ನೀನು ಆಗ ಹೀಗೆ ಮಾಡಿದ್ದೆಯಲ್ಲ?


Team Udayavani, Sep 26, 2018, 6:00 AM IST

e-28.jpg

ಯಾವಾಗೆಲ್ಲ ಅಮೆರಿಕ ಸೋವಿಯತ್‌ ಒಕ್ಕೂಟದ ಮೇಲೆ ಮಾನವ ಹಕ್ಕು ಉಲ್ಲಂಘನೆಯ ಆರೋಪ ಮಾಡುತ್ತಿತ್ತೋ ಆಗೆಲ್ಲ ಸೋವಿಯತ್‌ ಒಕ್ಕೂಟ ತಕ್ಷಣ ಹೇಳುತ್ತಿತ್ತು: “ನೀವು ಕರಿಯರನ್ನು ಸಾಮೂಹಿಕವಾಗಿ ಹತ್ಯೆ ಮಾಡುತ್ತಿದ್ದಿರಲ್ಲ? ಅದನ್ನು ಹೇಳಿ!’ 

“”ಯಾವ ಪರಿವಾರವು ಬೋಫೋರ್ಸ್‌ ಪ್ರಕರಣದಲ್ಲಿ ಲಂಚ ಪಡೆದು ಭ್ರಷ್ಟಾಚಾರದ ಮಾಡಿತ್ತೋ, ಯಾರ ಇಡೀ ಪರಿವಾರ ದೇಶದಲ್ಲಿ ಭ್ರಷ್ಟಾಚಾರವನ್ನು ಹುಟ್ಟುಹಾಕಿತೋ…ಆ ಪರಿವಾರದ ರಾಹುಲ್‌ ಗಾಂಧಿ ನಮ್ಮ ಪ್ರಧಾನಿಗಳ ಬಗ್ಗೆ ಈ ರೀತಿಯ ಮಾತನಾಡುತ್ತಿದ್ದಾರೆ”
ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಅವರು ಇತ್ತೀಚೆಗೆ ರಾಹುಲ್‌ಗಾಂಧಿಯವರಿಗೆ ಅವರ ಕುಟುಂಬದ ಇತಿಹಾಸವನ್ನು ನೆನಪು ಮಾಡಿಕೊಡಲು ಪ್ರಯತ್ನಿಸಿದರು. ಅವರ ಪ್ರಕಾರ ರಾಹುಲ್‌ ಗಾಂಧಿಯವರು ರಫೇಲ್‌ ಯುದ್ಧ ಒಪ್ಪಂದದ ವಿಚಾರದಲ್ಲಿ ಪ್ರಧಾನಿಯ ವಿರುದ್ಧ ಬೆರಳು ತೋರಿಸಲು ಲಾಯಕ್‌ ಆಗಿ ಉಳಿದಿಲ್ಲ. 

ರವಿಶಂಕರ ಪ್ರಸಾದ್‌ ಅವರು ಅನುಸರಿಸಿದ ರಣನೀತಿ ಇದೆಯಲ್ಲ, ಇದನ್ನು ತರ್ಕಶಾಸ್ತ್ರದ ಭಾಷೆಯಲ್ಲಿ “ವಾಟಬೌಟರಿ’ ಎನ್ನಲಾಗುತ್ತದೆ. ಇದನ್ನು ಬಿಡಿಸಿ ಹೇಳುವುದಾದರೆ “ಆಗ ಹಾಗಾಯಿತಲ್ಲ, ಆವಾಗ ನೀನೆಲ್ಲಿದ್ದೆ?’ ಅಥವಾ “ಆವಾಗ ನೀನೇನು ಮಾಡಿದ್ದೆ ನೆನಪು ಮಾಡಿಕೋ’ ಎನ್ನುವುದು! ಅಂದರೆ ಪ್ರಶ್ನೆಗೆ ಉತ್ತರಿಸುವ ಬದಲು ಮರುಪ್ರಶ್ನೆ ಹಾಕುವುದು ಅಥವಾ ಇನ್ಯಾವುದೋ ವಿಷಯವನ್ನು ಎತ್ತುವುದು.

