ಸ್ವಚ್ಛತೆಯೇ ಸೇವೆಯೆಂಬ ಮಹೋನ್ನತ ಚಿಂತನೆ


Team Udayavani, Sep 28, 2018, 6:00 AM IST

d-31.jpg

ಆರೋಗ್ಯ ಸಂರಕ್ಷಣೆ ಮತ್ತು ಶುಚಿತ್ವ ಕಾಪಾಡುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆರೋಗ್ಯ ರಕ್ಷಣೆಗಾಗಿ “ತ್ಯಾಜ್ಯಮುಕ್ತ’ ಪರಿಸರ ನಿರ್ಮಿಸುವುದೆಂದರೆ ರೋಗರುಜಿನಗಳನ್ನು ಬರದಂತೆ ತಡೆಗಟ್ಟುವುದು. ದೇವಾಲಯಗಳ ಸುತ್ತಮುತ್ತ, ಪ್ರವಾಸಿ ತಾಣಗಳಲ್ಲಿ, ಮಾರುಕಟ್ಟೆಗಳಲ್ಲಿ, ನದಿ ತಟದಲ್ಲಿ, ಬಡಾವಣೆಗಳಲ್ಲಿ, ಉತ್ಸವ -ಸಮಾರಂಭ ಜಾತ್ರೆಗಳು ನೆರವೇರುವ ಪ್ರದೇಶಗಳಲ್ಲಿ ರಾಶಿ ರಾಶಿ ಕಸಕಡ್ಡಿಯನ್ನು ನಿತ್ಯವೂ ನೋಡುತ್ತಿದ್ದೆವು.

ಕೇಂದ್ರ ಸರಕಾರದ ಬಹುಮಾನ್ಯ ಯೋಜನೆಗಳು ನಾಲ್ಕು ವರುಷಗಳ ಅವಧಿಯಲ್ಲಿ ದೇಶವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಔದ್ಯೋಗಿಕ ಕ್ಷೇತ್ರಗಳಲ್ಲಿ ಪ್ರಗತಿಯ ಹೊಸದಿಗಂತದತ್ತ ಮುನ್ನಡೆಸುತ್ತಿವೆ. ಸ್ವಾತಂತ್ರ್ಯ ಪಡೆದು 70 ವರ್ಷ ಸಂದಿದ್ದರೂ ದೇಶದ ಪ್ರಗತಿಗೆ ಅನೇಕ ವಿಘ್ನಗಳು ಅಡ್ಡಿಯಾಗುತ್ತಲೇ ಇದ್ದವು. ರಾಜಕಾರಣಿಗಳಿಂದ ಮಾತ್ರ ಆಡಳಿತ ಪಕ್ಷಗಳತ್ತ ಅಪಸ್ವರ ಕೇಳಿಸುತ್ತಿತ್ತು ಎನ್ನಲಾಗುತ್ತಿಲ್ಲ. ಜನಸಾಮಾನ್ಯರೂ ಬೇಸತ್ತು ಟೀಕಿಸುತ್ತಿದ್ದರು. ಇದನ್ನು ಗಮನದಲ್ಲಿರಿಸಿ ಮೋದಿಯವರು ತಳಸ್ತರದ ನೋವು, ಸಂಕಷ್ಟಗಳನ್ನು ಪರಿಹರಿಸಲು ಪಣ ತೊಟ್ಟಿದ್ದಾರೆ. ಯಶಸ್ವಿ ಜೀವನ ನಿರ್ವಹಣೆಗಾಗಿ ಅವರ ಕನಸಿನ ಯೋಚನೆ – ಯೋಜನೆಗಳೀಗ ಫ‌ಲಪ್ರದವಾಗುತ್ತಿವೆ. 

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿಯ ಪ್ರಯುಕ್ತ ದೇಶವನ್ನು ಶುಚಿಗೊಳಿಸುವ “ಸ್ವಚ್ಛತಾ ಹೀ ಸೇವಾ’ ಎಂಬ ಮಹತ್ವಾಕಾಂಕ್ಷಿ ಯೋಜನೆಯಿಂದಾಗಿ ಪ್ರತಿಯೋರ್ವ ಭಾರತೀಯ ನಾಗರಿಕರಿಗೂ “ದೇಶವನ್ನು ಆರೋಗ್ಯದಾಯಕವಾಗಿ ಭದ್ರಗೊಳಿಸಲು ನನ್ನ ನೆರೆಹೊರೆಯು ಶುಚಿಯಾಗಿರಬೇಕು’ ಎನ್ನುವ ಭಾವನೆ ಬರಬೇಕಿದೆ. ಆದಾಗ್ಯೂ ಮೆಚ್ಚಬೇಕಾದ ಸಂಗತಿಯೆಂದರೆ ದೇಶದ ಹಳ್ಳಿ ಹಳ್ಳಿಗಳ ಕಿರಿಯ ಪ್ರಾಥಮಿಕ ಶಾಲೆಯಿಂದಲೇ “ಸ್ವತ್ಛ ಭಾರತ ಅಭಿಯಾನ’ವು ಸ್ವಚ್ಛತೆಯ “ಜಾಗೃತಿ’ ಮೂಡಿಸಿದೆ. ವಿದೇಶೀ ಪ್ರವಾಸಿಗರು ಭಾರತವನ್ನು ಕೊಳೆಗೇರಿ ಎಂದು ಮೂದಲಿಸುತ್ತಿದ್ದ ಕಾಲವೊಂದಿತ್ತು. ಇದೀಗ ಅದೇ ಪ್ರವಾಸಿಗರು ಭಾರತ ಶೋಭಿಸುತ್ತಿದೆ ಎಂದು ಹೊಗಳುವಂತಾಗಬೇಕು.

