ಶಾಲಾ ಸಾಮಗ್ರಿ ಸ್ಥಳಾಂತರಕ್ಕೆ ಮುಖ್ಯಗುರು ನಿರ್ಲಕ್ಷ್ಯ
Team Udayavani, Sep 25, 2018, 3:45 PM IST
ಕೆಂಭಾವಿ: ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಗೆ ಉರ್ದು ಪ್ರೌಢಶಾಲೆ ಸ್ಥಳಾಂತರ ಆದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ರದ್ದುಗೊಳಿಸಿ ಆದೇಶ ಹೊರಡಿಸಿದ್ದರೂ ಅವರ ಆದೇಶ ದಿಕ್ಕರಿಸಿ ಉರ್ದು ಪ್ರೌಢಶಾಲೆ ಮುಖ್ಯಗುರು ಶಾಲಾ ಸಾಮಗ್ರಿಗಳನ್ನು ಸ್ಥಳಾಂತರಿಸದೆ ಉದ್ಧಟತನ ತೋರಿದ ಪ್ರಸಂಗ ಸೋಮವಾರ ನಡೆಯಿತು.
ಬಾಲಕರ ಪ್ರೌಢಶಾಲೆ ಐದು ತರಗತಿಗಳಿಗೆ ಬೀಗ ಜಡಿದಿದ್ದರಿಂದ ವಿದ್ಯಾರ್ಥಿಗಳು ಅಕ್ಷರಹಃ ಬೀದಿಗೆ ಬಿದ್ದಂತಾಗಿದೆ. ಸೆ. 20ರಂದೇ ಸ್ಥಳಾಂತರ ಆದೇಶ ರದ್ದುಗೊಳಿಸಿದ್ದರೂ ಶಾಲಾ ಕೊಠಡಿಗಳನ್ನು ಬಿಟ್ಟು ಹೋಗಲು ಮೀನಮೇಷ ಎಣಿಸುತ್ತಿರುವ ಉರ್ದು ಪ್ರೌಢಶಾಲೆ ಮುಖ್ಯಗುರುಗಳ ಈ ನಡೆ ಹಲವು ಅನುಮಾನಕ್ಕೆ ಕಾರಣವಾಗಿದೆ.
ಶಾಲೆಗೆ ಬೀಗ ಹಾಕಿದ್ದರಿಂದ ಶನಿವಾರ ಹಾಗೂ ಸೋಮವಾರ ಬಾಲಕರ ಪ್ರೌಢಶಾಲೆ ವಿದ್ಯಾರ್ಥಿಗಳು ಶಾಲೆಯ ಹೊರಗೆ ಬಿಸಿಲಿನಲ್ಲಿ ಕುಳಿತು ತರಗತಿಗಳನ್ನು ಕೇಳುವ ಪರಿಸ್ಥಿತಿ ನಿರ್ಮಾಣವಾಯಿತು.
ಯಾವದೇ ಶಾಲೆಯನ್ನು ಸ್ಥಳಾಂತರ ಮಾಡುವುದಿದ್ದರೆ ಎಸ್‌ಡಿಎಂಸಿ ಅಧ್ಯಕ್ಷರ ನೇತೃತ್ವದಲ್ಲಿ ಪಾಲಕರ ಸಭೆ ಕರೆದು ಪಾಲಕರ ಅನುಮತಿ ಪಡೆದು ಶಾಲೆ ಸ್ಥಳಾಂತರ ಮಾಡಬೇಕು ಎಂಬ ಸರ್ಕಾರದ ಆದೇಶ ಇದ್ದರೂ ಉರ್ದು ಶಾಲೆ ಮುಖ್ಯಗುರು ಇದಾವುದನ್ನು ಪಾಲಿಸದೇ ಗುರುವಾರ ಉರ್ದು ಶಾಲೆ ಬಾಲಕರ ಶಾಲೆಗೆ ಸ್ಥಳಾಂತರ ಮಾಡಿದ ಬಗ್ಗೆ ಪಾಲಕರಲ್ಲಿ ಹಲವು ಅನುಮಾನ ಮೂಡಿದೆ. ಮೇಲಧಿಕಾರಿಗಳ ಆದೇಶಕ್ಕೂ ಬೆಲೆ ಇಲ್ಲವೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಉರ್ದು ಶಾಲೆ ಸ್ಥಳಾಂತರ ಕುರಿತು ಪಟ್ಟಣದಲ್ಲಿ ಕೆಲವು ದಿನಗಳಿಂದ ನಾಟಕೀಯ ಬೆಳವಣಿಗೆ ನಡೆಯುತ್ತಿದ್ದು, ಮೊದಲು ಇದ್ದಲ್ಲಿ ಉರ್ದು ಶಾಲೆ ನಡೆಸಬೇಕು. ಒಂದು ವೇಳೆ ಬಾಲಕರ ಪ್ರೌಢಶಾಲೆಗೆ ಉರ್ದು ಶಾಲೆ ಸ್ಥಳಾಂತರಗೊಂಡರೆ ವಿವಿಧ ಸಂಘಟನೆಗಳ ಹಾಗೂ ವಿದ್ಯಾರ್ಥಿಗಳ ಜತೆ ಸೇರಿ ಶಾಲೆ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು.
ವಿರುಪಾಕ್ಷಿ ಕರಡಕಲ್ ದಲಿತಪರ ಸಂಘಟನೆ ಮುಖಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
Yadgiri: ಸಿದ್ದರಾಮಯ್ಯನವರಿಗೆ ರೈತರ ಶಾಪ ತಟ್ಟಲಿದೆ: ವಿಜಯೇಂದ್ರ
Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.