ಎಲ್ಲಕ್ಕಿಂತ ಕುತೂಹಲಕರ ಅಂಶವೆಂದರೆ ಇತ್ತ ರಾಹುಲ್‌ ಗಾಂಧಿ ಯುದ್ಧ ವಿಮಾನ ಒಪ್ಪಂದದ ಬಗ್ಗೆ ಕೇಂದ್ರ ಸರ್ಕಾರದಿಂದ ಉತ್ತರ ನಿರೀಕ್ಷಿಸಿದರೆ, ಆ ಪ್ರಶ್ನೆಗೆ ಉತ್ತರಿಸುವ ಬದಲು ಬಿಜೆಪಿಯು ಕಾಂಗ್ರೆಸ್‌ಗೆ ಅದರ ಇತಿಹಾಸವನ್ನು ನೆನಪಿಸುವುದಕ್ಕೆ ಕಾರಣವೇನಿರಬಹುದು? ಇದಕ್ಕೆಲ್ಲ ಏನು ಅರ್ಥವಿರಬಹುದು? ಇದು ಅತ್ಯಂತ ಘಾತಕ ಅಸ್ತ್ರ. ಈ ಅಸ್ತ್ರದ ಪ್ರಯೋಗದಿಂದ ಯಾವುದೇ ಚರ್ಚೆಯನ್ನು ಎಲ್ಲಿಂದ ಎಲ್ಲಿಗೋ ಒಯ್ದುಬಿಡಬಹುದು ಮತ್ತು ಅದಕ್ಕಿಂತ ಮೊದಲು ಕೊಟ್ಟ ಎಲ್ಲಾ ತರ್ಕಗಳೂ ತಮ್ಮ ಅರ್ಥಕಳೆದುಕೊಳ್ಳಬಹುದು.

ಈ ಅಸ್ತ್ರದ ಅತಿದೊಡ್ಡ ಲಾಭವೆಂದರೆ ನಿಮ್ಮತ್ತ ಯಾವುದಾದರೂ ಪ್ರಶ್ನೆ ತೂರಿಬರುತ್ತದೆ ಎಂದರೆ ಆ ಪ್ರಶ್ನೆಯನ್ನು ವೇಗವಾಗಿ ಗಾಳಿಯಲ್ಲೇ ಛಿದ್ರಗೊಳಿಸಿ ಪ್ರಶ್ನಿಸುವವನನ್ನೇ ಕಟಕಟೆಯಲ್ಲಿ ನಿಲ್ಲಿಸಬಹುದು! ನ್ಯೂಸ್‌ ಚಾನೆಲ್‌ಗ‌ಳಲ್ಲಿ ನಡೆಯುವ ಚರ್ಚೆಗಳಲ್ಲಿ ವಾಟಬೌಟರಿ ಬಹಳ ಕಾಣಿಸುತ್ತದೆ. ರಾಜಕೀಯ ಪಕ್ಷಗಳ ವಕ್ತಾರರು ದಿನನಿತ್ಯ ತಮ್ಮತ್ತ ತೂರಿಬರುವ ಪ್ರಶ್ನೆಗಳಿಂದ ಎಷ್ಟು ಸುಂದರವಾಗಿ ನುಣುಚಿಕೊಳ್ಳುತ್ತಾರೆ ಎಂದರೆ ಅವರು ಈ ಅಸ್ತ್ರದಿಂದಲೇ ಬಹುಬೇಗನೇ ಬೆಳೆದುಬಿಡುತ್ತಾರೆ.  

ರಾಜಕೀಯ ಚರ್ಚೆಗಳಲ್ಲಿ ಪ್ರಶ್ನೆಗಳನ್ನು ಎದುರಿಸುವ ಈ ತಂತ್ರ ಖಂಡಿತವಾಗಿಯೂ ಪ್ರಸಕ್ತ ಸರ್ಕಾರದ ಆವಿಷ್ಕಾರವೇನೂ ಅಲ್ಲ. ಇತಿಹಾಸಜ್ಞರ ಪ್ರಕಾರ ವಾಟಬೌಟರಿ ಎನ್ನುವುದು ಪ್ರಮುಖ ಅಸ್ತ್ರವಾಗಿದ್ದು ಜಗತ್ತಿನಲ್ಲಿ ಶೀತಲ ಸಮರ ಉತ್ತುಂಗದಲ್ಲಿದ್ದ ಸಮಯದಲ್ಲಿ. ಮುಖ್ಯವಾಗಿ ಅಮೆರಿಕ ಮತ್ತು ಸೋವಿಯತ್‌ ಒಕ್ಕೂಟ ವಿಶ್ವ ಪಟಲದ ಮೇಲೆ ಒಬ್ಬರನ್ನೊಬ್ಬರು ಕೀಳಾಗಿ ತೋರಿಸಲು ಪ್ರಯತ್ನಿಸುತ್ತಿದ್ದಾಗ ಈ ವಾಟಬೌಟರಿ ಅತಿ ಹೆಚ್ಚು ಬಳಕೆಯಾಯಿತು. 

