ಗೊಂದಲದ ಗೂಡಾದ ಹೆಸರು ಖರೀದಿ
Team Udayavani, Sep 27, 2018, 9:48 AM IST
ಬೀದರ: ಸರಕಾರ ಹೊರಡಿಸಿರುವ ಹೊಸ ಆದೇಶದಿಂದಾಗಿ ಬೆಂಬಲ ಬೆಲೆಯಲ್ಲಿ ಮಾರಲು ಹೆಸರು ಮುಂದಾದ ರೈತರು ಗೊಂದಲ ಗೂಡಿನಲ್ಲಿ ಸಿಲುಕಿದ್ದಾರೆ. ಕಳೆದ ತಿಂಗಳಲ್ಲಿ ಹೆಸರು ರಾಶಿ ಮಾಡಿರುವ ರೈತರು ಬೆಂಬಲ ಬೆಲೆಯಡಿ ಮಾರಾಟ ಮಾಡುವ ನಿಟ್ಟಿನಲ್ಲಿ ತಿಂಗಳಿಂದ ಸಂರಕ್ಷಿಸಿ ಇಟ್ಟಿದಾರೆ. 6,975 ರೂ. ನಂತೆ ಪ್ರತಿ ಕ್ವಿಂಟಲ್ ಹೆಸರು ಮಾರಾಟ ಮಾಡುವ ನಿರೀಕ್ಷೆಯಲ್ಲಿದ ರೈತರಿಗೆ ಸದ್ಯ ಸರ್ಕಾರದ ಹೊಸ ಆದೇಶ ಬರೆ ಎಳೆದಂತಾಗಿದೆ.
ಕಳೆದ ಸಾಲಿನಲ್ಲಿ ತಲಾ ರೈತರಿಂದ 20 ಕ್ವಿಂಟಲ್ ವರೆಗೆ ಹೆಸರು ಖರೀದಿಸಲಾಗಿತ್ತು. ಆದರೆ, ಪ್ರಸಕ್ತ ವರ್ಷ ಕೇಂದ್ರ ಸರ್ಕಾರದ ಆದೇಶಗಳು ರೈತರನ್ನು ಗೊಂದಲಕ್ಕಿಡು ಮಾಡಿವೆ. ಪ್ರಾರಂಭದಲ್ಲಿ 10 ಕ್ವಿಂಟಲ್ ಖರೀದಿಗೆ ಆದೇಶ ನೀಡಿದ್ದ ಕೇಂದ್ರ ಸರ್ಕಾರ ಕೇವಲ 4 ಕ್ವಿಂಟಲ್ ಖರೀದಿಸುವಂತೆ ಇದೀಗ ಮತ್ತೂಂದು ಸುತ್ತೋಲೆ ಹೊರಡಿಸಿ ರುವುದು ರೈತರನ್ನು ಧೃತಿಗೆಡಿಸಿದೆ.
ಜಿಲ್ಲೆಯಲ್ಲಿ ಸದ್ಯ ಒಟ್ಟು 30 ಖರೀದಿ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯ ರೈತರಿಂದ ಒಟ್ಟು 22, 880 ಕ್ವಿಂಟಲ್ ಹೆಸರು ಖರೀದಿಗೆ ಸರ್ಕಾರ ಮುಂದಾಗಿದೆ. ಈವರೆಗೆ 21,951 ರೈತರು ಹೆಸರು ಮಾರಾಟಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಸರ್ಕಾರದ ಹೊಸ ಆದೇಶದ ಪ್ರಕಾರ ನೋಂದಣೆಯಾದ 21,951 ರೈತರಿಂದ 1.04 ಕ್ವಿಂಟಲ್ ಹೆಸರು ಮಾತ್ರ ಖರೀದಿ ಮಾಡಲು ಸಾಧ್ಯವಿದೆ. ಈ ಪೈಕಿ ಹುಮನಾಬಾದ ತಾಲೂಕಿನಲ್ಲಿ 4,750, ಭಾಲ್ಕಿ ತಾಲೂಕಿನಲ್ಲಿ 7,320, ಬಸವಕಲ್ಯಾಣ ತಾಲೂಕಿನಲ್ಲಿ 3,883, ಔರಾದ ತಾಲೂಕಿನಲ್ಲಿ 3,179, ಬೀದರ ತಾಲೂಕಿನಲ್ಲಿ 2,819 ರೈತರು ಹೆಸರು ನೋಂದಣಿ ಮಾಡಿಸಿದ್ದಾರೆ.
