ಕಸ ಸಂಗ್ರಹಕ್ಕೆ ಕಾಂಪ್ಯಾಕ್ಟರ್ ಕಂಟೇನರ್ ಸ್ಟೇಷನ್
Team Udayavani, Sep 27, 2018, 5:36 PM IST
ಹುಬ್ಬಳ್ಳಿ: ತ್ಯಾಜ್ಯ ನಿರ್ವಹಣೆ ಸಮರ್ಪಕಗೊಳಿಸುವ ದಿಸೆಯಲ್ಲಿ ಮಹಾನಗರ ಪಾಲಿಕೆ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಹಸಿ ಕಸ ಹಾಗೂ ಒಣ ಕಸ ಪ್ರತ್ಯೇಕಿಸುವ ದಿಸೆಯಲ್ಲಿ ಮೊದಲ ಬಾರಿ ಅವಳಿ ನಗರದ ವಿವಿಧೆಡೆ ಪೋರ್ಟೇಬಲ್ ಕಾಂಪ್ಯಾಕ್ಟರ್ ಕಂಟೇನರ್‌ಗಳನ್ನು ಅಳವಡಿಸುವ ಮೂಲಕ ತ್ವರಿತ ಕಸ ವಿಲೇವಾರಿ ದಿಸೆಯಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.
ಹುಬ್ಬಳ್ಳಿಯಲ್ಲಿ ನಂದಿನಿ ಲೇಔಟ್, ಬೆಂಗೇರಿ, ಉಣಕಲ್ಲ ಹಾಗೂ ಇಂದಿರಾ ನಗರದಲ್ಲಿ; ಧಾರವಾಡದಲ್ಲಿ ಮೀನು ಮಾರುಕಟ್ಟೆ ಹಾಗೂ ಕಲ್ಯಾಣನಗರದಲ್ಲಿ ಕಾಂಪ್ಯಾಕ್ಟರ್ ಕಂಟೇನರ್ ಸ್ಟೇಷನ್ ನಿರ್ಮಿಸಲಾಗುತ್ತಿದೆ. ಈಗಾಗಲೇ ಕಸ ಸಂಗ್ರಹ ಕಂಟೇನರ್ ಸ್ಟೇಷನ್‌ಗೆ ಸಿದ್ಧತೆ ನಡೆದಿದ್ದು, ಇನ್ನೆರಡು ತಿಂಗಳಲ್ಲಿ ಸ್ಟೇಷನ್ ಕಾರ್ಯಾರಂಭ ಮಾಡಲಿದೆ. 5ರಿಂದ 10 ವಾರ್ಡ್‌ಗಳಿಗೊಂದರಂತೆ ಸ್ಟೇಷನ್ ಮಾಡಲು ನಿರ್ಧರಿಸಲಾಗಿದೆ.
ಪ್ರಸ್ತುತ ಮಹಾನಗರದ ಹಲವು ವಾರ್ಡ್‌ಗಳಲ್ಲಿ ಆಟೋ ಟಿಪ್ಪರ್‌ಗಳ ಮೂಲಕ ಮನೆ ಮನೆಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಸಂಗ್ರಹಿಸಿದ ಕಸವನ್ನು ಹುಬ್ಬಳ್ಳಿಯಲ್ಲಿ ಕಾರವಾರ ರಸ್ತೆಯಲ್ಲಿನ ಕಸದಮಡ್ಡಿ ಹಾಗೂ ಧಾರವಾಡದ ಕೋಳಿಕೆರೆ ದಡದ ಕಸಮಡ್ಡಿಯಲ್ಲಿ ಸುರಿಯಲಾಗುತ್ತಿದೆ.
