ಐಬಿಸಿಯಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಧಾರಣೆ
Team Udayavani, Sep 23, 2018, 6:00 AM IST
ಬೆಂಗಳೂರು: ಕೇಂದ್ರ ಸರ್ಕಾರವು ನೂತನವಾಗಿ ಜಾರಿಗೊಳಿಸಿರುವ ದಿವಾಳಿತನ ಸಂಹಿತೆಯಿಂದಾಗಿ(ಐಬಿಸಿ) ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಧಾರಣೆಯಾಗಿದೆ ಎಂದು ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಬಿಜೆಪಿ ಆರ್ಥಿಕ ಪ್ರಕೋಷ್ಠವತಿಯಿಂದ ಆಯೋಜಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕ್ರಮಬದ್ಧ ಆರ್ಥಿಕ ಸುಧಾರಣೆಗಳು ಮತ್ತು ಸಾಮಾನ್ಯ ಜನರ ಮೇಲಿನ ಪ್ರಭಾವ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಬ್ಯಾಂಕುಗಳು ಸಾಲ ವಸೂಲಾತಿ ವಿಷಯದಲ್ಲಿ ಮಧ್ಯಮ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲಾ ಉದ್ಯಮಿಗಳನ್ನು ಸಮಾನವಾಗಿ ಪರಿಗಣಿಸುತ್ತಿವೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ದಿವಾಳಿತನ ಸಂಹಿತೆಯನ್ನು (ಐಬಿಸಿ) ಜಾರಿಗೊಳಿಸಿದೆ. ಇದರಿಂದ ಮಧ್ಯಮ ಉದ್ಯಮಗಳು ಸಾಲ ಮರುಪಾವತಿ ಮಾಡದಿದ್ದರೆ ಸಾಲ ವಸೂಲಿ ಮಾಡಲು ಯಾವ ಕ್ರಮಗಳನ್ನು ಅನುಸರಿಸಲಾಗುತ್ತದೆಯೋ ಅದೇ ಕ್ರಮಗಳನ್ನು ಶ್ರೀಮಂತ ಉದ್ಯಮಿಗಳ ವಿರುದ್ಧವೂ ಕೈಗೊಳ್ಳಲಾಗುತ್ತಿದೆ. ಸುಸ್ತಿದಾರ ಕಂಪನಿಗಳನ್ನು ಸಾಲ ವಸೂಲಾಗದ (ಎನ್‌ಪಿಎ) ವರ್ಗಕ್ಕೆ ಸೇರಿಸಿದರೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದರು.ನೋಟು ಅಮಾನ್ಯಿàಕರಣ ಬಳಿಕ ಜನರು ಕಷ್ಟಪಟ್ಟಿದ್ದರು. ಆದರೆ, ತೆರಿಗೆ ಪಾವತಿಯಿಂದ ದೂರ ಉಳಿದವರನ್ನು ಪತ್ತೆ ಮಾಡಲು ನೋಟು ಅಮಾನ್ಯಿàಕರಣ ಸಹಕಾರಿಯಾಗಿದೆ ಎಂದು ಹೇಳಿದರು.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೂ ಮುನ್ನ ಸಣ್ಣಪುಟ್ಟ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಹೊರರಾಜ್ಯಗಳಿಗೆ ಮಾರಾಟ ಮಾಡಲು ಕಷ್ಟಪಡಬೇಕಾಗಿತ್ತು. ಜಿಎಸ್‌ಟಿಯಿಂದ ಇದಕ್ಕೆಲ್ಲಾ ಮುಕ್ತಿ ಸಿಕ್ಕಂತಾಗಿದೆ. ಹೊರರಾಜ್ಯಗಳಿಗೆ ಸುಲಭವಾಗಿ ತಮ್ಮ ಉತ್ಪನ್ನಗಳನ್ನು ತಲುಪಿಸಬಹುದಾಗಿದೆ. ಯಾವುದೇ ರೀತಿಯಾಗಿ ಅಧಿಕಾರಿಗಳ ಕಿರುಕುಳ ಇಲ್ಲವಾಗಿದೆ ಎಂದುಹೇಳಿದರು. ವಿಧಾನಪರಿಷತ್ ಸದಸ್ಯ ರವಿಕುಮಾರ್, ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಂಚಾಲಕ ವಿಶ್ವನಾಥ್ ಭಟ್ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.