ರೈತರ ನೋಂದಣೆ: ಬೀದರ ತಾಲೂಕು ಚಿಮಕೋಡ ಖರೀದಿ ಕೇಂದ್ರದಲ್ಲಿ 612, ಜನವಾಡ ಕೇಂದ್ರದಲ್ಲಿ 502, ಬಗದಲ್ ಕೇಂದ್ರದಲ್ಲಿ 492, ಖೇಣಿ ರಂಜೋಳ 507, ಮನ್ನಳ್ಳಿ 316, ಅಣದೂರ 390 ರೈತರು ಹೆಸರು ಮಾರಾಟಕ್ಕೆ ನೋಂದಣೆ ಮಾಡಿದಿಕೊಂಡಿದ್ದಾರೆ. ಔರಾದ: ಚಿಂತಾಕಿ ಕೇಂದ್ರದಲ್ಲಿ 606, ವಡಗಾಂವ(ದೆ) ಕೇಂದ್ರದಲ್ಲಿ 878, ಎಕಂಬಾ 291, ಬಗದಲಗಾಂವ 228, ಹೆಡಗಾಪುರ 640, ಕಮಲನಗರ 536 ರೈತರು ನೋಂದಣೆ ಮಾಡಿಸಿಕೊಂಡಿದ್ದಾರೆ.
ಬಸವಕಲ್ಯಾಣ: ಹುಲಸೂರು ಕೇಂದ್ರದಲ್ಲಿ 1049, ಮುಡಬಿ 849, ಹಾರಕೂಡ 349, ರಾಜೇಶ್ವರ 764, ಲಾಡವಂತಿ 401, ಕೋಹಿನೂರ 471. ಭಾಲ್ಕಿ: ಕೆ.ಚಿಂಚೋಳಿ 922, ಕುರುಬಖೇಳಗಿ 1510, ನಿಟ್ಟೂರು 1510, ಬ್ಯಾಲಹಳ್ಳಿ 882, ಧನ್ನೂರು 777, ಡೊಣಗಾಪುರ 1719. ಹುಮನಾಬಾದ: ಹಳ್ಳಿಖೇಡ(ಬಿ) 616, ಘಾಟಬೋರಳ 984, ದುಬಲಗುಂಡಿ 920, ಬೇಮಳಖೇಡಾ 390, ಉಡಮನಳ್ಳಿ 338, ಚಿಟಗುಪ್ಪ ಕೇಂದ್ರದಲ್ಲಿ 1502 ರೈತರು ನೋಂದಣೆ ಮಾಡಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಕೇವಲ 22,880 ಕ್ವಿಂಟಲ್ ಖರೀದಿಗೆ ಸರ್ಕಾರ ಮುಂದಾಗಿರುವುದು ಇಲ್ಲಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ನಾಲ್ಕು ಕ್ವಿಂಟಲ್ ಮತ್ತು ಹತ್ತು ಕ್ವಿಂಟಲ್ ಸಾಗಾಟದ ವೆಚ್ಚ ಒಂದೇ ಆಗುತ್ತದೆ. ಕಡಿಮೆ ಪ್ರಮಾಣದಲ್ಲಿ ಹೆಸರು ಖರೀದಿಸಿದರೆ ನಮ್ಮನ್ನು ಮತ್ತಷ್ಟು ಶೋಷಿಸಿದಂತಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ದಲ್ಲಾಳಿಗಳ ಹಾವಳಿ: ಸರ್ಕಾರ ನಿಗದಿತ ಪ್ರಮಾಣದಲ್ಲಿ ಹೆಸರು ಖರೀದಿಗೆ ಮುಂದಾಗಿರುವುದು ಸದ್ಯ ದಲ್ಲಾಳಿಗಳಿಗೆ ಸಂತಸ ತಂದಿದೆ. ಎಪಿಎಂಸಿಯಲ್ಲಿ ಹೆಸರು ಕಾಳಿಗೆ 4,000ರಿಂದ 4,500 ಸಾವಿರ ರೂ. ವರೆಗೆ ಖರೀದಿ ಮಾಡಲಾಗುತ್ತಿದೆ. ಇದರಿಂದ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಹೆಸರು ಕಾಳು ರಾಶಿಯಾಗಿ ತಿಂಗಳು ಕಳೆದಿದ್ದು, ಬೆಂಬಲ ಬೆಲೆ ಮೂಲಕ ಹೆಸರು ಮಾರಾಟಕ್ಕೆ ಬಹುತೇಕ ರೈತರು ನಿರ್ಧರಿಸಿದ್ದರು. ಆದರೆ, ತಲಾ ರೈತರಿಂದ ಕೇವಲ 4 ಕ್ವಿ. ಮಾತ್ರ ಖರೀದಿಗೆ ಸರ್ಕಾರ ನಿರ್ಧರಿಸಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸರ್ಕಾರ ತಕ್ಷಣ ಖರೀದಿ ಪ್ರಮಾಣ ಏರಿಕೆ ಮಾಡದಿದ್ದರೆ ಇನ್ನಷ್ಟು ರೈತರು ಅನಿವಾರ್ಯವಾಗಿ ದಲ್ಲಾಳಿ ಕೇಂದ್ರಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ.
