ಕಾಂತಮಂಗಲ ಸೇತುವೆಗೆ ಕಾಂಕ್ರೀಟ್ ತೇಪೆ
Team Udayavani, Sep 27, 2018, 12:08 PM IST
ಅಜ್ಜಾವರ: ಸುಳ್ಯ- ಮಂಡೆಕೋಲು ಸಂಪರ್ಕ ರಸ್ತೆಯಾದ ಕಾಂತಮಂಗಲ ಸೇತುವೆ ದುರಸ್ತಿ ಕಾರ್ಯ ಅತೀ ವೇಗದಲ್ಲಿ ನಡೆಯುತ್ತಿದೆ. ಸೇತುವೆಯ ಮೇಲ್ಪದರವನ್ನು ಅಗೆದು ಕಾಂಕ್ರೀಟು ಹಾಕಲಾಗುತ್ತಿದೆ. ಸೆ. 7ರಿಂದ ಆರಂಭವಾದ ದುರಸ್ತಿ ಕಾಮಗಾರಿ ಕಾಂಕ್ರೀಟು ತೇಪೆ ಹಚ್ಚುವುದರೊಂದಿಗೆ ಒಂದು ಹಂತ ಕೊನೆಗೊಂಡಿದೆ. ಸ್ಥಳೀಯರು ಕಾರ್ಮಿಕರ ಜತೆಗೂಡಿ ಸಲಹೆ – ಸೂಚನೆಗಳನ್ನು ನೀಡುತ್ತಿದ್ದಾರೆ. ಸೇತುವೆಯ ಕ್ಯೂರಿಂಗ್ ಇರುವುದರಿಂದ 20ರಿಂದ 25 ದಿನಗಳು ಬೇಕಾಗಬಹುದೆಂದು ಎಂಜಿನಿಯರಿಂಗ್ ಇಲಾಖೆ ತಿಳಿಸಿದೆ.
ಸೇತುವೆಯ ಒಂದು ಭಾಗದಲ್ಲಿ ಜಲ್ಲಿಕ ಲ್ಲುಗಳ ದೊಡ್ಡ ರಾಶಿಗಳು ಹಾಕಿರುವುದರಿಂದ ಜನರಿಗೆ ಓಡಾಡಲು ತೊಂದರೆಯಾಗುತ್ತಿದೆ. ಕಾಂಕ್ರೀಟು ತೇಪೆ ಹಾಕುತ್ತಿರುವ ಕಾರಣ ಅದು ಒಣಗುವ ಮೊದಲೇ ಅದರ ಮೇಲೆ ಓಡಾಡಿದರೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಎಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಪರಿಶೀಲಿಸುತ್ತಿದ್ದಾರೆ. ಜನರ ಮುಕ್ತ ಓಡಾಟಕ್ಕೆ ಸೇತುವೆ ತೆರೆಯಲು ಇನ್ನೂ ಒಂದು ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.