ಕೂಡ್ಲು ಗ್ರಾಮ ಕಚೇರಿಯಲ್ಲಿ ನೌಕರರ ಕೊರತೆ; ಜನರಿಗೆ ಸಂಕಷ್ಟ


Team Udayavani, Sep 28, 2018, 6:00 AM IST

27ksde4.jpg

ಕನಿಷ್ಠ 9 ಮಂದಿ ಅಧಿಕಾರಿಗಳು ಇರಬೇಕಾಗಿದ್ದ ಇಲ್ಲಿ ಈಗ ಇರುವುದು ಕೇವಲ ಮೂರು ಮಂದಿ ಮಾತ್ರ. ರೆವೆನ್ಯೂ ರಿಕವರಿ ನೋಟಿಸ್‌, ಕಟ್ಟಡ ತೆರಿಗೆ, ಆಡಂಬರ ತೆರಿಗೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ , ರೀ ಸರ್ವೇ, ಆರ್‌ಡಿಒ ಕಚೇರಿ ೆಗಳಿಂದ ಅಸಂಖ್ಯಾಕ ನೋಟಿಸುಗಳು ಈ ಗ್ರಾಮ ಕಚೇರಿಗೆ ಬರುತ್ತಿರುತ್ತವೆ. ಆದರೆ ಇದರ ವಿಳಾಸ ಪತ್ತೆಹಚ್ಚಿ  ಸಂಬಂಧಪಟ್ಟವರಿಗೆ ನೋಟೀಸು ರೂಪದಲ್ಲಿ ನೀಡಲು ಕೂಡ ಈಗ ಇಲ್ಲಿ  ಅಗತ್ಯದ ಸಿಬಂದಿಯಿಲ್ಲ.

ಕಾಸರಗೋಡು: ಕಾಸರಗೋಡು ನಗರ ಸಮೀಪದ ಎರಿಯಾಲ್‌ನಲ್ಲಿರುವ ಕೂಡ್ಲು ಗ್ರೂಪ್‌ ವಿಲ್ಲೇಜ್‌ ಆಫೀಸ್‌ (ಗ್ರಾಮ ಕಚೇರಿ) ವಿಭಜಿಸಬೇಕೆಂದು ಇಲ್ಲಿನ ಜನರು ಕಳೆದ ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಜತೆಗೆ ಈ ಗ್ರಾಮ ಕಚೇರಿಯಲ್ಲಿ  ನೌಕರರ ಸಂಖ್ಯೆಯೂ ತೀರಾ ಕಡಿಮೆಯಿದೆ. ಅವಶ್ಯಕತೆಗೆ ಬೇಕಾದಷ್ಟು ನೌಕರರನ್ನು  ನೇಮಕಾತಿ ಮಾಡದಿರುವುದರಿಂದ ವಿವಿಧ ಅಗತ್ಯಗಳಿಗೆ ಇಲ್ಲಿಗೆ ಆಗಮಿಸುವ ಜನರು ತೀವ್ರ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಇದು ವ್ಯಾಪಕ ಪ್ರತಿಭಟನೆಗೂ ಕಾರಣವಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಅತೀ ಹೆಚ್ಚು ಮನೆಗಳು ಮತ್ತು  ಕಟ್ಟಡಗಳು ಇರುವ ವಿಲ್ಲೇಜ್‌ ಎಂದು ಕೇರಳ ರಾಜ್ಯ ಆಡಳಿತ ಪರಿಷ್ಕರಣೆ ಸಮಿತಿಯು ಪತ್ತೆಹಚ್ಚಿದ ಕೂಡ್ಲು  ಗ್ರಾಮವನ್ನು  ಜಿಲ್ಲಾ  ಆಡಳಿತ ವರ್ಗವು ನಿರಂತರವಾಗಿ ಕಡೆಗಣಿಸುತ್ತಿದೆ. ಮೊಗ್ರಾಲ್‌ ಪುತ್ತೂರು ಪಂಚಾಯತ್‌ನ ಎಲ್ಲ  ಮತ್ತು  ಮಧೂರು ಪಂಚಾಯತ್‌ನ ಬಹುತೇಕ ಪ್ರದೇಶಗಳು ಒಳಗೊಂಡ ಈ ಗ್ರಾಮ ಕಚೇರಿಯಲ್ಲಿ ನೋಟೀಸು ಕೂಡ ನೀಡಲು ಗ್ರಾಮಾಕಾರಿಗಳೇ ಹೋಗಬೇಕಾಗುತ್ತಿರುವುದು ವಿಪರ್ಯಾಸ.

