ಅ.1- ನ.15: ಹಾಲಾಡಿ -ಕೋಟೇಶ್ವರ ರಸ್ತೆ ಸಂಚಾರ ನಿರ್ಬಂಧ
Team Udayavani, Sep 28, 2018, 6:00 AM IST
ಕುಂದಾಪುರ: ಕೋಟೇಶ್ವರದಿಂದ ಸೋಮೇಶ್ವರಕ್ಕೆ ಸಂಚರಿಸುವ (ಹಾಲಾಡಿ- ಕೋಟೇಶ್ವರ ರಸ್ತೆ) ರಸ್ತೆಯ ವಿಸ್ತರಣೆ, ಕಾಂಕ್ರೀಟಿಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಸಲುವಾಗಿ ಅ. 1 ರಿಂದ ನ. 15ರ ವರೆಗೆ ಒಟ್ಟು 45 ದಿನಗಳ ಕಾಲ ಕೋಟೇಶ್ವರದಿಂದ ಪ್ರಥಮ ದರ್ಜೆ ಕಾಲೇಜಿನಿಂದ ಸ್ವಲ್ಪ ಮುಂದಿನವರೆಗಿನ ಜಿಲ್ಲಾ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿ ಉಡುಪಿ ಡಿಸಿ ಆದೇಶ ಹೊರಡಿಸಿದ್ದಾರೆ.
ಬದಲಿ ರಸ್ತೆಗಳು
ಕುಂದಾಪುರ ಹಾಗೂ ಉಡುಪಿ ಕಡೆ ಯಿಂದ ಹಾಲಾಡಿ ಕಡೆಗೆ ಹೋಗುವ ಬಸ್‌ಗಳು ಹಾಗೂ ಇತರೆ ವಾಹನಗಳು ಹಳೆ ಗೋಪಾಡಿ ಪಂ. (ಹೂವಿನಕೆರೆ ಸ್ವಾಗತ ಗೋಪುರ) ಮೂಲಕ ಬೀಜಾಡಿ- ವಕ್ವಾಡಿ- ಕಾಳಾವರ ರಸ್ತೆಯಲ್ಲಿ ಸಂಚರಿಸಬಹುದು.ಗುರುಕುಲ ಶಾಲೆಯ ಬಳಿ ಎರಡು ರಸ್ತೆಗಳ ಪೈಕಿ ರಸ್ತೆಯ ಬಲಕ್ಕೆ ಘನ ವಾಹನಗಳು ಕಾಳಾವರ ಬಸ್ ನಿಲ್ದಾಣ ಬಳಿಯಿಂದ ಕೋಟೇಶ್ವರ- ಹಾಲಾಡಿ-ಸೋಮೇಶ್ವರ ರಸ್ತೆಗೆ ಸಂಪರ್ಕಿಸಬಹುದು. ಅಲ್ಲದೇ ಬೀಜಾಡಿ- ವಕ್ವಾಡಿ- ಕಾಳಾವರ ಆಗಿ ವಕ್ವಾಡಿ ರಸ್ತೆಯಲ್ಲಿ ನೇರವಾಗಿ ಬಂದು ಚಾರುಕೊಟ್ಟಿಗೆಯಿಂದ ಸಂಚರಿಸಿದರೆ ಕೋಟೇಶ್ವರ- ಹಾಲಾಡಿ-ಸೋಮೇಶ್ವರ ರಸ್ತೆ ಸಂಪರ್ಕಿಸುತ್ತದೆ. ಈ ರಸ್ತೆಯು ತೆಕ್ಕಟ್ಟೆ, ಕೆದೂರು ಕಡೆಗೆ ಹೋಗುವ ವಾಹನಗಳಿಗೆ ಅನುಕೂಲವಾಗಲಿದೆ.
ಬಸ್ರೂರು ಮೂರು ಕೈ ಜಂಕ್ಷನ್ ರಾ.ಹೆ.66 ರಸ್ತೆಯಲ್ಲಿ ಪೂರ್ವಕ್ಕೆ ಚಲಿಸಿ, ಕೋಣಿ, ಬಸೂÅರು, ಬಿ.ಎಚ್. ಕ್ರಾಸ್ ಮಾರ್ಗವಾಗಿ ಜಪ್ತಿ ಮೂಲಕ ಹುಣ್ಸೆಮಕ್ಕಿಯಾಗಿ ಕೋಟೇಶ್ವರ- ಹಾಲಾಡಿ- ಸೋಮೇಶ್ವರ ರಸ್ತೆ ಸಂಪರ್ಕಿಸುತ್ತದೆ. ಇದು ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬೈಂದೂರು ಕಡೆಯಿಂದ ಹುಣ್ಸೆಮಕ್ಕಿ, ಬಿದ್ಕಲ್‌ಕಟ್ಟೆ, ಹಾಲಾಡಿ- ಸೋಮೇಶ್ವರ ಕಡೆಗೆ ತೆರಳುವ ಎಲ್ಲ ವಾಹನಗಳಿಗೆ ಸೂಕ್ತ ಮಾರ್ಗವಾಗಿದೆ.
ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬೈಂದೂರು ಕಡೆಯಿಂದ ಹುಣ್ಸೆಮಕ್ಕಿ, ಬಿದ್ಕಲ್‌ಕಟ್ಟೆ, ಹಾಲಾಡಿ-ಸೋಮೆಶ್ವರ ಕಡೆಗೆ ಹೋಗುವ ಲಘು ವಾಹನಗಳಿಗೆ ಕೋಣಿ ಶಾಲೆ ಹಾಗೂ ಎಚ್.ಎಂ.ಟಿ. ರಸ್ತೆ ಮೂಲಕ ಕಟೆRರೆ ಕಡೆಗೆ ಕೋಟೇಶ್ವರ- ಹಾಲಾಡಿ-ಸೋಮೇಶ್ವರ ರಸ್ತೆ ಮೂಲಕ ಸಂಚರಿಸಬಹುದು.
ಈ ಎಲ್ಲ ಬದಲಿ ಮಾರ್ಗಗಳು ಹಾಲಾಡಿ ಕಡೆಯಿಂದ ಉಡುಪಿ ಅಥವಾ ಕುಂದಾಪುರ ಕಡೆಗೆ ಚಲಿಸುವ ವಾಹನಗಳಿಗೆ ಸೂಕ್ತ ಮಾರ್ಗಗಳಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
610 ಮೀಟರ್ ಕಾಂಕ್ರೀಟೀಕರಣ
ಕೋಟೇಶ್ವರದ ಮೇಲ್ಸೆತುವೆ ಬಳಿಯಿಂದ ಸುಮಾರು 200 ವರೆಗೆ ಅಂದರೆ ಸೇತುವೆವರೆಗೆ ಈಗಾಗಲೇ 200 ಮೀಟರ್ ಕಾಂಕ್ರೀಟಿಕರಣವಾಗಿದ್ದು, ಈಗ ಅಲ್ಲಿಂದ ಮುಂದಕ್ಕೆ ಕೋಟೇಶ್ವರದ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನಿಂದ ಸ್ವಲ್ಪ ಮುಂದಿನವರೆಗೆ ಸುಮಾರು 2 ಕೋ.ರೂ. ವೆಚ್ಚದಲ್ಲಿ ಸುಮಾರು 610 ಮೀಟರ್ ಕಾಂಕ್ರೀಟಿಕರಣ, ಅಗಲೀಕರಣ, ಚರಂಡಿ ಕಾಮಗಾರಿ ನಡೆಯಲಿದೆ ಎಂದು ಪಿಡಬ್ಲೂÂಡಿ ಇಲಾಖೆಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.