮತ್ತು ಅದರ ನಿರ್ವಹಣೆ ನಡೆಸುವ ರಾಷ್ಟ್ರೀಯ ಮಟ್ಟದ ಯೋಜನೆಗಳು ಈ ಕಾಯಿಲೆಯ ಹೊರೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಬಲ್ಲವು.

ಗಂಭೀರ ಸ್ವರೂಪ
ಅಧಿಕ ರಕ್ತದೊತ್ತಡವು ಒಂದು ಜಾಗತಿಕ ಆರೋಗ್ಯ ಸಮಸ್ಯೆ. ಅವಧಿಪೂರ್ವ ಮರಣಗಳಿಗೆ ಇದು ಒಂದು ಪ್ರಮುಖ ಕಾರಣವಾಗಿದೆ; ಪ್ರತೀ ವರ್ಷ ಸುಮಾರು ಎಂಟು ಕೋಟಿ ಮಂದಿ ಅಧಿಕ ರಕ್ತದೊತ್ತಡದಿಂದ ಸಾಯುತ್ತಿದ್ದಾರೆ. ಸಮಸ್ಯೆ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಲೂ ಇದೆ. ಸುಮಾರು ಶೇ. 40ರಷ್ಟು ಮಂದಿ ವಯಸ್ಕರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಇರುತ್ತದೆ. 

ರಕ್ತದೊತ್ತಡ
ರಕ್ತದೊತ್ತಡವನ್ನು ಸಿಸ್ಟಾಲಿಕ್‌ (ಹೃದಯದ ಸಾಮರ್ಥ್ಯ)/ ಡಯಾಸ್ಟಾಲಿಕ್‌ (ಮೇಲ್ಮೆ„ ರಕ್ತನಾಳಗಳ ಪ್ರತಿರೋಧ ಮಾಪನ) ಮಾಪನಾಂಕಗಳಾಗಿ ಹೇಳಲಾಗುತ್ತದೆ. ಸಹಜ ಸಿಸ್ಟಾಲಿಕ್‌ ರಕ್ತದೊತ್ತಡವು 120 ಎಂಎಂ/ಎಚ್‌ಜಿಗಿಂತ ಕಡಿಮೆ ಇದ್ದರೆ ಡಯಾಸ್ಟಾಲಿಕ್‌ ರಕ್ತದೊತ್ತಡವು 80 ಎಂಎಂ/ಎಚ್‌ಜಿ ಇರುತ್ತದೆ. 120ರಿಂದ 139ರ ನಡುವಣ ಸಿಸ್ಟಾಲಿಕ್‌ ರಕ್ತದೊತ್ತಡ ಮತ್ತು 80ರಿಂದ 89ರ ನಡುವಣ ಡಯಾಸ್ಟಾಲಿಕ್‌ ರಕ್ತದೊತ್ತಡವನ್ನು ಅಧಿಕ ರಕ್ತದೊತ್ತಡದ ಪೂರ್ವ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ವಯಸ್ಕರಲ್ಲಿ  140/90 ಎಚ್‌ಜಿಕ್ಕಿಂತ ಹೆಚ್ಚಿನ  ರಕ್ತದೊತ್ತಡವನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ. 