ಆ ಸಮಯ ಹೇಗಿತ್ತೆಂದರೆ ಬಂಡವಾಳಶಾಹಿ ಮತ್ತು ಕಮ್ಯುನಿಸ್ಟ್‌ ಶಕ್ತಿಗಳ ನಡುವೆ ಮುಖಾಮುಖೀಯಿತ್ತು. ತಾವೇ ಶ್ರೇಷ್ಠರು ಎನ್ನುವುದನ್ನು ತೋರಿಸಿಕೊಳ್ಳಲು ಇವು ಪರಸ್ಪರರ ವಿರುದ್ಧ “ವಾಟಬೌಟರಿ’ ಅಸ್ತ್ರವನ್ನು ಬಳಸಿಕೊಂಡಿದ್ದವು. ಯಾವಾಗೆಲ್ಲ ಅಮೆರಿಕ ಸೋವಿಯತ್‌ ಒಕ್ಕೂಟದ ಮೇಲೆ ಮಾನವ ಹಕ್ಕು ಉಲ್ಲಂಘನೆಯ ಆರೋಪ ಮಾಡುತ್ತಿತ್ತೋ ಆಗೆಲ್ಲ ಸೋವಿಯತ್‌ ಒಕ್ಕೂಟ ತಕ್ಷಣ ಹೇಳುತ್ತಿತ್ತು-“ಆ್ಯಂಡ್‌ ಯೂ ವೇರ್‌ ಲಿಂಚಿಂಗ್‌ ನೀಗ್ರೋಸ್‌!’ ಅಂದರೆ “ನೀವು ಕರಿಯರನ್ನು ಸಾಮೂಹಿಕವಾಗಿ ಹತ್ಯೆ ಮಾಡುತ್ತಿದ್ದಿರಲ್ಲ? ಅದನ್ನು ಹೇಳಿ!’ 

