ಸಂಪ್ರದಾಯ-ಧರ್ಮ ಬಿಡುವಂತಿಲ್ಲ
Team Udayavani, Sep 25, 2018, 11:08 AM IST
ಕಕ್ಕೇರಾ: ಧರ್ಮ ಬಿಟ್ಟರೆ ಸಂಪ್ರದಾಯ ಬಿಡುವುದಿಲ್ಲ. ಸಂಸ್ಕೃತಿ ಮರೆತರೆ ಧರ್ಮ ಸಮಾಜವನ್ನು ಬಿಡುವುದಿಲ್ಲ ಎಂದು ಹುಣಸಿಹೊಳೆ ಕಣ್ವಮಠದ ಶ್ರೀ ವಿದ್ಯಾವಾರಿ ಧಿತೀರ್ಥ ಶ್ರೀಪಾದಂಗಳು ಹೇಳಿದರು. ಹುಣಸಿಹೊಳೆ ಕಣ್ವಮಠದಲ್ಲಿ ಚತುರ್ಥ ಚಾತುರ್ಮಾಸ್ಯ ಸಂಕಲ್ಪ ಅನುಷ್ಠಾನದ ಸಮಾರೋಪ ಸಮಾರಂಭದ ಭಾದ್ರಪದ ಶುಕ್ಲ ಪೂರ್ಣಿಮೆಯಂದು ಸಭಾ ಕಾರ್ಯಕ್ರಮದಲ್ಲಿ ಆಶೀರ್ವದಿಸಿ ಅವರು, ವಾಸ್ತವ ಜೀವನಕ್ಕೆ ಸಂಪ್ರದಾಯ ಮತ್ತು ಸಂಸ್ಕೃತಿ ಮರೆಯುವಂತಿಲ್ಲ. ತಾಂತ್ರಿಕಯುಗ ಎಷ್ಟೇ ಬದಲಾದರೂ ಆಚಾರ-ವಿಚಾರಗಳು ಮಾತ್ರ ಎಂದಿನಂತೆ ನಡೆಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.
ಶ್ರೀಹರಿಯ ನಾಮಸ್ಮರಣೆಯೊಂದಿಗೆ ಭಗವಂತನ ಕೃಪೆಗೆ ಪಾತ್ರರಾಗಬೇಕು. ಧಾರ್ಮಿಕ ಕಾರ್ಯಗಳ ಬಗ್ಗೆ ನಂಬಿಕೆ ಇಟ್ಟು
ಉತ್ತಮ ಸಂಸ್ಕಾರದೊಂದಿಗೆ ಸಮಾಜದಲ್ಲಿ ಒಳ್ಳೆಯ ಬಾಳು ಕಂಡುಕೊಳ್ಳಬೇಕು ಎಂದು ಹೇಳಿದರು.
ಇದಕ್ಕೂ ಮೊದಲು ಶ್ರೀ ವಿದ್ಯಾವಾರಿ ಧಿತೀರ್ಥ ಶ್ರೀಪಾದಂಗಳು ಸಿಮೋಲ್ಲಂಘನ ಕೃಷ್ಣಾನದಿಯಲ್ಲಿ ದಂಡೋದಕ ಸ್ನಾನ
ಮಾಡಿದರು. ನಂತರ ಶ್ರೀಪಾದಂಗಳು ಅವರ ತುಲಾಭಾರ, ಪಾದಪೂಜೆ, ತಪ್ತ ಮುದ್ರಧಾರಣೆ ಕಾರ್ಯಕ್ರಮ ನಡೆದವು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಿ.ಬಿ. ಕುಲಕರ್ಣಿ ತಿಂಥಣಿ,
ನಾಗರಾಜ ಕೋಣನಕುಂಟೆ, ಮೋಹನ ನಾಡಿಗೇರ, ನಾಗವೇಣಿ, ವತ್ಸಲಾ, ಬಿ.ವಿ. ಗುಡಿ ಬೆಂಗಳೂರು, ವೇಣುಗೋಪಾಲ, ನಾರಾಯಣರಾವ ಜವಳಿ, ಕಿಶನರಾವ್, ವಿದ್ಯಾಸಾಗರ ತಾಂಡೂರ, ಅನಿಲ ದೇಶಪಾಂಡೆ, ಪ್ರಾಣೇಶ ಕುಲಕರ್ಣಿ ಸೇರಿದಂತೆ ವಿಪ್ರ ಸಮಾಜದ ವಿವಿಧ ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.