ಕಾರಣಗಳು
ಅಧಿಕ ರಕ್ತದೊತ್ತಡದ ಸುಮಾರು ಶೇ.95ರಷ್ಟು ಪ್ರಕರಣಗಳಲ್ಲಿ ಯಾವುದೇ ನಿರ್ದಿಷ್ಟ ಕಾರಣ ಗಳು ಕಂಡುಬರುವುದಿಲ್ಲ. ಆದರೆ ಕೆಳಗೆ ವಿವರಿಸಲಾಗಿರುವ ಅಪಾಯಾಂಶಗಳು ಅಧಿಕ ರಕ್ತದೊತ್ತಡ ಉಂಟಾಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ.
ಪರಿವರ್ತಿಸಲಸಾಧ್ಯ ಅಂಶಗಳು:  ವಯಸ್ಸು, ಲಿಂಗ, ವಂಶವಾಹಿ ಅಂಶಗಳು ಮತ್ತು ಜನಾಂಗ ಪರಿವರ್ತನೆ ಸಾಧ್ಯ ಅಂಶಗಳು:  ಅಧಿಕ ದೇಹತೂಕ, ಹೆಚ್ಚು ಸೋಡಿಯಂ ಸೇವನೆ, ಕಡಿಮೆ ಪೊಟ್ಯಾಸಿಯಂ ಸೇವನೆ, ಮದ್ಯಪಾನ ಮತ್ತು ದೈಹಿಕ ಚಟುವಟಿಕೆ ಕಡಿಮೆಯಾಗಿರುವುದುಇನ್ನುಳಿದ ಶೇ. 5ರಷ್ಟು ರೋಗಿಗಳಲ್ಲಿ ಅಧಿಕ ರಕ್ತದೊತ್ತಡಕ್ಕೆ ಕೆಲವು ಕಾರಣಗಳು ಕಂಡುಬರುತ್ತವೆ. ಮೂತ್ರಪಿಂಡ ಕಾಯಿಲೆಗಳು, ಗರ್ಭಧಾರಣೆಗೆ ಸಂಬಂಧಿಸಿದ ಕಾರಣಗಳು, ಪಿಟ್ಯುಟರಿ, ಥೈರಾಯ್ಡ, ಅಡ್ರಿನಲ್‌ ಗ್ರಂಥಿಗಳನ್ನು ಬಾಧಿಸುವ ಎಂಡೊಕ್ರೈನ್‌ ಕಾಯಿಲೆಗಳು, ಬಾಯಿಯ ಮೂಲಕ ಸೇವಿಸುವ ಗರ್ಭನಿರೋಧಕಗಳು, ಸ್ಟಿರಾಯ್ಡ ಗಳು, ನೋವು ನಿವಾರಕಗಳಂತಹ ಕೆಲವು ಔಷಧಗಳ ಸೇವೆ ಅಂಥ ಕಾರಣಗಳಲ್ಲಿ ಕೆಲವು. 

ರೋಗಪತ್ತೆ
ರಕ್ತದೊತ್ತಡವನ್ನು ಸಾಮಾನ್ಯವಾಗಿ ವ್ಯಕ್ತಿಯನ್ನು ಕಾಲುಗಳು ಕೆಳಗಿರುವಂತೆ ಕುಳ್ಳಿರಿಸಿ, ಮೇಲೊ¤àಳಿನಲ್ಲಿ ತಪಾಸಣೆ ಮಾಡಲಾಗುತ್ತದೆ. ಕೆಲವು ಸನ್ನಿವೇಶಗಳಲ್ಲಿ ಎರಡೂ ಕೈಗಳ ಹಾಗೂ ಕಾಲುಗಳ ಒಟ್ಟು ನಾಲ್ಕು ಭಾಗಗಳಲ್ಲಿ ಇದನ್ನು ಪರೀಕ್ಷಿಸಬಹುದು. ತುರ್ತು ಸನ್ನಿವೇಶಗಳನ್ನು ಹೊರತು ಪಡಿಸಿ, ಸಾಮಾನ್ಯವಾಗಿ ವ್ಯಕ್ತಿಯೊಬ್ಬನಿಗೆ ಅಧಿಕ ರಕ್ತದೊತ್ತಡ ಇದೆ ಎಂಬುದಾಗಿ ಹೇಳುವುದಕ್ಕೆ ಮುನ್ನ ನಿರ್ದಿಷ್ಟ ಸಮಯದ ಅಂತರದಲ್ಲಿ ಕನಿಷ್ಟ ಎರಡು ಬಾರಿ ರಕ್ತದೊತ್ತಡವನ್ನು ಪರೀಕ್ಷಿಸಿ ದಾಖಲಿಸಲಾಗುತ್ತದೆ. ಕೆಲವು ರೋಗಿಗಳಲ್ಲಿ ವೈದ್ಯರು ಕೈಗೆ ರಕ್ತದೊತ್ತಡ ಅಳೆಯುವ ಸಲಕರಣೆ ಅಳವಡಿಸಿ, 24 ತಾಸುಗಳ ಅವಧಿಯಲ್ಲಿ ನಿಯಮಿತ ಸಮಯಾಂತರದಲ್ಲಿ ರಕ್ತದೊತ್ತಡವನ್ನು ಸ್ವಯಂಚಾಲಿತವಾಗಿ ಅಳೆಯುವ ಯಂತ್ರದ ಮೂಲಕ ರಕ್ತದೊತ್ತಡದ ಮೇಲೆ ನಿಗಾ ಇರಿಸುತ್ತಾರೆ. 

