ಸೂರಿ ಪಾಪ್‌ಕಾರ್ನ್ ವಿಲನ್ ಯಾರು?
Team Udayavani, Sep 25, 2018, 11:13 AM IST
ಸೂರಿ ಹಾಗೂ ಶಿವರಾಜಕುಮಾರ್ ಕಾಂಬಿನೇಶನ್‌ನಲ್ಲಿ ಬಂದ “ಟಗರು’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು ನಿಮಗೆ ಗೊತ್ತೇ ಇದೆ. ಹಾಡು, ಚಿತ್ರದ ಸಂಭಾಷಣೆ ಎಲ್ಲವನ್ನು ಅಭಿಮಾನಿಗಳು ಇಷ್ಟಪಟ್ಟಿದ್ದರು. ಡಾಲಿ ಪಾತ್ರದ ಮೂಲಕ ಧನಂಜಯ್‌ಗೆ ಹೊಸ ಇಮೇಜ್ ಹಾಗೂ ಅವಕಾಶಗಳು ಕೂಡಾ ಸಿಕ್ಕವು. “ಟಗರು’ ಚಿತ್ರವನ್ನು ನಿರ್ಮಿಸಿದವರು ಕೆ.ಪಿ.ಶ್ರೀಕಾಂತ್. ಈಗ ಈ ಜೋಡಿ ಮತ್ತೆ ಒಂದಾಗಿದೆ.
ಶ್ರೀಕಾಂತ್, ಸೂರಿ ಹಾಗೂ ಧನಂಜಯ್ “ಪಾಪ್‌ಕಾರ್ನ್ ಮಂಕಿಟೈಗರ್’ ಚಿತ್ರದ ಮೂಲಕ ಒಂದಾಗಿರುವ ವಿಚಾರ ನಿಮಗೆ ಗೊತ್ತೇ. ಈಗಾಗಲೇ ಸದ್ದಿಲ್ಲದೇ ಚಿತ್ರೀಕರಣ ಕೂಡಾ ಆರಂಭವಾಗಿದೆ. ಧನಂಜಯ್, ನಿವೇದಿತಾ, ಅಮೃತಾ, ಸಪ್ತಮಿ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ನಟಿಸುತ್ತಿದ್ದಾರೆ. ಕಳೆದ ಬಾರಿ “ಟಗರು’ ಚಿತ್ರದಲ್ಲಿ ಧನಂಜಯ್ ತಮ್ಮ ಡಾಲಿ ಪಾತ್ರದ ಮೂಲಕ ಶಿವರಾಜಕುಮಾರ್ ಎದುರು ಖಡಕ್ ವಿಲನ್ ಆಗಿ ಮಿಂಚಿದ್ದರು.
ಹಾಗಾದರೆ ಈ ಬಾರಿ ಧನಂಜಯ್ ಎದುರು ಯಾರು ವಿಲನ್ ಆಗಿ ಅಬ್ಬರಿಸುತ್ತಾರೆಂಬ ಕುತೂಹಲ ಅನೇಕರಲ್ಲಿದೆ. ಸೂರಿ ಈ ಬಾರಿಯೂ ಖಡಕ್ ವಿಲನ್‌ನನ್ನೆ ತಂದು ನಿಲ್ಲಿಸಲು ರೆಡಿಯಾಗಿದ್ದಾರೆ. ಈಗಾಗಲೇ ಅದಕ್ಕಾಗಿ ಹುಡುಕಾಟ ನಡೆದಿದೆ. ಜೊತೆಗೆ ಹೊಸ ಮ್ಯಾನರೀಸಂನೊಂದಿಗೆ ವಿಲನ್‌ನ ತೋರಿಸಲಿದ್ದಾರೆ. ಹಾಗಾದರೆ ವಿಲನ್ ಯಾರಾಗಬಹುದು ಎಂದು ಕೇಳಿದರೆ ಸದ್ಯಕ್ಕೆ ಉತ್ತರವಿಲ್ಲ. ಆದರೆ, ಈ ಬಾರಿಯೂ ವಿಲನ್ ಪಾತ್ರ ಮಜ ಕೊಡುವುದರಲ್ಲಿ ಎರಡು ಮಾತಿಲ್ಲ.
ಸೂರಿ ಈ ಬಾರಿಯೂ ತಮ್ಮ ಎಂದಿನ ಶೈಲಿಯಲ್ಲಿಯೇ ಚಿತ್ರೀಕರಣ ಮಾಡುತ್ತಿದ್ದಾರೆ. ನೈಜವಾಗಿ ಮೂಡಿಬರಬೇಕೆಂಬ ಉದ್ದೇಶದಿಂದ ಸೆಟ್ ಬದಲು ಸಣ್ಣ ಕೋಣೆ ಸೇರಿದಂತೆ ಇತರ ಜಾಗದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ನಡೆಯುತ್ತಿದ್ದು, ಬೆಂಗಳೂರು, ಗೋಕಾಕ್, ಮುಂಬೈ, ಶಿವಮೊಗ್ಗ ಸುತ್ತಮುತ್ತ ನಡೆಯಲಿದೆ. ಎರಡನೇ ಬಾರಿಗೆ ಹಿಟ್ ಕಾಂಬಿನೇಶನ್ ಒಂದಾಗಿರುವುದರಿಂದ ಈ ಸಿನಿಮಾ ಒಂದಷ್ಟು ನಿರೀಕ್ಷೆ ಇರುವುದು ಸುಳ್ಳಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.