ವರಿಷ್ಠ ಪತ್ರಕರ್ತ ಮಧುಸೂಧನ್‌ ಆನಂದ್‌ ಈ ವಿಷಯವಾಗಿ ಹೇಳುತ್ತಾರೆ, “”ಮೊದಲೆಲ್ಲ ಜಗತ್ತಿನಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ವಿಚಾರ ಬಂದಾಗ ಈ ರೀತಿ ಮಾತನಾಡುವುದಕ್ಕೆ ಭಯ ಪಡಲಾಗುತ್ತಿತ್ತು. ಆದರೆ ಶೀತಲ ಸಮರದ ನಂತರವಂತೂ ಪರಿಸ್ಥಿತಿ ವೇಗವಾಗಿ ಬದಲಾಯಿತು. ಕ್ಯೂಬಾ ಕ್ಷಿಪಣಿ ಸಂಕಟ ಎದುರಾಗುವುದಕ್ಕಿಂತ ಮೊದಲು ಅಮೆರಿಕ ಮತ್ತು ಸೋವಿಯತ್‌ ಸಂಘದ ನಡುವೆ ಇಂಥದ್ದೇ ವಾಗ್ಯುದ್ಧವಾಗಿತ್ತು.”
ವಾಟಬೌಟರಿಯ ಇತಿಹಾಸ ಮಹರ್ಷಿ ವ್ಯಾಸರ ಮಹಾಕಾವ್ಯ ಮಹಾಭಾರತದಲ್ಲೂ ಸಿಗುತ್ತದೆ. ಕುರುಕ್ಷೇತ್ರದಲ್ಲಿ ರಣ ನಿಯಮಗಳನ್ನು ಉಲ್ಲಂ ಸುವ ಭೀಮ ದುರ್ಯೋಧನನ ತೊಡೆಗಳ ಮೇಲೆ ಪ್ರಹಾರ ಮಾಡುತ್ತಾನೆ. ಭೀಮ ನಿಯಮ ಮುರಿದನೆಂದು ಬಲರಾಮ ಸಿಟ್ಟಾಗುತ್ತಾನೆ. ಆಗ ಭೀಮನ ಪರವಾಗಿ ಶ್ರೀಕೃಷ್ಣ ವಾದಿಸುತ್ತಾನೆ. ಹಿಂದೆ ದುರ್ಯೋಧನ ಪಾಪವೆಸಗಿದ್ದರಿಂದಲೇ ಭೀಮ ಪ್ರತಿಜ್ಞೆ ಮಾಡಿದ್ದ ಎನ್ನುತ್ತಾನೆ ಕೃಷ್ಣ. ಆದರೆ ಬಲರಾಮನಿಗೆ ಕೃಷ್ಣನ ಸ್ಪಷ್ಟೀಕರಣದಿಂದ ತೃಪ್ತಿಯಾಗುವುದಿಲ್ಲ. ಬಲರಾಮ ಕ್ರೋಧಿತನಾಗಿ ದ್ವಾರಕಾ ನಗರಿಗೆ ಹೊರಟುಹೋಗುತ್ತಾನೆಆದರೆ ಇನ್ನೂ ಪ್ರಶ್ನೆ ಹಾಗೇ ಉಳಿದುಬಿಟ್ಟಿದೆ. ಈ ರೀತಿ ಒಂದು ಪ್ರಶ್ನೆಯೆದುರಾದಾಗ ಅದಕ್ಕೆ ಕುತರ್ಕ ಎದುರಿಡುವುದಕ್ಕೆ ಕಾರಣವೇನಿರುತ್ತದೆ? 
ಮನೋವಿಜ್ಞಾನಿಗಳು ಹೇಳುವುದೇನೆಂದರೆ “ವಾಟಬೌಟರಿ’ಯ ಪ್ರಯೋಗ ಮಾಡುವವರು ಭಾವಿಸುವುದೇನೆಂದರೆ, ತಾವು ತಪ್ಪು ಮಾಡಿರಬಹುದು ಆದರೆ ಅದಕ್ಕೆ ಪಶ್ಚಾತ್ತಾಪ ಪಡುವುದಿಲ್ಲ ಎನ್ನುವುದು. ಏಕೆಂದರೆ ಪ್ರಶ್ನೆ ಕೇಳುವ ವ್ಯಕ್ತಿಗೆ ಅವನ ಹಿಂದಿನ ಪಾಪಗಳನ್ನು ನೆನಪುಮಾಡಿಸಿ ತಮ್ಮ ಮಟ್ಟಕ್ಕೆ ತಂದು ನಿಲ್ಲಿಸುತ್ತಾರೆ ಅವರು.

ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್‌ ಮೆರಾಲ್ಡ್‌ ವೆಸ್‌ r ಫ‌ಲ್‌ ತಮ್ಮ ಪುಸ್ತಕ “ಗಾಡ್‌, ಗಿಲ್ಟ್ ಆ್ಯಂಡ್‌ ಡೆತ್‌’ನಲ್ಲಿ ಈ ತಂತ್ರದ ಬಗ್ಗೆ ಹೇಳುತ್ತಾರೆ: “”ಯಾರು ಒಂದು ವಿಷಯದಲ್ಲಿ ತಮ್ಮ ತಪ್ಪಿದೆ ಎನ್ನುವುದನ್ನು ಅರಿತಿರುತ್ತಾರೋ, ಅವರು ಈ ರೀತಿಯ ತರ್ಕಗಳ ಸಹಾಯ ಪಡೆಯುತ್ತಾರೆ. ಪ್ರಶ್ನೆ ಕೇಳುವವನೇ ಲಕ್ಷಪಟ್ಟು ಹೆಚ್ಚು ತಪ್ಪಿತಸ್ಥ ಎನ್ನುವುದನ್ನು ರುಜುವಾತು ಮಾಡಲು ಪ್ರಯತ್ನಿಸುತ್ತಾರೆ. ಹೀಗೆ ಮಾಡುವುದರಿಂದ ಈ ಜನರಿಗೆ ಸುರಕ್ಷಿತ ಭಾವ ಎದುರಾಗುತ್ತದೆ” ಯೂನಿವ‌ರ್ಸಿಟಿ ಆಫ್ ಕಾನ್ಸಾಸ್‌ನಲ್ಲಿರುವ ಸಾಮಾಜಿಕ ಮನೋವಿಜ್ಞಾನಿ ಡೇನಿಯಲ್‌ ವ್ಯಾಟ್ಸನ್‌ ತಮ್ಮ ಪುಸ್ತಕ “ವಾಟ್ಸ್‌ ರಾಂಗ್‌ ವಿತ್‌ ಮೊರಾಲಿಟಿ’ಯಲ್ಲಿ ಹೇಳುತ್ತಾರೆ, “” ನೈತಿಕ ಮಾರ್ಗದಲ್ಲಿ ಸಾಗುವುದರಿಂದ ಅದರದ್ದೇ ಆದ ಲಾಭಗಳಿವೆ, ತನಿಖೆ ಮತ್ತು ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಜನರು ಭಾವಿಸಿದ್ದಾರೆ. ಆದರೆ ನೈತಿಕರಾಗಿ ಇರುವುದಕ್ಕಿಂತ ಹೆಚ್ಚು ಲಾಭ ನಾವು ನೈತಿಕತೆ ಪಾಲಿಸುತ್ತಿದ್ದೇವೆ ಎಂದು ತೋರಿಸಿಕೊಳ್ಳುವುದರಲ್ಲಿ ಇದೆ. ಏಕೆಂದರೆ ಹೀಗೆ ತೋರಿಸಿಕೊಂಡವರಿಗೆ ನೈತಿಕ ಮಾರ್ಗದಲ್ಲಿ ಸಾಗುವಾಗ ಎದುರಾಗುವ ಕಷ್ಟಗಳೇನೂ ಎದುರಾಗವು”.