ಚಿಕಿತ್ಸೆ
ಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದರ ಏಕೈಕ ಉದ್ದೇಶವೆಂದರೆ ಹೃದಯಾಘಾತ, ಹೃದಯ ವೈಫ‌ಲ್ಯ, ಲಕ್ವಾ ಮತ್ತು ಇತರ ಸಂಕೀರ್ಣ ಸಮಸ್ಯೆಗಳು ಉಂಟಾಗು ವುದನ್ನು ಕಡಿಮೆ ಮಾಡುವುದು. ಮಧುಮೇಹ ಮತ್ತು ರಕ್ತನಾಳ ಸಂಬಂಧಿ ಕಾಯಿಲೆಗಳನ್ನು ಹೊಂದಿರುವ ರೋಗಿಗಳು ಹೆಚ್ಚು ಅಪಾಯ ಉಳ್ಳವರಾಗಿದ್ದು, ಇವರಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಕ ಕ್ರಮಗಳನ್ನು ಹೆಚ್ಚು ಕಠಿನವಾಗಿ ಅನುಸರಿಸಬೇಕಾಗುತ್ತದೆ.
 
ಔಷಧೇತರ ನಿಯಂತ್ರಣ ಕ್ರಮಗಳು
ಅಧಿಕ ದೇಹತೂಕ, ಬೊಜ್ಜನ್ನು ನಿಯಂತ್ರಿಸುವುದು, ಮದ್ಯಪಾನ ಪ್ರಮಾಣವನ್ನು ಕಡಿಮೆ ಮಾಡುವುದು. ಉಪ್ಪಿನ ಸೇವನೆಯನ್ನು ಇಳಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಹಾಗೂ ಹಣ್ಣು ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸುವುದರ ಮೂಲಕ ಅಧಿಕ ರಕ್ತದೊತ್ತಡವನ್ನು ಸ್ವಲ್ಪ ಪ್ರಮಾಣದಲ್ಲಿ ನಿಯಂತ್ರಿಸಬಹುದು. 

ಔಷಧಗಳು
ಪ್ರಸ್ತುತ, ವಿಭಿನ್ನ ವರ್ಗಗಳಿಗೆ ಸೇರಿದ, ಭಿನ್ನ ಕಾರ್ಯಶೈಲಿಯನ್ನು ಹೊಂದಿರುವ ಅನೇಕ ಔಷಧಗಳು ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆಯಾಗಿ ಲಭ್ಯವಿವೆ. ರೋಗಿಯ ವಯಸ್ಸು, ಜನಾಂಗೀಯ ಹಿನ್ನೆಲೆ, ಇತರ ಅಂಗಾಂಗಗಳ (ಮೂತ್ರಪಿಂಡಗಳು, ಹೃದಯ ಇತ್ಯಾದಿ)ಸ್ಥಿತಿಗತಿ ಹಾಗೂ ಸಂಭಾವ್ಯ ಅಡ್ಡ ಪರಿಣಾಮಗಳನ್ನು ಪರಿಗಣಿಸಿ ವೈದ್ಯರು ಆರಂಭಿಕ ಔಷಧವನ್ನು ಆಯ್ಕೆ ಮಾಡುತ್ತಾರೆ. ವೆಚ್ಚ ಮತ್ತು ಅನುಕೂಲತೆಗಳು ಕೂಡ ಔಷಧದ ಆಯ್ಕೆಯಲ್ಲಿ ಪರಿಗಣಿತವಾಗುತ್ತವೆ. ಕೆಲವು ರೋಗಿಗಳಿಗೆ ಒಂದು ಔಷಧದ ಮೂಲಕ ಚಿಕಿತ್ಸೆ ಸಾಧ್ಯ, ಆದರೆ ಹೆಚ್ಚಿನ ಸಂದರ್ಭಗಳಲ್ಲಿ ರಕ್ತದೊತ್ತಡವನ್ನು ಯೋಗ್ಯವಾಗಿ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಔಷಧಗಳ ಸಂಯೋಜನೆ ಅಗತ್ಯವಾಗುತ್ತದೆ.

