ಚೋರಾಡಿ-ಹಾಲಾಡಿ ರಸ್ತೆ ಸಂಪರ್ಕ ಕಡಿತದ ಭೀತಿ: ಆತಂಕದಲ್ಲಿ ಗ್ರಾಮಸ್ಥರು
Team Udayavani, Sep 28, 2018, 6:00 AM IST
ಹಾಲಾಡಿ: ಸೂಕ್ತ ಸಾರಿಗೆ ಸೌಕರ್ಯವಿಲ್ಲದೆ ಸಮಸ್ಯೆ ಎದುರಿಸುತ್ತಿರುವ ಚೋರಾಡಿ ಗ್ರಾಮಸ್ಥರಿಗೆ ಈಗಿರುವ ಸಂಪರ್ಕ ತಪ್ಪುವ ಭೀತಿ ಎದುರಾಗಿದೆ. ಹಾಲಾಡಿಗೆ ಸಂಪರ್ಕ ಕಲ್ಪಿಸುವ ಮುದೂರಿ ತಿರುವಿನಲ್ಲಿ ರಸ್ತೆ ಬದಿಯಲ್ಲಿ ಕುಸಿದಿದ್ದು, ಆತಂಕಕ್ಕೆ ಕಾರಣವಾಗಿದೆ.
ಹಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಚೋರಾಡಿಗೆ ಉತ್ತಮವಾದ ಡಾಮರು ರಸ್ತೆಯಿದ್ದರೂ ಈ ವರೆಗೆ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ಅದರೊಂದಿಗೆ ಮುದೂರಿ ತಿರುವಿನಲ್ಲಿ ರಸ್ತೆಯ ಬದಿ ಜುಲೈ- ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಗೆ ಕುಸಿದಿದೆ. ಈಗ ಮಳೆ ಕಡಿಮೆಯಿದ್ದು, ಇದನ್ನು ಕೂಡಲೇ ದುರಸ್ತಿ ಪಡಿಸದಿದ್ದರೆ ಮತ್ತಷ್ಟು ಕುಸಿಯುವುದಲ್ಲದೆ, ಸಂಪರ್ಕವೇ ಕಡಿತಗೊಳ್ಳುವ ಸಂಭವವಿದೆ. ಹಾಲಾಡಿಯಿಂದ ಚೋರಾಡಿ ಮೂಲಕವಾಗಿ ವಂಡಾರುಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಸಾಗಿದರೆ, ಚೇರ್ಕಿ, ಮುದೂರಿ, ಬಾಬಿನಾಡಿ, ಗೋರಾಜೆ, ಕಾಸಾಡಿ ಮೊದಲಾದ ಪ್ರದೇಶಗಳಿಗೂ ಸಂಚರಿಸಬಹುದು.
ಅಪಾಯಕಾರಿ ತಿರುವು
ಮುದೂರಿಯ ಈ ತಿರುವು ಅಪಾಯಕಾರಿಯಾಗಿದೆ. ಚೋರಾಡಿಯ ಜನರಿಗೆ ಕುಂದಾಪುರ, ಉಡುಪಿ, ಬೈಂದೂರು, ಆಗುಂಬೆ, ಸಾಗರ ಕಡೆಗೆ ತೆರಳಬೇಕಾದರೆ ಹಾಲಾಡಿ ಮಾರ್ಗವಾಗಿಯೇ ಹೋಗಬೇಕು. ಆದರೆ ಮುದೂರಿನಲ್ಲಿ ರಸ್ತೆ ಕುಸಿದಿರುವುದರಿಂದ ಸಮಸ್ಯೆ ಎದುರಾಗಿದ್ದು, ಕೂಡಲೇ ಸರಿಪಡಿಸದಿದ್ದರೆ, ಮತ್ತಷ್ಟು ಕುಸಿಯುವ ಸಾಧ್ಯತೆಯೂ ಇದ್ದು, ಸಂಚಾರ ವ್ಯವಸ್ಥೆಯೇ ಕಡಿತಗೊಳ್ಳುವ ಆತಂಕ ಈ ಭಾಗದ ಜನರದ್ದು.