ಪ್ರೊಫೆಸರ್‌ ವ್ಯಾಟ್ಸನ್‌ರ ಮಾತು ಭಾರತೀಯ ಪರಿಪ್ರೇಕ್ಷೆಯಲ್ಲಂತೂ ಹೆಚ್ಚು ಅನ್ವಯವಾಗುತ್ತದೆ. ಏಕೆಂದರೆ ಭಾರತದಲ್ಲಿ ಗಾಂಧಿಯವರ ಕಾಲದಿಂದಲೂ ನೈತಿಕತೆಗಿಂತ ಶ್ರೇಷ್ಠ ಮೌಲ್ಯ ಮತ್ಯಾವುದೂ ಇಲ್ಲ.  2012ರಲ್ಲಿ ರಾಹಲ್‌ ಗಾಂಧಿ “”ಗುಜರಾತ್‌ನಲ್ಲಿ ಕೇವಲ ಒಂದೇ ಧ್ವನಿ ಕೇಳಿಸುತ್ತದೆ. ಮತ್ತು ಆ ಧ್ವನಿ ಮುಖ್ಯಮಂತ್ರಿ ನರೇಂದ್ರ ಮೋದಿಯವರದ್ದು” ಎಂದು ಆರೋಪ ಮಾಡಿದ್ದರು. 

ಆಗ ನರೇಂದ್ರ ಮೋದಿಯವರು ಟ್ವೀಟ್‌ ಮಾಡಿ “”ರಾಹುಲ್‌ ಬಾಬಾರ ಬೂಟಾಟಿಕೆ ಪರಮಾವಧಿ ಮುಟ್ಟಿದೆ. ಗುಜರಾತ್‌ನಲ್ಲಿ ಕೇವಲ ಒಂದೇ ಧ್ವನಿ ಕೇಳಿಸುತ್ತದೆ ಎನ್ನುತ್ತಾರೆ ರಾಹುಲ್‌, ಹಾಗಿದ್ದರೆ ಅವರ ಕುಟುಂಬದವರ ಹೆಸರಲ್ಲೇ 5000 ಯೋಜನೆಗಳಿವೆಯಲ್ಲ. ಅದಕ್ಕೇನನ್ನುತ್ತಾರೆ?” ಎಂದಿದ್ದರು.  
ಬಿಜೆಪಿ ಮತ್ತು ಅದರೊಂದಿಗೆ ಸಂಪರ್ಕವಿರುವ ಇನ್ನಿತರ ನಾಯಕರೂ ಕೂಡ ಕಾಲ ಕಾಲಕ್ಕೆ ಈ ರೀತಿಯ ತಂತ್ರವನ್ನು ಪ್ರಯೋಗಿಸಿದ್ದಾರೆ.(ರಾಹುಲ್‌ ಗಾಂಧಿ ಒಂದು ಪ್ರಶ್ನೆ ಕೇಳಿದಾಗ ರಾಕೇಶ್‌ ಸಿನ್ಹಾ ಅವರು “ಹಾಗಿದ್ದರೆ ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನ ಕಥೆಯೇನು?’ ಎಂದು ವಾಟಬೌಟರಿ ಮಾಡಿದ್ದರು.) 

