ದೂರವಾದ ದುರುಪಯೋಗದ ಆತಂಕ: ಸಂತುಲಿತ ತೀರ್ಪು
Team Udayavani, Sep 27, 2018, 6:00 AM IST
ಆಧಾರ್‌ಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕ ಎನ್ನುವುದು ನಿಜ. ಇದರ ಜತೆಗೆ ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಚ್ಚು ಮಹತ್ವದ್ದೂ ಆಗಿದೆ. 12 ಅಂಕಿಗಳ ಆಧಾರ್ ಕುರಿತಾಗಿದ್ದ ಬಹುತೇಕ ಅನುಮಾನಗಳು ಮತ್ತು ಗೊಂದಲಗಳನ್ನು ಪಂಚಸದಸ್ಯ ಪೀಠ ನೀಡಿದ ಈ ತೀರ್ಪು ಬಗೆಹರಿಸಿದೆ. ಆಧಾರ್‌ನ ಸಾಂವಿಧಾನಿಕ ಸ್ಥಾನಮಾನವನ್ನು ಎತ್ತಿ ಹಿಡಿಯುವುದರ ಜತೆಗೆ ಅದರ ಬಳಕೆಗೆ ನಿರ್ಬಂಧ ಹೇರುವ ಮೂಲಕ ನ್ಯಾಯಾಲಯ ಒಂದು ಸಂತುಲಿತವಾದ ತೀರ್ಪನ್ನು ನೀಡಿದೆ. 2009ರಲ್ಲಿ ಆಧಾರ್ ನೋಂದಣಿ ಪ್ರಾರಂಭವಾದಂದಿನಿಂದ ಅದನ್ನು ಸಮರ್ಥಿಸುವ ಮತ್ತು ವಿರೋಧಿಸುವ ಎರಡು ಗುಂಪುಗಳು ಸೃಷ್ಟಿಯಾಗಿದ್ದವು. ಇದೀಗ ತೀರ್ಪನ್ನು ಈ ಎರಡೂ ಗುಂಪುಗಳು ಸ್ವಾಗತಿಸಿರುವುದನ್ನು ನೋಡಿದಾಗ ಆಧಾರ್ ಇನ್ನಷ್ಟು ಚರ್ಚೆಗೆ ಗ್ರಾಸವಾಗುವುದಿಲ್ಲ ಎಂದು ಭಾವಿಸಬಹುದು.
ಪ್ಯಾನ್ ನಂಬರ್, ಆದಾಯ ಕರ ಪಾವತಿ, ಸಬ್ಸಿಡಿ ಸೇರಿದಂತೆ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆಧಾರ್ ಸಂಯೋಜನೆಯನ್ನು ಕಡ್ಡಾಯಗೊಳಿಸಿದೆ. ಇದೇ ವೇಳೆ ಮೊಬೈಲ್ ಸಿಮ್ ಪಡೆದುಕೊಳ್ಳಲು , ಸಿಬಿಎಸ್‌ಇ, ನೀಟ್, ಯುಜಿಸಿ ಪರೀಕ್ಷೆಗಳಿಗೆ, ಶಾಲಾ ಪ್ರವೇಶಾತಿ, ಬ್ಯಾಂಕ್ ಖಾತೆ ಇತ್ಯಾದಿ ವಿಚಾರಗಳಿಗೆ ಆಧಾರ್ ಕಡ್ಡಾಯವಲ್ಲ ಎನ್ನುವ ಮೂಲಕ ಆಧಾರ್ ಬಳಕೆಗೆ ಸ್ಪಷ್ಟವಾದ ಮಾರ್ಗಸೂಚಿಯೊಂದನ್ನು ಹಾಕಿಕೊಟ್ಟಿದೆ. ಖಾಸಗಿ ಕಂಪೆನಿಗಳು ಆಧಾರ್ ದತ್ತಾಂಶ ನೀಡಲು ಒತ್ತಾಯಿಸಬಾರದು ಎನ್ನುವುದು ತೀರ್ಪಿನ ಒಂದು ಮುಖ್ಯ ಅಂಶ. ಟೆಲಿಕಾಂ ಕಂಪೆನಿಗಳು ಸೇರಿದಂತೆ ಹಲವು ಖಾಸಗಿ ಸಂಸ್ಥಾಪನೆಗಳು ತಮ್ಮ ಸೇವೆಗಾಗಿ ಆಧಾರ್ ಕೇಳುವ ಪರಿಪಾಠ ಪ್ರಾರಂಭವಾಗಿತ್ತು. ಇದರಿಂದ ಆಧಾರ್ ದತ್ತಾಂಶದಲ್ಲಿರುವ ಖಾಸಗಿ ಮಾಹಿತಿಗಳು ಖಾಸಗಿಯವರ ಕೈಗೆ ಸಿಗುವ ಆತಂಕ ಇತ್ತು. ಆಧಾರ್ ಕಾಯಿದೆಯ ಸೆಕ್ಷನ್ 57ನ್ನು ರದ್ದುಗೊಳಿಸುವ ಮೂಲಕ ಬಹಳ ಕಾಲದಿಂದ ಜನರಲ್ಲಿದ್ದ ಆಧಾರ್ ಮಾಹಿತಿ ದುರುಪಯೋಗವಾಗುವ ಆತಂಕವನ್ನು ದೂರಮಾಡಿದೆ.