ಕಾಯಿಲೆ ಬರದಂತೆ ಮತ್ತು  ಸಂಕೀರ್ಣ ಸಮಸ್ಯೆಗಳನ್ನು  ತಡೆಯುವುದು
– ಆರೋಗ್ಯಯುತ ಆಹಾರಾಭ್ಯಾಸ: ಕಡಿಮೆ ಉಪ್ಪು ಹಾಗೂ ಯಥೇತ್ಛ ಹಣ್ಣು ತರಕಾರಿಗಳ ಸೇವನೆ
– ಯೋಗ್ಯ ದೇಹತೂಕವನ್ನು ಕಾಪಾಡಿಕೊಳ್ಳುವುದು, ಎತ್ತರಕ್ಕೆ ಅನುರೂಪವಾದ ದೇಹತೂಕವನ್ನು ಸೂತ್ರವೊಂದರ ಮೂಲಕ ಲೆಕ್ಕ ಹಾಕಬಹುದು.
– ಸಾಕಷ್ಟು ದೈಹಿಕ ಚಟುವಟಿಕೆಗಳನ್ನು ನಡೆಸುವುದು: ಸೈಕಲ್‌ ಸವಾರಿ, ಬಿರುಸಾದ ನಡಿಗೆಯಂತಹ ಮಧ್ಯಮ ತೀವ್ರತೆಯ ದೈಹಿಕ ಚಟುವಟಿಕೆಗಳನ್ನು  ದಿನಕ್ಕೆ  ಕನಿಷ್ಟ 30-45 ನಿಮಿಷಗಳ ಕಾಲ ನಡೆಸಬೇಕು. 
– ಧೂಮಪಾನ ವರ್ಜನೆ ಮತ್ತು ಮದ್ಯಪಾನವನ್ನು ಕಡಿಮೆ ಮಾಡುವುದು.
– ನಿಯಮಿತವಾಗಿ ರಕ್ತದೊತ್ತಡ ತಪಾಸಣೆ ಮಾಡಿಸಿಕೊಳ್ಳುವುದು
– ವೈದ್ಯರು ಸೂಚಿಸಿರುವ ಔಷಧಗಳ ಸೇವನೆಯನ್ನು ನಿಯಮಿತವಾಗಿ ನಡೆಸುವುದು.

ಅಧಿಕ ರಕ್ತದೊತ್ತಡದ ಸಮಸ್ಯೆಗಳು
ರಕ್ತನಾಳಗಳು

ರಕ್ತನಾಳಗಳ ಭಿತ್ತಿ ದಪ್ಪಗಾಗುತ್ತದೆ, ರಕ್ತನಾಳಗಳು ಅಂಕು ಡೊಂಕಾಗುತ್ತವೆ ಮತ್ತು ಅವುಗಳ ಒಳಭಾಗದ ಅವಕಾಶ ಕಿರಿದಾಗುತ್ತದೆ. ಇದರ ಫ‌ಲವಾಗಿ ಹೃದಯ ಮತ್ತು ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುತ್ತವೆ. 

ಮಿದುಳು
ಮಿದುಳಿನ ವಿವಿಧ ಭಾಗಗಳಲ್ಲಿ ರಕ್ತಸ್ರಾವ ಮತ್ತು ರಕ್ತದ ಸರಬರಾಜಿಗೆ ಅಡಚಣೆ ಉಂಟಾಗಿ ತಲೆದೋರುವ ನರವ್ಯೂಹ ಸಂಬಂಧಿ ಸಂಕೀರ್ಣ ಸಮಸ್ಯೆಗಳು ಸಾಮಾನ್ಯ. ಅಧಿಕ ರಕ್ತದೊತ್ತಡದಿಂದ ಸಬ್‌ ಅರಕ್ನಾಯಿಡ್‌ ರಕ್ತಸ್ರಾವ (ಮಿದುಳಿನ ಹೊರಭಾಗದಲ್ಲಿ ರಕ್ತಸ್ರಾವ) ಕೂಡ ಉಂಟಾಗುತ್ತದೆ. ಅತ್ಯಧಿಕ ರಕ್ತದೊತ್ತಡದಿಂದ ಎನ್‌ಸೆಫ‌ಲೋ ಪಥಿ ಕೂಡ ತಲೆದೋರಿ ರೋಗಿಯ ಗ್ರಹಣಶಕ್ತಿಯಲ್ಲಿ ವ್ಯತ್ಯಯವಾಗಬಹುದು. 