ಏನಿದು ಕಾಂಪ್ಯಾಕ್ಟರ್ ಕಂಟೇನರ್?: ಕಸವನ್ನು ಕಾಂಪ್ಯಾಕ್ಟ್ ಮಾಡುವುದಲ್ಲದೇ ದೊಡ್ಡ ಪ್ರಮಾಣದ ಕಸವನ್ನು ಸಂಗ್ರಹಿಸಿಕೊಳ್ಳುವುದೇ ಕಾಂಪ್ಯಾಕ್ಟರ್ ಕಂಟೇನರ್. ಕಾಂಪ್ಯಾಕ್ಟರ್ ಕಂಟೇನರ್ ಕಾರ್ಯ ಆರಂಭಗೊಂಡ ನಂತರ ಕಸವನ್ನು ಹಸಿ ಹಾಗೂ ಒಣ ಕಸವನ್ನಾಗಿ ಪ್ರತ್ಯೇಕಿಸಿಯೇ ಸಂಗ್ರಹಿಸಿ ಅದನ್ನು ಆಟೋ ಟಿಪ್ಪರ್‌ಗಳ ಮೂಲಕ ಕಾಂಪ್ಯಾಕ್ಟರ್ ಕಂಟೇನರ್‌ಗಳಿಗೆ ಸುರಿಯಲಾಗುತ್ತದೆ. ಕಂಟೇನರ್‌ಗಳು ತುಂಬಿದ ನಂತರ ಅವುಗಳನ್ನು ಸಾಗಿಸಲಾಗುತ್ತದೆ.
ಇದರಿಂದ ಸಮಯ ಹಾಗೂ ಇಂಧನ ಉಳಿತಾಯವಾಗುತ್ತದೆ. ಪ್ರತಿ 5ರಿಂದ 10 ವಾರ್ಡ್‌ಗಳಿಗೊಂದು ಕಾಂಪ್ಯಾಕ್ಟರ್ ಕಂಟೇನರ್ ಸ್ಟೇಷನ್ ಮಾಡಲಾಗುತ್ತದೆ. ಅಲ್ಲಿ ಒಣಕಸ ಹಾಗೂ ಹಸಿ ಕಸ ಸಂಗ್ರಹಿಸುವ ಪ್ರತ್ಯೇಕ ಕಂಟೇನರ್‌ಗಳನ್ನು ಅಳವಡಿಸಲಾಗುತ್ತದೆ. ಕಂಟೇನರ್‌ನಲ್ಲಿ ಹಾಕಿದ ಕಸವನ್ನು ಒತ್ತಿ ಕಾಂಪ್ಯಾಕ್ಟ್ ಮಾಡಲಾಗುತ್ತದೆ. ಇದನ್ನು ಕಂಟೇನರ್ ಹೊರುವ ಹುಕ್ ಲೋಡರ್ ವಾಹನದ ಮೂಲಕ ಸಾಗಿಸಲಾಗುತ್ತದೆ. ಸ್ಟೇಶನ್‌ಗಳ ನಿರ್ವಹಣೆಗೆ ಸಿಬ್ಬಂದಿ ನಿಯೋಜಿಸಲಾಗುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳು ಕಾಂಪ್ಯಾಕ್ಟರ್ ಕಂಟೇನರ್ ಸ್ಟೇಶನ್‌ಗಳಿಗೆ ಕಸ ಪ್ರತ್ಯೇಕಿಸಿ ತಂದು ಹಾಕಬಹುದಾಗಿದೆ.