ಕಳೆದ ಒಂದು ವರ್ಷದಿಂದ ಇಲ್ಲಿನ ವಿಲೇಜ್‌ ಫೀಲ್ಡ್‌  ಅಸಿಸ್ಟೆಂಟ್‌ ಹುದ್ದೆ  ಖಾಲಿಯಾಗಿ ಉಳಿದಿದೆ. ಓರ್ವರು 2017 ಆಗಸ್ಟ್‌ನಿಂದಲೂ ಇನ್ನೋರ್ವರು 2018ರಿಂದಲೂ ಇತರ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ. ಆದರೆ ಇದಕ್ಕೆ ಬದಲಾಗಿ ಇತರ ನೌಕರರನ್ನು ನೇಮಕಾತಿ ಮಾಡಿಲ್ಲ.  ಕಾಸರಗೋಡು ಶಾಸಕರು ಹಾಗೂ ಬಿಜೆಪಿ ಸಹಿತ ವಿವಿಧ ರಾಜಕೀಯ ಪಕ್ಷಗಳ ನೇತಾರರು ಮತ್ತಿತರರು ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್‌ ಸಹಿತ ಹಲವಾರು ಮಂದಿ ಸಚಿವರು, ಅಧಿಕಾರಿಗಳಿಗೆ ಕೂಡ್ಲು  ಗ್ರಾಮ ಕಚೇರಿಯನ್ನು ವಿಭಜಿಸಬೇಕು ಅಥವಾ ಹೆಚ್ಚಿನ ನೌಕರರನ್ನು  ನೇಮಕಾತಿ ಮಾಡಬೇಕು ಎಂದು ನಿರಂತರವಾಗಿ ಒತ್ತಾಯಿಸುವ ಮಧ್ಯೆ ಈಗ ಇರುವ ಹುದ್ದೆಗಳನ್ನು  ಕೂಡ ಭರ್ತಿಗೊಳಿಸಲು ಸಂಬಂಧಪಟ್ಟ  ಅಧಿಕಾರಿಗಳು ಮುಂದಾಗುತ್ತಿಲ್ಲವೆಂಬ ಆರೋಪ ಕೇಳಿಬಂದಿದೆ.

ವಿವಿಧ ಅರ್ಜಿಗಳಿಗಾಗಿ ಇಲ್ಲಿಗೆ ತಲುಪುವ ಜನರು ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಸ್ಥಿತಿಯುಂಟಾಗಿದೆ. ಮೊಗ್ರಾಲ್‌ ಪುತ್ತೂರು ಮತ್ತು ಶಿರಿಬಾಗಿಲುಗಳಲ್ಲಿ  ರೀಸರ್ವೇ ಕುರಿತಾದ ದೂರುಗಳನ್ನು  ಇಲ್ಲಿನ ವಿಲ್ಲೇಜ್‌ ಆಫೀಸರ್‌ಗೆ ವಹಿಸಿಕೊಟ್ಟ  ಬಳಿಕ ಇಲ್ಲಿರುವ ನೌಕರರ ಸಂಕಷ್ಟ  ಇಮ್ಮಡಿಯಾಗಿದೆ.
 
