ಬೆಂಗ್ಳೂರಲ್ಲಿ 70 ಕುಬೇರರು
Team Udayavani, Sep 26, 2018, 5:29 PM IST
ಮುಂಬೈ: ದೇಶದಲ್ಲಿ ಒಂದು ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿರುವ ಸಿರಿವಂತರ ಸಂಖ್ಯೆ 831ಕ್ಕೇರಿದ್ದು, ಇವರಲ್ಲಿ 70 ಮಂದಿ ಶ್ರೀಮಂತರು ಬೆಂಗಳೂರಿನಲ್ಲಿದ್ದಾರೆ ಎಂದು ಬರ್ಕ್ಲೇಸ್-ಹುರುನ್ ಇಂಡಿಯಾ ರಿಚ್ ಲಿಸ್ಟ್‌ನ ಸಮೀಕ್ಷಾ ವರದಿ ಹೇಳಿದೆ. ಇದೇ ವರ್ಷ ಜನವರಿಯಲ್ಲಿ ನಡೆದಿದ್ದ ವಿಶ್ವ ಎಕನಾಮಿಕ್ ಫೋರಂ ಸಮ್ಮೇಳನದಲ್ಲಿ ಮಂಡಿಸಲಾಗಿದ್ದ ಈ ವರದಿಯು ಈಗ ಬೆಳಕಿಗೆ ಬಂದಿದ್ದು, ಈ ಧನವಂತರಲ್ಲಿ ಹೆಚ್ಚಿನವರು (163) ದೆಹಲಿಯಲ್ಲೇ ಇದ್ದಾರೆಂದು ಹೇಳಲಾಗಿದೆ.
ವರದಿಯ ಪ್ರಕಾರ, ದೇಶದಲ್ಲಿ ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಆಸ್ತಿ ಹೊಂದಿರುವ ಭಾರತೀಯರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 34ರಷ್ಟು ಹೆಚ್ಚಾಗಿದೆ. ಇವರ ಒಟ್ಟಾರೆ ಆಸ್ತಿಯ ಮೌಲ್ಯ 5,221 ಕೋಟಿ ರೂ.ಗಳಷ್ಟಿದ್ದು, ಇದು ಭಾರತದ ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇ. 25ರಷ್ಟರ ಪಾಲಿಗೆ ಸರಿಸಮಾನವಾಗಿದೆ.
ಮುಕೇಶ್‌ಗೆ ಅಗ್ರ ಪಟ್ಟ: ಇವರಲ್ಲಿ 3,71,00,000 ಕೋಟಿ ರೂ. ಆಸ್ತಿ ಮೌಲ್ಯ ಹೊಂದಿರುವ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರೇ ಮಂಚೂಣಿಯಲಿದ್ದು, 2018ರಲ್ಲಿ ಅತಿ ಹೆಚ್ಚಿನ ಮಟ್ಟಕ್ಕೆ ಆಸ್ತಿ ವೃದ್ಧಿಸಿಕೊಂಡ ಹೆಗ್ಗಳಿಕೆ ಗ್ರಾಫೈಟ್ ಇಂಡಿಯಾದ ಕೃಷ್ಣ ಕುಮಾರ್ ಬಂಗೂರ್ ಅವರ ಪಾಲಾಗಿದೆ. ಇವರ ಆಸ್ತಿ ಮೌಲ್ಯ ಶೇ. 430ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ಸರ್ಕಾರಿ ನೇಮಕ ಪ್ರಕ್ರಿಯೆ ನಡುವೆ ನಿಯಮ ಬದಲು ಸಲ್ಲದು
JPC ಅಧ್ಯಕ್ಷ ಪಾಲ್ ಕರ್ನಾಟಕ ಪ್ರವಾಸ ಏಕಪಕ್ಷೀಯ: ಅಸಾಸುದ್ದೀನ್ ಒವೈಸಿ
Maharashtra: ಉದ್ಧವ್ ಸೇನೆ ಪ್ರಣಾಳಿಕೆ: ಬಾಲಕರಿಗೂ ಉಚಿತ ಶಿಕ್ಷಣ!
Fight Terrorism: ಶೀಘ್ರವೇ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ನೀತಿ ಬಿಡುಗಡೆ: ಅಮಿತ್ ಶಾ
Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ
MUST WATCH
ಹೊಸ ಸೇರ್ಪಡೆ
Test match: ಭಾರತ “ಎ’ ಮತ್ತೆ ಬ್ಯಾಟಿಂಗ್ ವೈಫಲ್ಯ
Women’s Big Bash League: “ದಶಕದ ತಂಡ’ದ ರೇಸ್‌ನಲ್ಲಿ ಕೌರ್
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ
Supreme Court: ಸರ್ಕಾರಿ ನೇಮಕ ಪ್ರಕ್ರಿಯೆ ನಡುವೆ ನಿಯಮ ಬದಲು ಸಲ್ಲದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.