ಎಚ್ಚರಿಕೆ ಫಲಕ ಅಳವಡಿಕೆ
ವಾಹನ ಸವಾರರು ಜಾಗರೂಕತೆಯಿಂದ ಸಂಚರಿಸಲು “ಅಪಾಯ – ರಸ್ತೆ ಬದಿ ಕುಸಿದಿದೆ’ ಎನ್ನುವ ಎಚ್ಚರಿಕೆ ಫಲಕಗಳನ್ನು ಎರಡೂ ಬದಿಯಲ್ಲಿಯೂ ಹಾಕಲಾಗಿದೆ.
ಸಂಪರ್ಕ ರಸ್ತೆ
ಹಾಲಾಡಿಯಿಂದ ಮಂದಾರ್ತಿಗೂ ಸಂಪರ್ಕ ಕಲ್ಪಿಸುವ ಹತ್ತಿರದ ಮಾರ್ಗ ಇದಾಗಿದೆ. ಈ ಮಾರ್ಗವಾಗಿ ಹಾಲಾಡಿಯಿಂದ ಚೋರಾಡಿಗೆ 6 ಕಿ.ಮೀ. ಆದರೆ, ವಂಡಾರಿಗೆ 7 ಕಿ.ಮೀ. ಇದ್ದರೆ, ಮಂದಾರ್ತಿಗೆ 15 ಕಿ.ಮೀ. ದೂರವಾಗಲಿದೆ. ಅದಲ್ಲದೆ ಉಡುಪಿ ಹಾಗೂ ಕುಂದಾಪುರ ತಾಲೂಕುಗಳೆರಡನ್ನು ಬೆಸೆಯುವ ಒಂದು ಮಾರ್ಗವು ಇದಾಗಿದೆ.
ಹೆಚ್ಚುವರಿ ಅನುದಾನಕ್ಕೆ ಬೇಡಿಕೆ
ಜಿ.ಪಂ.ನಿಂದ ಬಂದ 3 ಲಕ್ಷ ರೂ. ಅನ್ನು ಈಗಾಗಲೇ ಹಾಲಾಡಿ ಗ್ರಾ.ಪಂ.ಗೆ ನೀಡಿದ್ದು, ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ. ಕಡಿಮೆ ಅನುದಾನ ಇರುವುದರಿಂದ ಈ ರಸ್ತೆ ದುರಸ್ತಿಗೆ ಶಾಸಕರಿಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದು, ಅವರು ಮುಖ್ಯಮಂತ್ರಿ ನಿಧಿಯಿಂದ ಒದಗಿಸಲಾಗುವುದು ತಿಳಿಸಿದ್ದಾರೆ.
– ಸುಪ್ರೀತಾ ಉದಯ ಕುಲಾಲ್, ಜಿ.ಪಂ. ಸದಸ್ಯರು
ದುರಸ್ತಿ ಮಾಡಲಿ
ಇದು ಜಿ.ಪಂ. ರಸ್ತೆಯಾಗಿದ್ದು, ಹಾಲಾಡಿ ಗ್ರಾ.ಪಂ.ನಿಂದ ಈಗಾಗಲೇ ಈ ರಸ್ತೆಯ ದುರಸ್ತಿಗೆ ನಿರ್ಣಯ ಮಾಡಿ ಕಳುಹಿಸಲಾಗಿದೆ. ಶಾಸಕರ ಗಮನಕ್ಕೂ ಬಂದಿದೆ. ಈಗಾಗಲೇ ಘನ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ರಸ್ತೆ ಕಡಿತಗೊಂಡರೆ ಈ ಮಾರ್ಗದಲ್ಲಿ ನಿತ್ಯ ಸಂಚರಿಸುವ ಸಾವಿರಾರು ಮಂದಿಗೆ ತೊಂದರೆಯಾಗಲಿದೆ. ಕೂಡಲೇ ದುರಸ್ತಿ ಮಾಡಲಿ.
– ಅಶೋಕ್ ಶೆಟ್ಟಿ ಚೋರಾಡಿ,ಸ್ಥಳೀಯ ಗ್ರಾ.ಪಂ. ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.