ಕಣ್ಣುಗಳು
ದೀರ್ಘ‌ಕಾಲದಿಂದ ಅಧಿಕ ರಕ್ತದೊತ್ತಡ ಇದ್ದರೆ ಅದರಿಂದ ರೆಟಿನಾ ಹಾನಿಗೊಳಗಾಗುತ್ತದೆ. ರೆಟಿನಾದಲ್ಲಿರುವ ಸೂಕ್ಷ್ಮ ರಕ್ತನಾಳಗಳಲ್ಲಿ ಅವಕಾಶ ಕಿರಿದಾಗುತ್ತದೆ. ರೆಟಿನಾದ ಒಳಕ್ಕೆ ರಕ್ತಸ್ರಾವವಾಗಿ ದೃಷ್ಟಿ ನಾಶವಾಗುತ್ತದೆ. ಹಠಾತ್ತಾಗಿ ಅಧಿಕ ರಕ್ತದೊತ್ತಡ ಉಂಟಾದರೆ ರೆಟಿನಾದಲ್ಲಿ ಜಲಊತ ತಲೆದೋರಬಹುದು.

ಹೃದಯ
ಅಧಿಕ ರಕ್ತದೊತ್ತಡವು ಹೃದಯ ಸಂಬಂಧಿ ಅನಾರೋಗ್ಯಗಳು ಮತ್ತು ಮರಣಗಳಿಗೆ ನಿಕಟವಾದ ಸಂಬಂಧವನ್ನು ಹೊಂದಿದೆ. ವೆಂಟ್ರಿಕ್ಯುಲಾರ್‌ ಹೈಪರ್‌ಟ್ರೊಫಿ, ಹೃದಯ ವೈಫ‌ಲ್ಯ, ಕಾಡಿರ್ಯಯಾಯಿಕ್‌ ಅರಿತ್ಮಿಯಾಸ್‌ ಮತ್ತು ಹಠಾತ್‌ ಹೃದಯಾಘಾತದಿಂದ ಮರಣಕ್ಕೂ ಅಧಿಕ ರಕ್ತದೊತ್ತಡ ಕಾರಣವಾಗಬಲ್ಲುದು. 

ಮೂತ್ರಪಿಂಡಗಳು
ದೀರ್ಘ‌ಕಾಲೀನ ಅಧಿಕ ರಕ್ತದೊತ್ತಡವು ಮೂತ್ರದ ಮೂಲಕ ಪ್ರೊಟೀನ್‌ ನಷ್ಟವಾಗಲು ಕಾರಣವಾಗುತ್ತದೆ ಹಾಗೂ ಮೂತ್ರಪಿಂಡ ವೈಫ‌ಲ್ಯ ಕ್ರಮೇಣ ತಲೆದೋರುತ್ತವೆ. 

ಅಧಿಕ ರಕ್ತದೊತ್ತಡದ ಲಕ್ಷಣಗಳು
ಅಧಿಕ ರಕ್ತದೊತ್ತಡವನ್ನು ಹೊಂದಿರುವವರು ಸಾಮಾನ್ಯವಾಗಿ ಯಾವುದೇ ಲಕ್ಷಣ ಅಥವಾ ಚಿಹ್ನೆಗಳನ್ನು ಅನುಭವಿಸುವುದಿಲ್ಲ; ಹೀಗಾಗಿ ತಮಗೆ ಅಧಿಕ ರಕ್ತದೊತ್ತಡ ಇದೆ ಎನ್ನುವುದು ಅವರ ಗಮನಕ್ಕೆ ಬರುವುದೇ ಇಲ್ಲ. ಹೀಗಾಗಿಯೇ ಇದನ್ನು “ಸೈಲೆಂಟ್‌ ಕಿಲ್ಲರ್‌’ ಎಂಬುದಾಗಿ ಕರೆಯಲಾಗುತ್ತದೆ. ಮುಂಜಾನೆ ತಲೆನೋವು, ಮೂಗಿನಿಂದ ರಕ್ತಸ್ರಾವವಾಗುವುದು ಮತ್ತು ಕಿವಿ ಗುಂಯ್‌ಗಾಡುವುದು ಕಂಡುಬರಬಹುದಾದ ಸಮಸ್ಯೆಗಳು. ರಕ್ತದೊತ್ತಡವು ಅತ್ಯಂತ ಅಧಿಕವಾ ದಾಗ ಕೆಳಗೆ ವಿವರಿಸಿದಂತಹ ಸಂಕೀರ್ಣ ಸಮಸ್ಯೆಗಳಿಂದ ಉಂಟಾಗುವ ಲಕ್ಷಣ ಗಳು ತಲೆದೋರಬಹುದು. ನಿಯಮಿತವಾಗಿ ರಕ್ತದೊತ್ತಡವನ್ನು ತಪಾಸಿಸಿ ಕೊಳ್ಳುವುದು ಅಧಿಕ ರಕ್ತದೊತ್ತಡವನ್ನು ಪತ್ತೆ ಹಚ್ಚುವುದಕ್ಕೆ ಉತ್ತಮ ಮಾರ್ಗ.

