ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ನೋಟಿಸ್‌ ಜಾರಿಗೊಳಿಸಿ

Team Udayavani, Sep 26, 2018, 4:47 PM IST

26-sepctember-16.gif

ಮುಂಡರಗಿ: ಸಭೆಗೆ ಬಾರದಿರುವ ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ನೋಟಿಸ್‌ ಜಾರಿ ಮಾಡಬೇಕು. ಅಧಿಕಾರಿಗಳ ಪರವಾಗಿ ಬಂದಿರುವ ಇಲಾಖೆಯವರು ಸಭೆಯಿಂದ ಹೊರನಡೆಯಬೇಕು ಎಂದು ತಾಪಂ ಅಧ್ಯಕ್ಷೆ ರೇಣುಕಾ ಕೋರ್ಲಹಳ್ಳಿ ಸೂಚಿಸಿದ್ದಾರೆ. ತಾಪಂ ಸಾಮರ್ಥ್ಯ ಸೌಧದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಇಲಾಖಾವಾರು ಮಾಹಿತಿ ನೀಡಲು ಅಧಿಕಾರಿಗಳು ಮುಂದಾದಾಗ ಅಧ್ಯಕ್ಷೆ ರೇಣುಕಾ ಅಧಿಕಾರಿಗಳಿಗೆ ಸೂಚಿಸಿದರು.

ಕ್ರೀಡಾ ಇಲಾಖೆ, ಅಬಕಾರಿ, ಏತ ನೀರಾವರಿ, ಸಣ್ಣ ನೀರಾವರಿ, ಕೃಷಿ ಇಲಾಖೆಯವರು ಬಂದಿಲ್ಲ. ಕೃಷಿ ಇಲಾಖೆಯ ಎಸ್‌.ಬಿ. ನೆಗಳೂರು ಬದಲಾಗಿ ಬಂದಿರುವ ಅಧಿಕಾರಿಗಳು ಹೊರಗೆ ನಡೆಯಿರಿ. ತಾಲೂಕಿನಲ್ಲಿ ಬರಗಾಲವು ತಾಂಡವಾಡುತ್ತಿದೆ. ಕೃಷಿ ಇಲಾಖೆಯ ಅಧಿಕಾರಿ ಇಲ್ಲದೇ ಇದ್ದರೇ ಬೆಳೆಹಾನಿ, ರೈತರಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ಮಾಡುವುದಾದರೂ ಹೇಗೆ. ಕೃಷಿ ಇಲಾಖೆಯ ಎಸ್‌.ಬಿ.ನೆಗಳೂರು ಸಭೆಗೆ ಬರಲು ಫೋನ್‌ ಮಾಡಿ ಎಂದಾಗ ಕೃಷಿ ಕೇಂದ್ರದ ಎಸ್‌.ಎನ್‌. ಕುದರಿಮೂತಿ ಸಹಾಯಕ ನಿರ್ದೇಶಕರು ಧಾರವಾಡಕ್ಕೆ ಹೋಗಿದ್ದಾರೆ ಎಂದಾಗ ಸಭೆಯಲ್ಲಿ ಇದ್ದ ತಾಪಂ ಇಒ ಎಸ್‌.ಎಸ್‌.ಕಲ್ಮನಿ ಫೋನ್‌ ಮಾಡಿದಾಗ ಸಭೆಗೆ ಹಾಜರಾಗಲು ಸೂಚನೆ ನೀಡಿದ್ದೇ, ನನ್ನ ಮಾತು ಮೀರಿ ಧಾರವಾಡಕ್ಕೆ ಹೋಗಿದ್ದಾರೆ. ಕಾರಣ ಕೇಳಿ ಎಸ್‌.ಬಿ.ನೆಗಳೂರು ನೋಟಿಸ್‌ ನೀಡುವುದಲ್ಲದೇ ಮೇಲಧಿಕಾರಿಗಳ ಗಮನಕ್ಕೂ ತರಲಾಗುತ್ತದೆ ಎಂದರು.

ಕಪ್ಪತ್ತಹಿಲ್ಸ್‌ ವಲಯ ಅರಣ್ಯಾಧಿಕಾರಿ ಎಂ.ಎಸ್‌.ನ್ಯಾಮತಿ ಸಭೆಗೆ ಬಾರದೆ ಕೆಳಗಿನ ಅಧಿಕಾರಿಯನ್ನು ಕಳುಹಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಅಭಿಯಂತರ ಎ.ಎಸ್‌.ವಾಲಿ ಪರವಾಗಿ ಹಾರೋಗೇರಿ ಬಂದಿದ್ದಾರೆ. ಪ್ರತಿನಿಧಿ ಗಳು ಕಳುಹಿಸಿರುವ ಸಭೆಗೆ ಗೈರು ಹಾಜರಾದ ಅಧಿ ಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗುತ್ತದೆ. ಅಧಿಕಾರಿಗಳ ಪರವಾಗಿ ಬಂದಿರುವವವರು ಸಭೆಗೆ ಮಾಹಿತಿ ನೀಡಿ, ಮುಂದಿನ ಬಾರಿ ಇಲಾಖೆಯ ಮುಖ್ಯಸ್ಥರೇ ಸಭೆಗೆ ಹಾಜರಾಗಿ ಮಾಹಿತಿ ನೀಡಬೇಕೆಂದು ಇಒ ಸೂಚಿಸಿದರು.

