ಹೈದ್ರಾಬಾದ್:ಹಾಡ ಹಗಲೇ,ನೂರಾರು ಜನರೆದುರೇ ಕೊಚ್ಚಿ ಕೊಚ್ಚಿ ಕೊಲೆ!
Team Udayavani, Sep 26, 2018, 2:28 PM IST
ಹೈದ್ರಾಬಾದ್: ಅತ್ತಾಪುರದಲ್ಲಿ ಬುಧವಾರ ನಡುರಸ್ತೆಯಲ್ಲೇ, ಹಾಡಹಗಲೇ ನೂರಾರು ಜನರ ಎದುರು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈಯಲಾಗಿದೆ.
ನೂರಾರು ಸಾರ್ವಜನಿಕರು ಮತ್ತು ವಾಹನ ಸವಾರರ ಎದುರಿನಲ್ಲೇ ಈ ಭೀಕರ ಹತ್ಯೆ ನಡೆದಿದೆ. ಸಾರ್ವಜನಿಕರು ದುಷ್ಕರ್ಮಿಗಳನ್ನು ತಡೆಯಲು ಯತ್ನಿಸಿದರೂ ಪ್ರಾಣಭಯದಿಂದ ಹಿಂದೆ ಸರಿದರು.
ನಾಲ್ವರು ದುಷ್ಕರ್ಮಿಗಳು ಕೃತ್ಯ ಎಸಗಿದ್ದು, ಒಬ್ಟಾತ ನೆಲಕ್ಕೆ ಬಿದ್ದಾತನನ್ನು ಮನಬಂದಂತೆ ಕೊಚ್ಚಿ ಅಟ್ಟಹಾಸ ಮೆರೆದಿದ್ದಾನೆ.
ಹತ್ಯೆಗೀಡಾದ ವ್ಯಕ್ತಿ ರಮೇಶ್ ಎಂದು ತಿಳಿದು ಬಂದಿದ್ದು, ಈತ ಶಂಶಾಬಾದ್‌ನಲ್ಲಿ ನಡೆದ ಮಹೇಶ್ ಗೌಡ್ ಎಂಬಾತನ ಕೊಲೆ ಪ್ರಕರಣದ ಆರೋಪಿ ಎಂದು ತಿಳಿದು ಬಂದಿದೆ. ಮಹೇಶ್ ಗೌಡ್ ಸಂಬಂಧಿಕರು ದ್ವೇಷದಲ್ಲಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಹತ್ಯೆ ನಡೆದ ಸ್ಥಳದಲ್ಲಿ ಟ್ರಾಫಿಕ್ ಪೊಲೀಸ್ ಸೇರಿದಂತೆ ಹಲವರು ಮೂಕ ಪ್ರೇಕ್ಷಕರಾದರು. ಕೆಲವರು ಬೆಚ್ಚಿ ಬಿದ್ದು ಸ್ಥಳದಿಂದ ಓಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.