ಒಲ್ಲದ ಮನಸ್ಸಿನಿಂದ ಪೂನಾ ಒಪ್ಪಂದಕ್ಕೆ ಸಹಿ


Team Udayavani, Sep 25, 2018, 12:03 PM IST

ollada.jpg

ಬೆಂಗಳೂರು: ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿ ಪೂನಾ ಒಡಂಬಡಿಕೆಗೆ ಸಹಿ ಹಾಕಿದ ಡಾ.ಬಿ.ಆರ್‌.ಅಂಬೇಡ್ಕರ್‌, ಆ ದಿನವನ್ನು ತಳ ಸಮುದಾಯಗಳ ಪಾಲಿನ ಕರಾಳ ದಿನ ಎಂದು ಕರೆಯುತ್ತಿದ್ದರು ಎಂದು ರಾಜ್ಯಸಭಾ ಸದಸ್ಯ ಡಾ.ಎಲ್‌.ಹನುಮಂತಯ್ಯ ತಿಳಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ 1932 ಪೂನಾ ಒಡಂಬಡಿಕೆ ಅಂದು-ಇಂದು? ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಳ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಅಂಬೇಡ್ಕರ್‌ ಸವರ್ಣೀಯರಿಗೆ ದ್ವಿಮತದಾನ ಸೇರಿ ಹಲವು ಹಕ್ಕುಗಳಿಗೆ ಬೇಡಿಕೆ ಇಟ್ಟಿದ್ದರು.

ಆದರೆ, ದ್ವಿಮತದಾನದಿಂದ ವ್ಯವಸ್ಥೆಯಲ್ಲಿ ಅಸಮಾನತೆ ಉಂಟಾಗುತ್ತದೆ ಎಂದು ಅಂಬೇಡ್ಕರ್‌ ಅವರ ಬೇಡಿಕೆಗಳಿಗೆ ಒಪ್ಪದ ಗಾಂಧೀಜಿ, ಉಪವಾಸ ಸತ್ಯಾಗ್ರಹ ಆರಂಭಿಸಿದರು. ಗಾಂಧೀಜಿ ಸತ್ಯಾಗ್ರಹ ತೀವ್ರವಾಗುತ್ತಿದ್ದಂತೆ ಅಂದಿನ ಪ್ರಮುಖ ಮುಖಂಡರು ಬೇಡಿಕೆ ಹಿಂಪಡೆಯಲು ಒತ್ತಡ ಹಾಕಿದರು. ಇದಕ್ಕೆ ಕಟ್ಟುಬಿದ್ದು ಅಂಬೇಡ್ಕರ್‌ ಒಲ್ಲದ ಮನಸ್ಸಿನಿಂದ ಪೂನಾ ಒಪ್ಪಂದಕ್ಕೆ ಸಹಿ ಹಾಕಿ ನಮ್ಮ ಜನರ ಪಾಲಿನ ಕರಾಳ ದಿನ ಕರೆದಿದ್ದರು ಎಂದು ಹೇಳಿದರು.

ದಲಿತರಿಗೆ ರಾಜಕೀಯ ಸ್ಥಾನಮಾನ ಸಿಕ್ಕರೆ ಮಾತ್ರ ಅಭಿವೃದ್ಧಿ ಸಾಧ್ಯವೆಂದು ತಿಳಿದಿದ್ದ ಅಂಬೇಡ್ಕರ್‌ ದ್ವಿಮತದಾನಕ್ಕೆ ಬೇಡಿಕೆ ಇಟ್ಟಿದ್ದರು. ಅದು ಸಾಧ್ಯವಾಗದೆ ಕೇವಲ ಚುನಾವಣಾ ಮೀಸಲು ಕ್ಷೇತ್ರ ಅವಕಾಶ ಲಭ್ಯವಾಯಿತು. ಆದರೆ, ಆ ಕ್ಷೇತ್ರಗಳಲ್ಲಿ ಇಂದಿಗೂ ಗೆಲುವು ಸಾಧಿಸಲು ಮೇಲ್ವರ್ಗದವರ ಕೈಚಾಚಬೇಕಿದೆ. ಅವರ ವಿರೋಧ ಕಟ್ಟಿಕೊಂಡು ಗೆದ್ದವರೇ ಇಲ್ಲ.

ಇದಕ್ಕೆ ಮುಖ್ಯಕಾರಣ ಒಗ್ಗಟ್ಟಿನ ಕೊರತೆ. ಇನ್ನು ರಾಜ್ಯದಲ್ಲಿ 36 ಮೀಸಲು ಕ್ಷೇತ್ರಗಳಿದ್ದು, ಅವುಗಳಿಂದ ಆಯ್ಕೆಯಾಗಿ ಬಂದವರು ಒಗ್ಗಟ್ಟಿನಿಂದ ನಿಂತರೆ ತಳ ಸಮುದಾಯಗಳ ಅಭಿವೃದ್ಧಿ ಕಷ್ಟವೇನಲ್ಲ ಎಂದು ಅಭಿಪ್ರಾಯಪಟ್ಟರು. ಭಾರತೀಯ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ ಡಾ.ಮನೋಹರ ಯಾದವ್‌ ಮಾತನಾಡಿ, ಇಂದು ಊರುಗಳಲ್ಲಿ ರಸ್ತೆ, ಮನೆಗಳ ರೂಪ ಬದಲಾಗಿರಬಹುದು ಜಾತಿ ಮನಸ್ಥಿತಿ ಬದಲಾಗಿಲ್ಲ.

ಅದಕ್ಕಾಗಿಯೇ ಕರ್ನಾಟಕದಲ್ಲಿ ಇಂದಿಗೂ ದಲಿತರೊಬ್ಬರು ಮುಖ್ಯಮಂತ್ರಿಯಾಗಲಿಲ್ಲ. ದಲಿತರಿಗಾಗಿ ಒಂದು ಸಹಕಾರಿ ಬ್ಯಾಂಕ್‌ ಇಲ್ಲ ಎಂದು ಹೇಳಿದರು. ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌, ಬರಹಗಾರ ಸುರೇಶ್‌ ಗೌತಮ್‌, ಪತ್ರಕರ್ತೆ ಶಾಂತಕುಮಾರಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

death

Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್‌ ಸಾವು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.