ರೈತ ಸಂಘದ ಪ್ರಕಾರ ಜಿಲ್ಲೆಯಲ್ಲಿ 40 ಸಾವಿರ ರೈತರು ಹೆಸರು ಬೆಳೆ ಬೆಳೆದಿದ್ದಾರೆ. ಸುಮಾರು ಎರಡು ಲಕ್ಷ ಕ್ವಿಂಟಲ್ ಹೆಸರು ಬೆಳೆದಿದೆ. ಇನ್ನು ಕೃಷಿ ಇಲಾಖೆ ಪ್ರಕಾರ ಜಿಲ್ಲೆಯಲ್ಲಿ 1.5 ಲಕ್ಷ ಕ್ವಿಂಟಲ್ ಹೆಸರು ಉತ್ಪಾದನೆಯಾಗಿದೆ ಎಂಬ ಮಾಹಿತಿ ಇದೆ. ಈ ಕುರಿತು ಮಾಹಿತಿ ನೀಡಿದ ರೈತ ಸಂಘದ ಪ್ರಮುಖರು, ಬಹುತೇಕ ರೈತರು ಹೆಸರು ಬಿತ್ತನೆಗೆ ಮನೆ ಬೀಜಗಳನ್ನೇ ಬಳಸುತ್ತಾರೆ. ಹೊರಗಿನ ಬೀಜ ಖರೀದಿಸುವುದಿಲ್ಲ. ಹಾಗಾಗಿ, ಕೃಷಿ ಇಲಾಖೆ ಅಧಿಕಾರಿಗಳಿಗೆ ಬೆಳೆ ಪ್ರಮಾಣದ ಪೂರ್ಣ ಮಾಹಿತಿ ಸಿಗುವುದಿಲ್ಲ ಎನ್ನುತ್ತಾರೆ.
ಜಿಲ್ಲೆಯಲ್ಲಿ ಹೆಚ್ಚಿನ ಹೆಸರು ಖರೀದಿ ಕೇಂದ್ರಗಳ ಸ್ಥಾಪನೆ, ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಹಾಗೂ ಹೆಸರು ನೋಂದಣಿ ಅವಧಿ ವಿಸ್ತರಣೆ ಮಾಡುವಲ್ಲಿ ಸಹಕಾರ ಖಾತೆ ಹಾಗೂ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಸಂಪೂರ್ಣ ವಿಫಲರಾಗಿದ್ದಾರೆ. ಜಿಲ್ಲೆಯ ಇಬ್ಬರೂ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರೈತರ ಬೇಡಿಕೆಗಳಿಗೆ ಮನವಿ ಮಾಡಲಾಗಿತ್ತು. ಜಿಲ್ಲಾಧಿ ಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿದರು ಕೂಡ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಅ. 1ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಈಗಾಗಲೇ ಹಲವು ಸಭೆಗಳು ನಡೆಸಲಾಗಿದೆ. ಅಲ್ಲದೆ, ಜಿಲ್ಲೆಯ ಇಬ್ಬರು ಸಚಿವರು ಹಾಗೂ ಸಂಸದರಿಗೆ ಘೇರಾವ ಹಾಕಲು ತಿರ್ಮಾನಿಸಲಾಗಿದೆ.
ಮಲ್ಲಿಕಾರ್ಜುನ ಸ್ವಾಮಿ, ರೈತ ಸಂಘದ ಅಧ್ಯಕ್ಷ
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.