ನರೇಂದ್ರ ಮೋದಿ ಸರಕಾರ 2014ರಿಂದಲೂ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಂದು ಯೋಜನೆ ಅಥವಾ ಕಾರ್ಯಕ್ರಮಕ್ಕೂ ಸಮಾನವಾದ ಪರ-ವಿರೋಧದ ಧ್ವನಿಗಳು ಎದುರಾದದ್ದನ್ನೂ ನೋಡಿದ್ದೇವೆ. ಆದರೆ ಗಮನಿಸಬೇಕಾದ ಸಂಗತಿಯೆಂದರೆ ಈ ಎಲ್ಲಾ ಯೋಜನೆಗಳಿಗೂ ಜನರು ಸ್ಪಂದಿಸಿದ್ದಾರೆ ಎನ್ನುವುದು. ಈಗ ಭಾರತೀಯರೆಲ್ಲ “ಸ್ವಚ್ಛತಾ ಹೀ ಸೇವಾ’ ಕೈಂಕರ್ಯದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ. ದೇಶದ ಉದ್ದಗಲದ ಎಲ್ಲ ಸಂಘಟನೆಗಳೂ ದೇಶವನ್ನು ಶುಭ್ರಗೊಳಿಸಲು ವಿವಿಧ ರೀತಿಯಲ್ಲಿ ಸಂಘಟಿತರಾಗಿ “ಇದು ನಮ್ಮ ಮೂಲಭೂತ ಕರ್ತವ್ಯ’ ಎಂದೇ ಭಾವಿಸಿ ನಗರ, ಬೀದಿ, ಬಡಾವಣೆಗಳಲ್ಲಿನ ಸ್ವತ್ಛತೆಯನ್ನು ಕಾಪಾಡಲು ಕಸಪೊರಕೆ ಹಿಡಿದಿರುವುದಿದೆಯಲ್ಲ, ಇದನ್ನು ಸ್ವಾತಂತ್ರ್ಯಾನಂತರದ ಮಹತ್ವದ ಆಂದೋಲನವೆಂದೇ ಹೇಳಬಹುದು.  

ನಮ್ಮ ಕರ್ತವ್ಯ : ಆರೋಗ್ಯ ಸಂರಕ್ಷಣೆ ಮತ್ತು ಶುಚಿತ್ವ ಕಾಪಾಡುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆರೋಗ್ಯ ರಕ್ಷಣೆಗಾಗಿ “ತ್ಯಾಜ್ಯಮುಕ್ತ’ ಪರಿಸರ ನಿರ್ಮಿಸುವುದೆಂದರೆ ರೋಗರುಜಿನಗಳನ್ನು ಬರದಂತೆ ತಡೆಗಟ್ಟುವುದು. ದೇವಾಲಯಗಳ ಸುತ್ತಮುತ್ತ, ಪ್ರವಾಸಿ ತಾಣಗಳಲ್ಲಿ, ಮಾರುಕಟ್ಟೆಗಳಲ್ಲಿ, ನದಿ ತಟದಲ್ಲಿ, ಬಡಾವಣೆಗಳಲ್ಲಿ, ಉತ್ಸವ -ಸಮಾರಂಭ ಜಾತ್ರೆಗಳು ನೆರವೇರುವ ಪ್ರದೇಶಗಳಲ್ಲಿ ರಾಶಿ ರಾಶಿ ಕಸಕಡ್ಡಿಯನ್ನು ನೋಡುತ್ತಿದ್ದೆವು. ಈಗ ಸ್ವಚ್ಛ ಭಾರತದಿಂದ ಹಲವು ಪ್ರದೇಶಗಳು ಮಾಲಿನ್ಯದಿಂದ ಮುಕ್ತವಾಗಿವೆ. ಇದಕ್ಕೆ ಮುಖ್ಯ ಕಾರಣ ಸ್ವತ್ಛತೆಯ ಕುರಿತ ಜಾಗೃತಿ. ಸ್ವಚ್ಛ ಭಾರತ ಅಭಿಯಾನ ಜನರಲ್ಲಿ ನೈರ್ಮಲ್ಯ ಪ್ರಜ್ಞೆಯನ್ನು ಮೂಡಿಸಿದ್ದೇ ಇದಕ್ಕೆ ಕಾರಣ. ಸ್ವಚ್ಛ ಪರಿಸರದಲ್ಲಿ ವಾಸಿಸುವ ನಾಗರಿಕರು ಆರೋಗ್ಯವಂತರಾಗಿರುವುದನ್ನು ಗಮನಿಸಬಹುದು. ಈಗಂತೂ ಎಳೆಯ ಬಾಲಕ-ಬಾಲಕಿಯರೂ ಚಾಕಲೇಟ್‌ನ ಕಾಗದವನ್ನು ತಮ್ಮ ಚೀಲದಲ್ಲಿ ಹಾಕಿ ಮನೆಯ ಕಸದ ಬುಟ್ಟಿಗೆ ಹಾಕುವಷ್ಟು ಜಾಗೃತಿ ಮೂಡಿಸಿಕೊಂಡಿದ್ದಾರೆ. 

