ಫಿಫ್ಟಿ-ಫಿಫ್ಟಿ  ಐ ಲವ್‌ ಯೂ

Team Udayavani, Sep 28, 2018, 6:00 AM IST

d-23.jpg

ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ “ಐ ಲವ್‌ ಯೂ’ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದೆ. ಫ‌ಸ್ಟ್‌ಲುಕ್‌ ನೋಡಿದವರಿಗೆ ಹಳೆಯ ಉಪೇಂದ್ರ ಮತ್ತೆ ವಾಪಾಸ್‌ ಆದ ಖುಷಿ. ಅದಕ್ಕೆ ಕಾರಣ ಫ‌ಸ್ಟ್‌ಲುಕ್‌ನಲ್ಲಿರುವ ಡೈಲಾಗ್‌. ಉಪೇಂದ್ರ ಅವರ “ಎ’ ಮತ್ತು “ಉಪೇಂದ್ರ’ ಸಿನಿಮಾದ ಶೈಲಿಯಲ್ಲೇ ಚಂದ್ರು “ಐ ಲವ್‌ ಯೂ’ ಮಾಡಿದ್ದಾರೆ. ಹಾಗಾಗಿ, ಈ ಸಿನಿಮಾ ಉಪ್ಪಿ ಅಭಿಮಾನಿಗಳಿಗೆ ಸ್ವಲ್ಪ ಹೆಚ್ಚೇ ಇಷ್ಟವಾಗುತ್ತದೆ ಎಂಬ ವಿಶ್ವಾಸ ಚಂದ್ರು ಅವರದು. “ಉಪೇಂದ್ರ ಅವರ ಜೊತೆ ಈ ಹಿಂದೆ “ಬ್ರಹ್ಮ’ ಸಿನಿಮಾ ಮಾಡಿದ್ದೆ. ಆಗ ಅವರ ಜೊತೆಗೆ ಬಾಂಧವ್ಯ ಬೆಳೆಯಿತು. “ನೀನು ಯಾವತ್ತು ಬೇಕಾದರೂ ಸಿನಿಮಾ ಅನೌನ್ಸ್‌ ಮಾಡಿ, ನನ್ನ ಬಳಿ ಬರಬಹುದು’ ಎನ್ನುವ ಮಟ್ಟಕ್ಕೆ ನನಗೆ ಬೆನ್ನುತಟ್ಟಿದರು. ಅದರಂತೆ ಈ ಸಿನಿಮಾ ಮಾಡುತ್ತಿದ್ದೇನೆ. ಉಪೇಂದ್ರ ಅವರಷ್ಟು ಬುದ್ಧಿ, ಆಲೋಚನಾ ಲಹರಿ ನನಗೆ ಇಲ್ಲ. ಆದರೆ, ನನ್ನದೇ ಶೈಲಿಯಲ್ಲಿ ಒಂದು ವಿಭಿನ್ನ ಕಥೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ. ಒಂದಂತೂ ಹೇಳುತ್ತೇನೆ, ಈ ಸಿನಿಮಾ ನೋಡಿ ಹೊರಬಂದ ನಂತರ ನೀವು ಒಬ್ಬರಿಗೆ ಫೋನ್‌ ಮಾಡಿ “ಐ ಲವ್‌ ಯೂ’ ಅಂತೀರಿ’ ಎಂದು ಸಿನಿಮಾ ಬಗ್ಗೆ ಮಾತನಾಡಿದರು ಚಂದ್ರು. ಎಲ್ಲಾ ಓಕೆ ಯಾರು, ಯಾರಿಗೆ ಐ ಲವ್‌ ಯೂ ಎನ್ನಬಹುದು ಎಂಬ ಪ್ರಶ್ನೆಗೆ “ಸಿನಿಮಾ ನೋಡಿ’ ಎಂಬ ಉತ್ತರ ಚಂದ್ರು ಅವರಿಂದ ಬರುತ್ತದೆ. 

ಉಪೇಂದ್ರ ಅವರು ಕೂಡಾ ಈ ಸಿನಿಮ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಫ‌ಸ್ಟ್‌ನೋಡಿ ಖುಷಿಯಾದ ಉಪೇಂದ್ರ “ಒನ್‌ ಆಫ್ ದಿ ಬೆಸ್ಟ್‌ ಫ‌ಸ್ಟ್‌ಲುಕ್‌’ ಎಂದು ಚಂದ್ರು ಬೆನ್ನುತಟ್ಟಿದರು. ಚಿತ್ರದ ಬಗ್ಗೆ ಹೇಳುವ ಅವರು, “ಚಂದ್ರು ಹೃದಯ, ಉಪೇಂದ್ರ ಮೆದುಳು ಸೇರಿ ಈ ಸಿನಿಮಾವಾಗಿದೆ.”ಬ್ರಹ್ಮ’ ಸಮಯದಲ್ಲಿ ನೋಡಿದ ಚಂದ್ರುಗೂ “ಐ ಲವ್‌ ಯೂ’ ನಲ್ಲಿ ನೋಡುತ್ತಿರುವ ಚಂದ್ರುಗೂ ಸಾಕಷ್ಟು ವ್ಯತ್ಯಾಸವಿದೆ. ಚಂದ್ರು ತುಂಬಾ ಪ್ರಬುದ್ಧರಾಗಿದ್ದಾರೆ. ಸಿನಿಮಾವನ್ನು ತುಂಬಾನೇ ಪ್ರೀತಿಸುತ್ತಾರೆ. ಅದಕ್ಕಿಂತ ಹೆಚ್ಚಾಗಿ ಅವರಿಗೆ ಆಗಿರುವ ಅನುಭವವನ್ನು ತುಂಬಾ ಚೆನ್ನಾಗಿ ಸಿನಿಮಾ ಮಾಡುತ್ತಾರೆ. ಇದು ಕೂಡಾ ಅವರ ಅನುಭವದ ಕಥೆ ಎಂದರೆ ತಪ್ಪಲ್ಲ. ಅವರ ಭಾವನೆಗೆ ನನ್ನ ತಲೆ ಇಟ್ಟಿದ್ದಾರೆ ಅಷ್ಟೇ. 

ಉಳಿದಂತೆ ಸಂಗೀತ ನಿರ್ದೇಶಕ ಕಿರಣ್‌, ಛಾಯಾ ಗ್ರಾಹಕ ಜ್ಞಾನೇಶ್‌ ಸಿನಿಮಾ ಬಗ್ಗೆ ಮಾತನಾಡಿದರು.

ಟಾಪ್ ನ್ಯೂಸ್

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.