ಲಾಸ್ ಆಗ್ಹೋಗಿದೆ, ಯಾರಿಗೂ ಹೇಳ್ಬೇಡಿ
Team Udayavani, Sep 24, 2018, 6:00 AM IST
ಈಗ ಒಂದು ಲಕ್ಷ ಕೊಡಿ, ಹತ್ತೇ ತಿಂಗಳಲ್ಲಿ ನಿಮಗೆ ಐದು ಲಕ್ಷ ಕಮೀಷನ್ ರೂದಪಲ್ಲಿ ಸಿಗುತ್ತೆ ಅಂತ ಪರಿಚಯದವರು ಹೇಳುತ್ತಾರೆ. ಹಣದಾಸೆಗೆ ನಾವು ಒಪ್ಪಿಬಿಡುತ್ತೇವೆ. ಹತ್ತು ತಿಂಗಳ ನಂತರ ಏನೇನೋ ಆಗುತ್ತದೆ. ನಮಗೆ ಬರೇºಕಿದ್ದುದು ಬಂತು… ಎಂದು ಹಾರಿಕೆ ಮಾತಾಡಿ ಮೌನವಾಗುತ್ತೇವೆ !
ನಮಗೆ ಬಹುಕಾಲದಿಂದ ಪರಿಚಿತರಿರುವ ಕುಟುಂಬ ಅದು. ಮನೆಗೆ ಹೋದಾಗ ಟೀಪಾಯಿಯ ಮೇಲೆ ಹಲವಾರು ಪುಸ್ತಕಗಳು ಇದ್ದವು. ಒಂದೊಂದನ್ನೇ ತೆಗೆದು ನೋಡಿದೆ. ಅವೆಲ್ಲವೂ, ಜೀವನದಲ್ಲಿ ದುಡ್ಡು ಮಾಡುವುದು ಹೇಗೆ? ಯಾವುದೇ ಉತ್ಪನ್ನವನ್ನು ಮಾರ್ಕೆಟಿಂಗ್ ಮಾಡುವ ರೀತಿ ಹೇಗೆ… ಎಂಬಂಥ ವಿಷಯಗಳ ಕುರಿತಂತೆ ಇತ್ತು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಆ ಪುಸ್ತಕಗಳಿದ್ದವು.
ಯಾರು ಯಾವ ಪುಸ್ತಕ ಓದುತ್ತಿದ್ದಾರೆ ಎಂದು ಗಮನಿಸಿದರೆ ಸಾಕು ಈಗ ಅವರು ಏನು ಯೋಚಿಸುತ್ತಿದ್ದಾರೆ, ಅವರಿಗೆ ಯಾವುದರಲ್ಲಿ ಆಸಕ್ತಿ ಇದೆ ಎನ್ನುವುದು ಗೊತ್ತಾಗುತ್ತದೆ. ಅಷ್ಟು ಪುಸ್ತಕ ನೋಡಿದ ಮೇಲೆ ಅವರನ್ನು ಕುತೂಹಲದಿಂದ ಕೇಳಿದೆ: ದುಡ್ಡು ಮಾಡುವುದರಲ್ಲಿ ಈಗ ಬಹಳ ಆಸಕ್ತಿ ಇದ್ದ ಹಾಗಿದೆಯಲ್ಲ..?
ಅವರು ಇದೇ ಅವಕಾಶಕ್ಕೆ ಕಾಯುತ್ತಿದ್ದವರಂತೆ ಉತ್ಸಾಹದಿಂದ ಹೇಳಿದರು “ಹೌದು, ಇದು ನನ್ನ ಸ್ನೇಹಿತರೊಬ್ಬರು ಪರಿಚಯಿಸಿದ ಹೊಸ ಬಿಸಿನೆಸ್. ನಮ್ಮ ಕೆಲಸದ ನಡುವೆಯೇ ಮಾಡಬಹುದು. ಕೇವಲ ಮೂರು ಲಕ್ಷ ರೂಪಾಯಿ ತೊಡಗಿಸಿದರೆ ಸಾಕು. ಇದರಿಂದ ಮೂರು ಕೋಟಿ ರೂಪಾಯಿ ಸಂಪಾದನೆ ಇದೆ. ಕೇವಲ ಕೆಲವೇ ವರ್ಷಗಳಲ್ಲಿ ಇಷ್ಟೆಲ್ಲ ದುಡ್ಡು ಮಾಡಿದವರನ್ನು ನಾನೇ ಕಣ್ಣಾರೆ ಕಂಡಿದ್ದೇನೆ.
“ದುಡ್ಡು ಯಾರಿಗೆ ಬೇಡ ಹೇಳಿ’? ಇಂತಹ ವ್ಯವಹಾರಗಳ ಬಗೆಗೆ ನಂಬಿಕೆ ಇರದ ನನಗೆ ಅವರು ಹೇಳುತ್ತಿರುವುದರಲ್ಲಿ ಆಸಕ್ತಿ ಇರಲಿಲ್ಲ. “ದುಡ್ಡು ಕೊಟ್ಟು ಬಿಟ್ಟಿದ್ದೀರಾ?’ ಕೇಳಿದೆ. ಹೌದು ದುಡ್ಡು ಕೊಟ್ಟ ನಂತರವೇ ಅದರ ಬೆಲೆಗೆ ತಕ್ಕಹಾಗೆ ಎಷ್ಟೋ ವಸ್ತುಗಳನ್ನೂ ಕೊಡುತ್ತಾರೆ. ಪಾರಿನ್ ಟೂರ್ ಕೂಡ ಇದೆ. ಅಂದರು. ಅವರು ಯಾರನ್ನೋ ನಂಬಿ ಹಳ್ಳಕ್ಕೆ ಬೀಳುತ್ತಿರುವುದು ನನಗೆ ಗೊತ್ತಾಗುತ್ತಿದೆ. ಆದರೆ ಹಾಗಂತ ಹೇಳಲು ಆಗಲಿಲ್ಲ.