ವಾಟಬೌಟರಿಯಿಂದ ಅಪಾಯವೇನಿದೆ?   
ಈ ಪ್ರಶ್ನೆಗೆ ಉತ್ತರ ಸರಳವಿದೆ. ಭಾರತವೊಂದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಸರ್ವಸಹಮತಿಗೆ ಮಹತ್ವವಿದೆ. ಆದರೆ ಇದಕ್ಕಾಗಿ ಸಂವಾದ ಮತ್ತು ಮಾತುಕತೆಯ ಅಗತ್ಯವಿರುತ್ತದೆ. ಸರ್ಕಾರದ ಹುದ್ದೆಗಳನ್ನು ನಿಭಾಯಿಸುವವರು ಉತ್ತರದಾಯಿಯಾಗಿರಲೇಬೇಕು. ಪತ್ರಕರ್ತ ಮಧುಸೂಧನ್‌ ಆನಂದ್‌ ಅವರ ಪ್ರಕಾರ “”ಮೊದಲೆಲ್ಲ ಏನಾಗುತ್ತಿತ್ತೆಂದರೆ, ಹೀಗೆಲ್ಲ ಮಾತನಾಡಿದರೆ ಜನರೇನನ್ನುತ್ತಾರೋ ಎಂಬ ಭಯವಿರುತ್ತಿತ್ತು. ಆದರೆ ಈಗ ಈ ನಾಚಿಕೆ ಮಾಯವಾಗಿಬಿಟ್ಟಿದೆ. ಇದು ಶಕ್ತಿ ಪ್ರದರ್ಶನದ ಯುಗವಾಗಿದ್ದು, ಇಲ್ಲಿ ಪ್ರಶ್ನೆ ಕೇಳುವುದಕ್ಕೆ ಅರ್ಥವೇ ಉಳಿದಿಲ್ಲ. ಯಾಕೆಂದರೆ ಯಾವ ಪಾರ್ಟಿ ಅಧಿಕಾರದಲ್ಲಿ ಇರುತ್ತದೋ ಅದಕ್ಕೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವ ಚಿಂತೆಯೇ ಇಲ್ಲ” ಎನ್ನುತ್ತಾರೆ.

ಸತ್ಯವೇನೆಂದರೆ ವಾಟಬೌಟರಿ, ಅರ್ಥಾತ್‌, ಪ್ರಶ್ನೆ ಕೇಳುವವನಿಗೆ ಉತ್ತರಿಸುವ ಬದಲು ಅವನನ್ನು ಒಂದೇ ಹೊಡೆತದಲ್ಲೇ ಸುಮ್ಮನಾಗಿಸುವ ತಂತ್ರ ಯಶಸ್ವಿಯಾಗಿಬಿಡುತ್ತದೆ‌. ಹೀಗಾಗಿ ಈ ರೀತಿಯ ಅಸ್ತ್ರದ ಮೇಲೆ ನಿರ್ಬಂಧ ಹೇರಬೇಕೆಂದು ಯಾವ ಸರ್ಕಾರಕ್ಕೂ ಅನಿಸುವುದಿಲ್ಲ, ಅಗತ್ಯವೇ ಬೀಳುವುದಿಲ್ಲ.  ವಾಟಬೌಟರಿ ಎಲ್ಲಾ ರೀತಿಯ ಉತ್ತರದಾಯಿತ್ವವನ್ನೂ ಕೊನೆಗೊಳಿಸಿಬಿಡುತ್ತದೆ. ಸರ್ಕಾರಗಳು ಬರುತ್ತವೆ ಹೋಗುತ್ತವೆ. ಆದರೆ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಗುವುದಿಲ್ಲ!

(ಮೂಲ-ಬಿಬಿಸಿ ಹಿಂದಿ)

ಅನಂತ ಪ್ರಕಾಶ್‌ 

ಟಾಪ್ ನ್ಯೂಸ್

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

1

Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.