ಅಂತೆಯೇ ಸೆಕ್ಷನ್ 33(ಜಿಜಿ)ಅನ್ನು ರದ್ದುಮಾಡಿರುವುದು ತೀರ್ಪಿನ ಇನ್ನೊಂದು ಮುಖ್ಯ ಅಂಶ. ಈ ಸೆಕ್ಷನ್ ಅಡಿಯಲ್ಲಿ ಜನರ ಆಧಾರ್ ಮಾಹಿತಿಯನ್ನು ಬಹಿರಂಗಪಡಿಸುವ ಅಧಿಕಾರ ಸರಕಾರಕ್ಕೆ ಇತ್ತು. ರಾಷ್ಟ್ರೀಯ ಭದ್ರತೆ ಮತ್ತು ಖಾಸಗಿತನದ ಸಂರಕ್ಷಣೆಯ ದೃಷ್ಟಿಯಿಂದ ಇದು ಅಪಾಯಕಾರಿಯಾದ ಕಾರಣ ನ್ಯಾಯಾಲಯ ಈ ಸೆಕ್ಷನ್ ಅನ್ನು ರದ್ದುಪಡಿಸಿದೆ. ಹೀಗೆ ಒಂದರ್ಥದಲ್ಲಿ ನ್ಯಾಯಾಲಯ ಆಧಾರ್‌ನ ಲೋಪಗಳನ್ನೆಲ್ಲ ಸರಿಪಡಿಸುವ ಕೆಲಸವನ್ನು ಮಾಡಿದೆ. ಒಟ್ಟಾರೆ ತೀರ್ಪನ್ನು ಅವಲೋಕಿಸಿದಾಗ ಆಧಾರ್ ಅನ್ನು ಅದರ ಮೂಲ ಉದ್ದೇಶಕ್ಕಷ್ಟೇ ಸೀಮಿತಗೊಳಿಸಿರುವಂತೆ ಕಾಣಿಸುತ್ತಿದೆ. ಆಧಾರ್‌ನ ಮಹತ್ವವನ್ನು ಎತ್ತಿಹಿಡಿಯುತ್ತಲೇ ಅದರ ಉಪಯೋಗಕ್ಕೆ ನಿರ್ಬಂಧಗಳನ್ನು ಹಾಕುವ ಮೂಲಕ ಜನರಿಗೆ ತಮ್ಮ ಖಾಸಗಿ ಮಾಹಿತಿಗಳು ಎಲ್ಲೆಲ್ಲ ಬಳಕೆಯಾಗುತ್ತಿವೆ ಎನ್ನುವುದನ್ನು ತಿಳಿಯುವ ಅವಕಾಶವನ್ನು ನೀಡಿದೆ ಹಾಗೂ ಇದೇ ವೇಳೆ ಸರಕಾರಕ್ಕೆ ಅದರ ಮಿತಿಯನ್ನು ಮನವರಿಕೆ ಮಾಡಿಕೊಟ್ಟಿದೆ.
ಇದೇ ವೇಳೆ ಪಂಚ ಪೀಠದ ಸದಸ್ಯರೊಬ್ಬರಾಗಿದ್ದ ನ್ಯಾ| ವೈ. ಚಂದ್ರಚೂಡ ಅವರು ಆಧಾರ್ ಕುರಿತಾಗಿ ಎತ್ತಿರುವ ಆಕ್ಷೇಪಗಳು ಗಮನಾರ್ಹ. ಮುಖ್ಯವಾಗಿ ಆಧಾರ್ ಮಸೂದೆಯನ್ನು ಹಣಕಾಸು ಮಸೂದೆಯಾಗಿ ಮಂಜೂರು ಮಾಡಿಕೊಂಡಿರುವುದನ್ನು ಅವರು ಬಲವಾಗಿ ಆಕ್ಷೇಪಿಸಿ
ಇದು ಸಂವಿಧಾನಕ್ಕೆ ಎಸಗಿರುವ ದ್ರೋಹ ಎಂದಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಹಣಕಾಸು ಮಸೂದೆಯಾಗಿ ಅಂಗೀಕರಿಸುವ ಮೂಲಕ ಮೇಲ್ಮನೆಯ ಸಾಂವಿಧಾನಿಕ ಅಸ್ತಿತ್ವವನ್ನು ಕಡೆಗಣಿಸಿದಂತಾಗುತ್ತದೆ. ಹಣಕಾಸು ಮಸೂದೆ ರೂಪದಲ್ಲಿರುವುದರಿಂದ ರಾಜ್ಯಸಭೆಗೆ ಅದನ್ನು ತಿರಸ್ಕರಿಸುವ ಅಥವಾ ತಿದ್ದುಪಡಿ ಮಾಡುವ ಅಧಿಕಾರ ಇಲ್ಲ, ಶಿಫಾರಸುಗಳನ್ನು ನೀಡಬಹುದಷ್ಟೆ.
ಆಧಾರ್‌ಗೆ ಸಂಬಂಧಿಸಿದಂತೆ ರಾಜ್ಯಸಭೆ ಮಾಡಿದ ಶಿಫಾರಸುಗಳನ್ನು ಲೋಕಸಭೆ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಚಂದ್ರಚೂಡ ಎತ್ತಿದ ಆಕ್ಷೇಪ ಮುಖ್ಯವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.