“ಕಾನೂನು ವಿರೋಧಿ ಟೋಲ್‌ನಲ್ಲಿ ಸುಲಿಗೆ
Team Udayavani, Sep 27, 2018, 9:52 AM IST
ಸುರತ್ಕಲ್: ಸುರತ್ಕಲ್ ಟೋಲ್‌ಗೇಟನ್ನು ಕಾನೂನಿಗೆ ವಿರುದ್ಧ ನಿರ್ಮಿಸಲಾಗಿದೆ. ಇಲ್ಲಿ ಜನರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಟೋಲ್‌ಗೇಟ್ ನಿರ್ಮಿಸುವಂತಿಲ್ಲ. ಬೇರೆ ಕಡೆ ಇಂತ ಪರಿಸ್ಥಿತಿ ಇದ್ದಿದ್ದರೆ ಜನರೇ ಕಿತ್ತು ಎಸೆಯುತ್ತಿದ್ದರು ಎಂದು ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಹೇಳಿದರು.
ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್ ಮುಚ್ಚಬೇಕು, ನಂತೂರಿನಲ್ಲಿ ಹೆದ್ದಾರಿ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಕೂಳೂರಿನಿಂದ ಸುರತ್ಕಲ್ ವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಜನರ ತಾಳ್ಮೆ ಪರೀಕ್ಷಿಸದೆ ಟೋಲ್‌ಗೇಟ್ ಮುಚ್ಚಿ, ಗುಂಡಿ ಮುಚ್ಚಿ ರಸ್ತೆ ಸರಿಪಡಿಸಿ. ತತ್‌ಕ್ಷಣ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಎಂದು ಆಗ್ರಹಿಸಿದರು.
ಹಗಲು ದರೋಡೆ
ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮಾತ ನಾಡಿ, ಸುಂಕ ವಸೂಲಿ ಹಗಲು ದರೋಡೆ. ರಾಜ್ಯದ ಸಭೆಯಲ್ಲಿ ತೀರ್ಮಾನ ಆಗಿದ್ದರೂ ಟೋಲ್ ಮುಚ್ಚಿಲ್ಲ. 10 ದಿನಗಳ ಒಳಗೆ ಸೂಕ್ತ ತೀರ್ಮಾನ ಕೈಗೊಳ್ಳದೆ ಹೋದಲ್ಲಿ ಅನಿ ìಷ್ಟಾವಧಿ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದರು.
ಮುಹಮ್ಮದ್ ಕುಂಜತ್ತಬೈಲು, ದಯಾನಂದ ಶೆಟ್ಟಿ, ರೇವತಿ ಪುತ್ರನ್, ಪುರುಷೋತ್ತಮ ಚಿತ್ರಾಪುರ, ಕುಮಾರ್ ಮೆಂಡನ್, ಪ್ರತಿಭಾ ಕುಳಾç, ಕೇಶವ ಸನಿಲ್, ಬಶೀರ್ ಅಹ್ಮದ್, ಜೋಕಟ್ಟೆ ಪ್ರಸಿಲ್ಲಾ ಮೊಂತೇರೊ, ಬಿ.ಕೆ. ಇಮಿ¤ಯಾಜ್, ಗೌರವ್ ಹೆಗ್ಡೆ, ಸುಭಾಶ್ಚಂದ್ರ ಶೆಟ್ಟಿ, ಟಿ.ಎನ್. ರಮೇಶ್, ವಕೀಲ ರಾಘವೇಂದ್ರ ರಾವ್, ವೈ. ರಾಘವೇಂದ್ರ ರಾವ್, ಮಹಾಬಲ ಶೆಟ್ಟಿ ಮುಕ್ಕ, ಸುನಿಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್, ಯಾದವ ಶೆಟ್ಟಿ, ಸಂತೋಷ್ ಬಜಾಲ್, ಹಕೀಂ ಕೂಳೂರು, ಪುನೀತ್ ಶೆಟ್ಟಿ, ಮಮತಾ ಶೆಟ್ಟಿ, ಹಿಲ್ಡಾ ಆಳ್ವ ಸಹಿತ ವಿವಿಧ ಸಂಘಟನೆಗಳ ಪದಾ ಧಿಕಾರಿಗಳು, ಮತ್ತಿತರರು ಪಾಲ್ಗೊಂಡಿದ್ದರು.
ಸುರತ್ಕಲ್- ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘ, ಕಿನ್ನಿಗೋಳಿ ವಲಯ ಲಾರಿ ಮಾಲಕರ ಸಂಘ, ತ್ರಿಚಕ್ರ ಟೆಂಪೋ ಚಾಲಕರ ಮಾಲಕರ ಸಂಘ ಸುರತ್ಕಲ್, ಗೂಡ್ಸ್ ಟೆಂಪೋ ಚಾಲಕರ ಸಂಘ ಸುರತ್ಕಲ್, ಸುರತ್ಕಲ್ ಆಟೋ ಚಾಲಕರ ಯೂನಿಯನ್, ಆನ್‌ಲೈನ್ ಟ್ಯಾಕ್ಸಿ ಓನರ್ಸ್ ಅಸೋಸಿಯೇಶನ್, ನಾಗರಿಕ ಸಮಿತಿ ಕುಳಾç, ಗೋಪಾಲಕೃಷ್ಣ ಭಜನ ಮಂದಿರ ಉರುಂದಾಡಿ, ನ್ಯೂ ಫ್ರೆಂಡ್ಸ್ ಸರ್ಕಲ್ ಕೃಷ್ಣಾಪುರ, ಟ್ರಾನ್ಸ್ ಪೋರ್ಟ್ ವರ್ಕರ್ಸ್ ಯೂನಿಯನ್ ಸುರತ್ಕಲ್, ಜಯ-ಕರ್ನಾಟಕ ಸುರತ್ಕಲ್, ಡಿವೈಎಫ್‌ಐ ಸುರತ್ಕಲ್ ವಲಯ ಸಹಿತ ಹಲವು ಸಂಘಟನೆಗಳು ಬೆಂಬಲ ನೀಡಿದ್ದವು.
83ರ ಅಜ್ಜಿ ನೀಡಿದ ಸ್ಫೂರ್ತಿ
83 ವರ್ಷದ ಅಮೀಮಮ್ಮ ಕೂಳೂರಿನಿಂದ ಸುರತ್ಕಲ್ ಟೋಲ್‌ಗೇಟ್‌ವರೆಗೆ ನಡೆದುಕೊಂಡೇ ಬಂದು ಪ್ರತಿಭಟನೆಯಲ್ಲಿ ಪಾಲುಗೊಂಡರು. ಅನೇಕ ಹಿರಿಯರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಸ್ಫೂರ್ತಿ ತುಂಬಿದರು. ಟೋಲ್‌ಗೇಟ್ ಬಳಿ ಕೆಲವು ಯುವಕರು ಸುಂಕ ಸಂಗ್ರಹಿಸದಂತೆ ತಾಕೀತು ಮಾಡಿದರು. ಪಾದೆಯಾತ್ರೆ ಉದ್ದಕ್ಕೂ ಹೋರಾಟಗಾರರಿಗೆ ಮಜ್ಜಿಗೆ, ನೀರು, ಊಟದ ವ್ಯವಸ್ಥೆಯನ್ನು ಸ್ವಯಂ ಪ್ರೇರಿತ ವಾಗಿ ಸ್ಥಳೀಯ ನಾಗರಿಕರು, ಉದ್ಯಮಿ ಗಳು ಮಾಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ಸುರತ್ಕಲ್, ಪಣಂಬೂರು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.