ಅಷ್ಟು ಹೊತ್ತಿಗೆ ಅವರ ಹೆಂಡತಿ ಅಡುಗೆ ಮನೆಯಿಂದ ಕಾಫಿ ಹಿಡಿದು ಬಂದರು. ಇವರು ಏನನ್ನೋ ಮುಚ್ಚಿಡುವ ಹಾಗೆ ಕಾಣುತ್ತಿತ್ತು. “ನಮ್ಮ ಮನೆಯವರು ಅದೇನೋ ಹೊಸ ಬಿಸಿನೆಸ್ ಅಂತಾ ಹೇಳುತ್ತಿದ್ದಾರೆ. ನನಗಂತೂ ಇದೆಲ್ಲ ಅರ್ಥ ಆಗುವುದಿಲ್ಲ. ಆದರೆ ಕೇವಲ ಮೂರು ಲಕ್ಷ ರೂಪಾಯಿ ಹಾಕಿ ಮೂರು ಕೋಟಿ ರೂಪಾಯಿ ಸಂಪಾದಿಸುವುದೇ ನಿಜ ಆದರೆ,
ಆ ಕೆಲಸವನ್ನು ಎಲ್ಲರೂ ಮಾಡುತ್ತಿರಲಿಲ್ಲವಾ? ಉಳಿದವರು ದಡ್ಡರು ಇವರೊಂದೇ ಬುದ್ಧಿವಂತರಾ? ಯಾರಾದರೂ ಗೊತ್ತಿರುವವರನ್ನು ಸರಿಯಾಗಿ ಕೇಳಿ ಎಂದು ಹೇಳುತ್ತಿದ್ದೇನೆ. ಆದರೆ ಇವರು ನನ್ನ ಮಾತನ್ನು ಕಿವಿಯಮೇಲೆ ಹಾಕಿಕೊಳ್ಳುವುದೇ ಇಲ್ಲ. ಯಾರೋ ಇವರ ತಲೆಯನ್ನು ಚೆನ್ನಾಗಿ ಆಡಿಸಿಬಿಟ್ಟಿದ್ದಾರೆ…’ ಆಕೆ ವಿಷಾದದಿಂದಲೇ ಹೇಳಿದರು.
ಇದು ಕೇವಲ ಅವರೊಬ್ಬರ ಮನೆಯ ಕಥೆ ಅಲ್ಲ. ಎಷ್ಟೋ ಬಾರಿ, ಸಾಮಾನ್ಯ ಸಂಗತಿ ನಮಗೆ ಅರ್ಥ ಆಗುವುದಿಲ್ಲ. ಒಂದು ವೇಳೆ ಅರ್ಥ ಆದರೂ ಏನೋ ಮಿರಾಕಲ್ ಆಗಿಬಿಡತ್ತೆ, ದುಡ್ಡು ಬಂದು ಬಿಡತ್ತೆ ಎನ್ನುವ ಬಹುದೊಡ್ಡ ಭ್ರಮೆಯಲ್ಲಿ ಇರುತ್ತೇವೆ. ಭಾಗ್ಯಲಕ್ಷಿಯೇ ಮನೆಗೆ ಬಂದಳು ಎನ್ನುತ್ತೇವೆ. ನಮ್ಮ ಬದುಕೇ ಬದಲಾಯಿತು ಎನ್ನುತ್ತೇವೆ. ಸತ್ಯವೇನೆಂದರೆ, ನಾವು ಕೇವಲ ಭರವಸೆಯ ಕನಸುಗಳನ್ನು ಕಾಣುತ್ತೇವೆ. ವಿವೇಕಯುತವಾಗಿ ಯೊಚಿಸುತ್ತಿರುವುದಿಲ್ಲ.
ಯಾರಾದರೂ ಈ ಬಿಜಿನೆಸ್‌ಗೆ ಕೈ ಹಾಕಬೇಡಿ, ಇದರಿಂದ ಲಾಸ್ ಆಗಬಹುದು ಎಂದೇನಾದರೂ ಹೇಳಿದರೆ, ಅವರು ಯಾವಾಗಲೂ ಹೀಗೆ ಎನ್ನುತ್ತೇವೆ. ಹಾಗಾಗಿಯೇ ಇತರರಿಗೆ ಹೇಳುವುದಿಲ್ಲ. ಈ ಬಿಸಿನೆಸ್ ಪರಿಚಯಿಸಿದವರು ನಮ್ಮ ಪಾಲಿನ ಆಪದ್ಭಾಂಧವರಾಗಿ ನಿಲ್ಲುತ್ತಾರೆ.
ಎರಡೋ ಮೂರೋ ವರ್ಷದ ನಂತರ ನಮಗೂ ಮರೆತಿರುತ್ತದೆ. ಅವರಿಗೂ ಮರೆತುಹೋಗುತ್ತದೆ. ಯಾರಿಗೆ ಯಾರೋ ಪುರಂದರ ವಿಠಲ. ನಾವು ಹಾಕಿದ ಹಣಕ್ಕೆ ವಸ್ತು ಬಂತಲ್ಲ ಎನ್ನುತ್ತೇವೆ. ಬೇಕೋ ಬೇಡವೋ ಒಂದಿಷ್ಟು ವಸ್ತುಗಳ ಮಾರಾಟ ಆಯಿತು. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವವರು ನಾವು!
* ಸುಧಾಶರ್ಮ ಚವತ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.