ಡಾ| ವೀರೇಂದ್ರ ಹೆಗ್ಗಡೆ ಅವರಿಂದ ಮಹಾವೀರ ಸ್ವಾಮಿ ಪುತ್ಥಳಿ ಅನಾವರಣ
Team Udayavani, Sep 23, 2018, 1:21 PM IST
ಬೆಳ್ತಂಗಡಿ: ಪುಣೆಯ ಎಂಐಟಿ ವಿಶ್ವ ಶಾಂತಿ ವಿಶ್ವವಿದ್ಯಾನಿಲಯ ಹಾಗೂ ರಾಜ್‌ಬಾಗ್‌ನ ಎಂಐಟಿ ಎಡಿಟಿ ವಿಶ್ವವಿದ್ಯಾನಿಲಯದ ವತಿಯಿಂದ ವಿಶ್ವವಾರ್‌ಜಿಬಾಗ್‌ನ ಸಂತ ಶ್ರೀ ಧನ್ಯೇಶ್ವರ ವಿಶ್ವ ಶಾಂತಿ ಪ್ರಾರ್ಥನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಮಹಾಪುರುಷರ ಮೂರ್ತಿಗಳನ್ನು ಅನಾವರಣಗೊಳಿಸಿದ್ದಾರೆ.
ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಭಗವಾನ್ ಮಹಾವೀರ ಸ್ವಾಮಿಯ ಬೃಹತ್ ಪುತ್ಥಳಿಯನ್ನು ಅನಾವರಣಗೊಳಿಸಿದರು. ಬಳಿಕ ಇತಿಹಾಸಕಾರ ಶಿವಶಾಹಿರ್ ಬಾಬಾ ಸಾಹೇಬ ಪುರಂದರೆ, ಡಾ| ಶಂಕರ ಅಭ್ಯಂಕರ್ ಅವರು ಸಮರ್ಥ ರಾಮದಾಸ್ ಅವರ, ಯುಜಿಸಿಯ ಮಾಜಿ ಅಧ್ಯಕ್ಷ ಡಾ| ಅರುಣ್ ನಿಗ್‌ವೇಕರ್ ಅವರು ಮ್ಯಾಕ್ಸ್ ಪ್ಲಾಂಕ್ ಅವರ, ಪಂ| ಹೃದಯನಾಥ ಮಂಗೇಶ್ ಕರ್, ಉಷಾ ಮಂಗೇಶ್‌ಕರ್ ಅವರು ಸಂತ ಮೀರಾ ಬಾಯಿ, ಸಂತ ಕಬೀರ ಅವರ, ಅಯೋಧ್ಯೆ ರಾಮಜನ್ಮಭೂಮಿ ಶಿಲಾನ್ಯಾಸ ಕಾರ್ಯಕಾರಿ ಮಾಜಿ ಅಧ್ಯಕ್ಷ ಡಾ| ರಾಮ ವಿಲಾಸ ವೇದಾಂತಿ, ಅಯೋಧ್ಯೆಯ ಹನುಮಾನ್‌ಗದ್ದಿಯ ಮಹಂತ ರಾಮದಾಸ್ ಅವರು ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ತತ್ತ್ವಜ್ಞಾನದ ಸಂಕೇತವಾಗಿರುವ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮನ ಮೂರ್ತಿಗಳನ್ನು ಲೋಕಾರ್ಪಣೆಗೊಳಿಸಿದರು.
ಡಾ| ವಿಜಯ ಪಿ. ಭಾಟ್ಕರ್, ಪ್ರೊ| ಸ್ವಾತಿ ಎಂ.ಕರಾಡ್ ಚಾಟೆ, ಪ್ರೊ| ರಾಹುಲ್ ವಿ. ಕರಾಡ್, ಪ್ರೊ| ಜ್ಯೋತಿ ಎ. ಕರಾಡ್ ಧಾಕ್ಣೆ, ಡಾ| ವಿಶ್ವನಾಥ್ ಡಿ. ಕರಾಡ್, ಡಾ| ಮಂಗೇಶ್ ಟಿ. ಕರಾಡ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Virat Kohli: ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿರಾಟ್ ನೂತನ ಕೇಶ ವಿನ್ಯಾಸ
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.