ಪ್ರತ್ಯೇಕಿಸಿದ ಕಸವನ್ನು ಕಾರವಾರ ರಸ್ತೆಯ ಕಸ ಸಂಗ್ರಹ ಜಾಗದಲ್ಲಿ ಸುರಿಯಲಾಗುತ್ತದೆ. ಒಣ ಕಸವನ್ನು ಬೇಲ್‌ಗಳನ್ನಾಗಿ ಮಾಡಿ ಪುನರ್‌ಬಳಕೆ ಘಟಕಗಳಿಗೆ ಕಳಿಸಿದರೆ, ಹಸಿ ಕಸವನ್ನು ಸಾವಯವ ಗೊಬ್ಬರ ತಯಾರಿಕೆಗೆ ಬಳಸಲಾಗುತ್ತದೆ. ಕಾಂಪ್ಯಾಕ್ಟರ್ ಕಂಟೇನರ್‌ನಿಂದ ಸಮಯ ಹಾಗೂ ಇಂಧನ ಉಳಿತಾಯವಾಗುತ್ತದೆ. ಆಟೋ ಟಿಪ್ಪರ್ ಗಳು ಕೇವಲ ಅರ್ಧ ಗಂಟೆಯಲ್ಲಿ ಕಾಂಪ್ಯಾಕ್ಟರ್ ಕಂಟೇನರ್‌ಗಳಿಗೆ ಸುರಿದು ಮತ್ತೆ ಸೇವೆಗೆ ಸಜ್ಜಾಗಬಹುದಾಗಿದೆ.
ನಾಗರಿಕರು ಕಸವನ್ನು ಮನೆಯಲ್ಲಿಯೇ ಹಸಿ, ಒಣ ಕಸವನ್ನಾಗಿ ಬೇರ್ಪಡಿಸಿ ಕಸ ಸಂಗ್ರಹಕ್ಕೆ ಬರುವ ಆಟೋ ಟಿಪ್ಪರ್‌ಗಳಿಗೆ ಹಾಕಿದರೆ ಸುಲಭವಾಗಿ ಕಾಂಪ್ಯಾಕ್ಟರ್‌ಗೆ ಹಾಕಲು ಅನುಕೂಲವಾಗುತ್ತದೆ. ನಾಗರಿಕರು ಸಹಕಾರ ನೀಡಿದರೆ ಯೋಜನೆ ಯಶಸ್ವಿಗೊಳ್ಳಲು ಸಾಧ್ಯವಾಗುತ್ತದೆ.
ಸಮರ್ಪಕ ತ್ಯಾಜ್ಯ ನಿರ್ವಹಣೆ ಉದ್ದೇಶದಿಂದ ಕಾಂಪ್ಯಾಕ್ಟರ್ ಕಂಟೇನರ್ ಗಳನ್ನು ಅವಳಿ ನಗರದ 6 ಕಡೆ ಸ್ಟೇಷನ್‌ಗಳನ್ನು ಮಾಡಿ ಕಂಟೇನರ್‌ಗಳನ್ನು ಅಳವಡಿಸಲಾಗುತ್ತಿದೆ. ಪ್ರತಿ ಸ್ಟೇಷನ್‌ನಲ್ಲಿ 2 ಒಣ ಕಸ ಹಾಗೂ 2 ಹಸಿ ಕಸ ಸಂಗ್ರಹಿಸುವ ಕಾಂಪ್ಯಾಕ್ಟರ್ ಕಂಟೇನರ್ ಅಳವಡಿಸಲಾಗುತ್ತದೆ. ಅಕ್ಟೋಬರ್ ತಿಂಗಳಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸಲು ಟಿಪ್ಪರ್‌ಗಳು ಬರಲಿದ್ದು, ನವೆಂಬರ್ ತಿಂಗಳಲ್ಲಿ ಕಸ ವಿಲೇವಾರಿ ಕುರಿತು ಜನಜಾಗೃತಿ ನಡೆಸಲಾಗುವುದು. ನಂತರ ಡಿಸೆಂಬರ್‌ನಲ್ಲಿ ಕಾಂಪ್ಯಾಕ್ಟರ್ ಕಂಟೇನರ್ ಕಸ ಸಂಗ್ರಹ ಕಾರ್ಯ ಆರಂಭವಾಗಲಿದೆ.
. ನಯನಾ,
ಮಹಾನಗರ ಪಾಲಿಕೆ ಪರಿಸರ ಅಭಿಯಂತೆ
. ವಿಶ್ವನಾಥ ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.