ಅಧಿಕ ರಕ್ತದೊತ್ತಡ ಹೊಂದಿರುವ  ರೋಗಿಯನ್ನು 
ಒಳಪಡಿಸಬೇಕಾದ ತಪಾಸಣೆಗಳು:

ಮೂತ್ರ ವಿಶ್ಲೇಷಣೆ, ರಕ್ತದಲ್ಲಿ ಸಕ್ಕರೆಯಂಶ, ಮೂತ್ರಪಿಂಡ ಕಾರ್ಯಾಚರಣೆಯ ಪರೀಕ್ಷೆಗಳು, ಥೈರಾಯ್ಡ ಕಾರ್ಯಚಟುವಟಿಕೆಯ ಪರೀಕ್ಷೆಗಳು ಮತ್ತು ಇಸಿಜಿ. ಆಯ್ದ ರೋಗಿಗಳಲ್ಲಿ ಅಧಿಕ ರಕ್ತದೊತ್ತಡಕ್ಕೆ ದ್ವಿತೀಯಕ ಕಾರಣವೇನಾದರೂ ಇದೆ ಎಂಬ ಶಂಕೆ ಉಂಟಾದಲ್ಲಿ ವಿಶೇಷ ತಪಾಸಣೆಯನ್ನು ಕೈಗೊಳ್ಳಲಾಗುತ್ತದೆ. 

ವಿಶ್ವ ಹೃದಯ ದಿನಾಚರಣೆ  ಮತ್ತು ದಾನ್‌ ಉತ್ಸವ 2018 ಆರಂಭ
ಮಣಿಪಾಲದ ಕಸ್ತೂರ್ಬಾ ಮೆಡಿಕಲ್‌ ಕಾಲೇಜು, ಕೆಎಂಸಿ ಆಸ್ಪತ್ರೆ, ಮಾಹೆಯ ವಾಲಂಟಿಯರ್‌ ಸರ್ವೀಸಸ್‌ ಆರ್ಗನೈಸೇಶನ್‌ ಮತ್ತು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ವಿಶ್ವ ಹೃದಯ ದಿನ ಮತ್ತು ದಾನ್‌ ಉತ್ಸವ-2018ರ ಆರಂಭ ಕಾರ್ಯಕ್ರಮ ಸೆ.30, 2018ರಂದು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯಲಿದೆ. ಬೆಳಗ್ಗೆ 7.00ಕ್ಕೆ ಕಾರ್ಯಕ್ರಮದ ಆರಂಭ. “ನಿಮ್ಮ ಹೃದಯ, ನನ್ನ ಹೃದಯ’ ಎಂಬ ಧ್ಯೇಯದ ಅಡಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್‌ 2ರಂದು ಬೆಳಗ್ಗೆ 6.30ರಿಂದ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಸಾಮೂಹಿಕ ಯೋಗಾಭ್ಯಾಸ ಮತ್ತು ಹೃದಯ ಪುನಶ್ಚೇತನಕ್ಕೆ ಪ್ರಥಮ ಚಿಕಿತ್ಸೆಯ ತರಬೇತಿ ಕಾರ್ಯಕ್ರಮ ಜರಗಲಿದೆ.

ಹೆಚ್ಚಿನ ಮಾಹಿತಿಗಾಗಿ 9035296971, 9599460465, 8746877721 ಸಂಪರ್ಕಿಸಬಹುದು. 

– ಡಾ| ವಾಸುದೇವ ಆಚಾರ್ಯ, 
ಪ್ರೊಫೆಸರ್‌ ಆಫ್ ಮೆಡಿಸಿನ್‌
ಕೆಎಂಸಿ, ಮಣಿಪಾಲ.

ಟಾಪ್ ನ್ಯೂಸ್

Jharkhand Polls: Coalition of INDIA to power in tribal state; A setback for BJP

Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಸಂಧಿವಾತ ಸಮಸ್ಯೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ ಶರಣಪ್ರಕಾಶ್ ಪಾಟೀಲ್

IRACON:ಸಂಧಿವಾತ ಸಮಸ್ಯೆ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ.ಶರಣಪ್ರಕಾಶ ಪಾಟೀಲ

Jharkhand Polls: Coalition of INDIA to power in tribal state; A setback for BJP

Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.