ಕುಟುಂಬಶ್ರೀಯಿಂದ 200 ಬಡ್ಸ್ ಸ್ಕೂಲ್‌ಗಳ ಆರಂಭ
Team Udayavani, Sep 28, 2018, 6:50 AM IST
ಕಾಸರಗೋಡು: ಸಾಮಾಜಿಕ ನ್ಯಾಯ ಇಲಾಖೆ ಕುಟುಂಬಶ್ರೀ ಮಿಷನ್ ಮೂಲಕ ರಾಜ್ಯದಲ್ಲಿ 200ರಷ್ಟು ಹೊಸ ಬಡ್ಸ್ ಸ್ಕೂಲ್‌ಗಳನ್ನು ಆರಂಭಿಸಲು ತೀರ್ಮಾನಿಸಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಮೇಲ್ನೋಟದಲ್ಲಿ ಬಡ್ಸ್ ಸ್ಕೂಲ್‌ಗಳು ಕಾರ್ಯವೆಸಗಲಿವೆ.
ಪಾಲಾ^ಟ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಬಡ್ಸ್ ಸ್ಕೂಲ್‌ಗಳನ್ನು ಈಗಾಗಲೇ ತೆರೆಯಲಾಗಿದೆ. ಅದನ್ನು ಶೀಘ್ರ ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಅದಕ್ಕಿರುವ ಸಿದ್ಧತೆ ಈಗ ಅಂತಿಮ ಹಂತದಲ್ಲಿದೆ. ಟ್ರಸ್ಟ್‌ಗಳು ಮತ್ತು ಸ್ವಯಂ ಸೇವಾ ಸಂಘಟನೆಗಳ ನೇತೃತ್ವದಲ್ಲಿರುವ ಸ್ಪೆಷಲ್ ಸ್ಕೂಲ್‌ಗಳಿಗೆ ಅನನುದಾನಿತ ಸ್ಥಾನ ನೀಡಲು ಈ ಹಿಂದಿನ ಯುಡಿಎಫ್ ಸರಕಾರ ತೀರ್ಮಾನಿಸಿತ್ತು. ಅದನ್ನು ಈಗಿನ ಎಡರಂಗ ಸರಕಾರ ರದ್ದುಪಡಿಸಿ ಅದರ ಬದಲು ಕುಟುಂಬಶ್ರೀ ಮೂಲಕ ಬಡ್ಸ್ ಸ್ಕೂಲ್‌ಗಳನ್ನು ಆರಂಭಿಸುವ ಹೊಸ ತೀರ್ಮಾನ ಕೈಗೊಂಡಿದೆ. ಇದಕ್ಕೆ ಅಗತ್ಯದ ಯೋಜನೆಗೆ ಆಯಾ ಜಿಲ್ಲೆಗಳ ಕುಟುಂಬಶ್ರೀ ಜಿಲ್ಲಾ ಮಿಷನ್‌ಗಳು ರೂಪು ನೀಡಿ ಮೊದಲು ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗೆ ಸಲ್ಲಿಸಬೇಕು. ಅದರ ಆಧಾರದಲ್ಲಿ ಬಡ್ಸ್ ಸ್ಕೂಲ್ ತೆರೆಯುವ ಕ್ರಮಕ್ಕೆ ಚಾಲನೆ ನೀಡಲಾಗುವುದು.
ಈ ಯೋಜನೆಯಂತೆ ಪ್ರಥಮ ಹಂತವಾಗಿ ಪ್ರತಿ ಬಡ್ಸ್ ಸ್ಕೂಲ್‌ಗೆ ಮೂಲ ಸೌಕರ್ಯ ಏರ್ಪಡಿಸಲು ಸಾಮಾಜಿಕ ನ್ಯಾಯ ಇಲಾಖೆ ತಲಾ 12.5 ಲಕ್ಷ ರೂ. ನಂತೆ ಮಂಜೂರು ಮಾಡಿದೆ. ರಾಜ್ಯ ಸರಕಾರದ ಇ-ಲಾಪ್ಸ್ ಪ್ರಕಾರ ಬಡ್ಸ್ ಸ್ಕೂಲ್‌ಗಳಿಗೆ ಈ ಹಣ ಮಂಜೂರು ಮಾಡಲಾಗಿದೆ. ಈ ಹಣ ಬಳಸಿ ಅಗತ್ಯದ ಸಾಮಗ್ರಿಗಳನ್ನು ಖರೀದಿಸಿ ಬಡ್ಸ್ ಸ್ಕೂಲ್‌ಗಳನ್ನು ಆರು ತಿಂಗಳ ತನಕ ಬಾಡಿಗೆ ಕಟ್ಟಡದಲ್ಲಿ ಆರಂಭಿಸಬೇಕು. ಬಳಿಕ ಸ್ವಂತ ಕಟ್ಟಡಕ್ಕೆ ಬದಲಾಯಿಸಬಹುದು. ವಿದ್ಯಾರ್ಥಿ ಸೌಹಾರ್ದಯುತವಾದ ಸೌಕರ್ಯಗಳನ್ನು ಇಂತಹ ಶಾಲೆಗಳಲ್ಲಿ ಏರ್ಪಡಿಸಬೇಕು. ಮಾತ್ರವಲ್ಲ ಮಕ್ಕಳ ಮನೋರಂಜನೆಗಾಗಿ ಟಿ.ವಿ., ಪ್ರೊಜೆಕ್ಟರ್ ಇತ್ಯಾದಿಗಳನ್ನು ಖರೀದಿಸಬೇಕು. ಇಂತಹ ಶಾಲೆಗಳಿಗೆ ಅಗತ್ಯದ ಅಧ್ಯಾಪಕರು, ಆಯಾ ಮತ್ತಿತರ ನೌಕರರ ನೇಮಕಾತಿ ಮತ್ತು ವೇತನ ಇತ್ಯಾದಿಗಳನ್ನು ಆಯಾ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೀಡಬೇಕು. ನೇಮಕಾತಿ ಬಗ್ಗೆ ಆಯಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ನೀಡಲಾಗಿದೆ. ಇದರಿಂದಾಗಿ ಪ್ರತೀ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಆಡಳಿತ ಪಕ್ಷ ಅನುಕೂಲಕರ ವ್ಯಕ್ತಿಗಳಿಗೆ ನೇಮಕಾತಿ ಲಭಿಸುವಂತೆ ಮಾಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.