ತೋಟಗಾರಿಕೆ ಇಲಾಖೆಯ ಸುರೇಶ ಕುಂಬಾರ ತೋಟಗಾರಿಕೆ ಇಲಾಖೆಯಲ್ಲಿ ಬೆಳೆಗಳ ಕುರಿತು ನೂರು ಜನರಿಗೆ ತರಬೇತಿ ನೀಡಲಾಗುತ್ತಿದೆ. ಪರಿಶಿಷ್ಟ ಪಂಗಡದ ನಾಲ್ಕು ಜನರಿಗೆ ಟೆಂಗಿನತೋಟ ಮಾಡಿ ಕೊಡಲಾಗುತ್ತದೆ. ಫಲಾನುಭವಿಗಳ ಹೆಸರನ್ನು ಜನಪ್ರತಿನಿಧಿ ಗಳು ಆಯ್ಕೆ ಮಾಡಿ ಕೊಡಬೇಕು. ಉದ್ಯೋಗ ಖಾತ್ರಿಯಲ್ಲಿ ತೋಟಗಾರಿಕೆ ವತಿಯಿಂದ 13,485 ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮೆಣಸಿನಕಾಯಿ, ಟೊಮೋಟೊ, ಬದನೆಕಾಯಿ ಬೆಳೆಗಳಿಗೆ 7.50ಲಕ್ಷ ವೆಚ್ಚದಲ್ಲಿ ರಿಯಾಯತಿಯಲ್ಲಿ ಹನಿ ನೀರಾವರಿ ಅಳವಡಿಸಿಕೊಡಲಾಗುತ್ತದೆ. ಬೆಳೆ ಸಮೀಕ್ಷೆಯ ಕಾರ್ಯ ನಡೆಯುತ್ತಿದ್ದು, ರೈತರು ಸಹಕರಿಸಬೇಕು. ತೋಟಗಾರಿಕೆಯ ಕಾರ್ಯಾಲಯದ ಕಟ್ಟಡವನ್ನು ನೂತನವಾಗಿ ನಿರ್ಮಿಸಲು ನೀಲನಕ್ಷೆ ತಯಾರಿಸಿ ಕೊಡಲಾಗಿದೆ ಎಂದರು.

ಪಟ್ಟಣದ ತಾಲೂಕಾಸ್ಪತ್ರೆಯಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ಕೊರತೆಯ ಕುರಿತು ಸದಸ್ಯ ರುದ್ರಗೌಡ ಪಾಟೀಲ ತಾಲೂಕಾಸ್ಪತ್ರೆ ವೈದ್ಯಾಧಿಕಾರಿ ಡಾ.ಕೀರ್ತಿಹಾಸಗೆ ಪ್ರಶ್ನಿಸಿದಾಗ ಸ್ವಚ್ಛತೆ ಕಡೆಗೆ ಗಮನ ಹರಿಸಿದ್ದೇವೆ. ಪುರಸಭೆಯವರು ಕಸ ಹೇರಿಕೊಂಡು ಹೋಗುತ್ತಿಲ್ಲ ರುದ್ರಗೌಡ ಪಾಟೀಲ ಎಂದು ಆರೋಪಿಸಿದರು.

ಉಪಾಧ್ಯಕ್ಷೆ ಹೇಮಾವತಿ ಜನ್ನಾರಿ, ಸದಸ್ಯರಾದ ವೆಂಕಪ್ಪ ಬಳ್ಳಾರಿ, ಕುಸುಮಾ ಮೇಟಿ, ಪುಷ್ಪಾ ಪಾಟೀಲ, ಲಲಿತಾ ಎಲಿಗಾರ, ಬಸಪ್ಪ ಮಲ್ಲನಾಯ್ಕರ, ರುದ್ರಪ್ಪ ಬಡಿಗೇರ, ತಿಪ್ಪವ್ವ ಕಾರಬಾರಿ ಇದ್ದರು. ಬಿಇಒ ಎಸ್‌.ಎನ್‌. ಹಳ್ಳಿಗುಡಿ, ಹೆಸ್ಕಾಂನ ಎಂ.ಬಿ. ಗೌರೋಜಿ, ಬಿ.ಎನ್‌. ರಾಟಿ, ಆಕಾಶ ವಂದೆ, ಎಸ್‌.ಬಿ.ಹೊಸಳ್ಳಿ, ಎಸ್‌.ಎನ್‌. ಮಾಳ್ಳೋದೆಕರ ಮತ್ತಿತರರು ಮಾಹಿತಿ ನೀಡಿದರು.

ಟಾಪ್ ನ್ಯೂಸ್

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-gadaga

Diesel theft; ಗದಗ: ಕೆ.ಎಸ್.‌ಆರ್.ಟಿ.ಸಿ. ಬಸ್ ಗಳ ಡೀಸೆಲ್ ಕಳ್ಳತನ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

ಗದಗ: 4 ವರ್ಷವಾದರೂ ಮುಗಿಯದ ವಸತಿ ಶಾಲೆ ಕೆಲಸ! 20 ಕೋಟಿ ರೂ. ವೆಚ್ಚ…

ಗದಗ: 4 ವರ್ಷವಾದರೂ ಮುಗಿಯದ ವಸತಿ ಶಾಲೆ ಕೆಲಸ! 20 ಕೋಟಿ ರೂ. ವೆಚ್ಚ…

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

crime (2)

Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

crime

Siddapura: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Untitled-1

Kasaragod Crime News: ಬೈಕ್‌ ಕಳವು; ಇಬ್ಬರ ಬಂಧನ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.