ಈಗ ಇರುವ 3 ಮಂದಿ ನೌಕರರು ರಾತ್ರಿ ಹಗಲು ಕಷ್ಟಪಟ್ಟು  ಸರಕಾರಿ ವಿಷಯಗಳಿಗೆ ಮತ್ತು  ಜನರ ಸಮಸ್ಯೆಗಳಿಗೆ ಒಂದು ಹಂತದವರೆಗೆ ಪರಿಹಾರ ಕಲ್ಪಿಸುತ್ತಿದ್ದಾರೆ.

ಇಷ್ಟೆಲ್ಲಾ ಸಂಕಷ್ಟಗಳ ಮಧ್ಯೆಯೂ 2018ನೇ ಜನವರಿಯಿಂದ ತೊಡಗಿ ಇದುವರೆಗೆ 12,000ದಷ್ಟು  ಸರ್ಟಿಫಿಕೇಟ್‌ಗಳನ್ನು ವಿತರಿಸಲಾಗಿದೆ. ಇಲ್ಲಿಗೆ ತಲುಪುವ ಜನರ ಸಮಸ್ಯೆಗಳಿಗೆ ಸಂಬಂಧಪಟ್ಟವರು ತುರ್ತು ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ  ಉಗ್ರ ಹೋರಾಟ ನಡೆಸಲಾಗುವುದು ಎಂದು ವಿವಿಧ ಜನಪರ ಸಂಘಟನೆಗಳು ಮುನ್ನೆಚ್ಚರಿಕೆ ನೀಡಿವೆ.

ಅಪಾರ ವಿಸ್ತೀರ್ಣದ ಭೂಪ್ರದೇಶ : ವಿದ್ಯಾನಗರದಲ್ಲಿರುವ ನಗರಸಭಾ ಕ್ರೀಡಾಂಗಣದಿಂದ ತೊಡಗಿ ಸೀತಾಂಗೋಳಿಯ ಕಿನ್‌ಫ್ರಾ ಪಾರ್ಕ್‌ ತನಕವೂ ರಾಷ್ಟ್ರೀಯ ಹೆದ್ದಾರಿಯಲ್ಲಿ  ಅಡ್ಕತ್ತಬೈಲಿನಿಂದ ತೊಡಗಿ ಮೊಗ್ರಾಲ್‌ ಸೇತುವೆ ವರೆಗೂ ಇರುವ ಪ್ರದೇಶಗಳು ಈ ಗ್ರಾಮ ಕಚೇರಿಗೆ ಒಳಪಟ್ಟಿವೆ. ಕಾಸರಗೋಡು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ  22 ಮತಗಟ್ಟೆಗಳು ಈ ಗ್ರಾಮ ಕಚೇರಿಯ ವ್ಯಾಪ್ತಿಯಲ್ಲಿ  ಸೇರಿವೆ. ಈ ಮೂಲಕ ಕೂಡ್ಲು  ಗ್ರಾಮ ಕಚೇರಿಗೆ ಅಪಾರ ಭೂಪ್ರದೇಶವು ಒಳಪಟ್ಟಿದ್ದು, ಇಲ್ಲಿನ ಅಧಿಕಾರಿಗಳು ಮತ್ತು ನೌಕರರು ಹೊರಲಾರದಷ್ಟು  ಕೆಲಸದ ಹೊರೆಯನ್ನು  ಹೊರಬೇಕಾಗುತ್ತಿದೆ. ಇದರಿಂದಾಗಿ ಯಾವುದೇ ಕೆಲಸಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಬಗ್ಗೆ  ಕಂದಾಯ ಸಚಿವರೇ ನೇರವಾಗಿ ಗಮನಿಸಿ ಸರಿಯಾದ ವ್ಯವಸ್ಥೆ  ಕಲ್ಪಿಸಬೇಕಾಗಿದೆ.

ಟಾಪ್ ನ್ಯೂಸ್

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kumbla: ಬುರ್ಖಾಧಾರಿ ಯುವಕ ಪೊಲೀಸ್‌ ವಶಕ್ಕೆ

Kumbla: ಬುರ್ಖಾಧಾರಿ ಯುವಕ ಪೊಲೀಸ್‌ ವಶಕ್ಕೆ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.