ಗಮನಕ್ಕೆ ಬರುತ್ತಿರುವ ಸಂಗತಿಯೆಂದರೆ ಹಿಂದಿನ ಸಮಯಕ್ಕೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯತು, ನಗರಸಭೆ, ಪಟ್ಟಣ ಪಂಚಾಯತು, ಮಹಾನಗರಪಾಲಿಕೆಗಳಲ್ಲಿ ಶುಚಿತ್ವದ ನಿರ್ವಹಣೆಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎನ್ನುವುದು. ಸರಕಾರಿ ಕಚೇರಿ, ಖಾಸಗಿ ಕಚೇರಿ, ವಾಣಿಜ್ಯ ಸಂಕೀರ್ಣಗಳಲ್ಲಿ ನೈರ್ಮಲ್ಯವನ್ನು ಕಾಣಬಹುದು. ಸಭೆ – ಸಮಾರಂಭ , ಉತ್ಸವ – ಜಾತ್ರೆ ಮುಂತಾದೆಡೆಗಳಲ್ಲಿ “ಅಲ್ಲಿ ಕಸ ಹಾಕಬೇಡಿ… ಪ್ಲಾಸ್ಟಿಕ್‌ ಬಳಸದಿರಿ…’ ಎಂದು ಶುಚಿತ್ವ ಕಾಪಾಡುವಂತೆ ಬಿನ್ನವಿಸಿಕೊಳ್ಳುತ್ತಾರೆ. ಈ ವರ್ಷ ಶ್ರವಣ ಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ಕಸವಿರದಂತೆ ಬಹಳ ಎಚ್ಚರಿಕೆ ಕಾಯ್ದುಕೊಳ್ಳಲಾಯಿತು. ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಸಾವಿರಕ್ಕೂ ಮೇಲ್ಪಟ್ಟು ಸ್ವಯಂ ಸೇವಕರಿದ್ದರು. ಜಿಲ್ಲಾಡಳಿತವೂ ತ್ಯಾಜ್ಯ ವಿಲೇವಾರಿಗಾಗಿ ವಿಶೇಷ ಗಮನಹರಿಸಿತ್ತು. ಸ್ವಚ್ಛತೆ ಕುರಿತು ಅರಿವು ಮೂಡಿಸುವ ಜಾಗೃತಿ ಜಾಥಾ ಕೂಡಾ ಶ್ರವಣಬೆಳಗೊಳ ಮತ್ತು ಸುತ್ತಮುತ್ತ ಶುಚಿತ್ವ ಕಾಪಾಡಲು ಪ್ರಾಮಾಣಿಕ ಶ್ರಮ ವಹಿಸಿತ್ತು. ಧರ್ಮಸ್ಥಳ, ಕೊಲ್ಲೂರು , ಕಟೀಲು , ಕುಕ್ಕೆ, ಉಡುಪಿ ಮತ್ತಿತರ ಪುಣ್ಯ ಕ್ಷೇತ್ರಗಳಲ್ಲಿ ಶುಚಿತ್ವಕ್ಕೆ ವಿಶೇಷ ಮುತುವರ್ಜಿ ವಹಿಲಾಗುತ್ತಿದೆ. 

ಮಹಾತ್ಮಾ ಗಾಂಧೀಜಿಯವರು ಅಹಿಂಸಾ ಪಥದಲ್ಲಿ ದೇಶದ ಎಲ್ಲ ಪ್ರದೇಶಗಳಲ್ಲಿ ಸ್ವಾತಂತ್ರ್ಯ ಚಳುವಳಿಯ ಸಂದೇಶ ಸಾರಿ, ಸ್ವಾತಂತ್ರ್ಯಕ್ಕಾಗಿ ಸ್ವದೇಶಾಭಿಮಾನ ಬೆಳೆಸಿದರು. ಅವರ ಸರಳ ಜೀವನದಲ್ಲಿ ಸ್ವಚ್ಛತೆಯ ಸಂದೇಶವೂ ಇತ್ತು. ಪ್ರಕೃತಿ ಮಲಿನಗೊಳ್ಳದಿರಲು ನಿಸರ್ಗವನ್ನು ಸಂರಕ್ಷಿಸಲೂ ಕರೆ ನೀಡಿದ್ದರು. ತಾಯಿನಾಡಿನ ಸ್ವತ್ಛತೆಗೆ ಗಾಂಧೀಜಿ ನಾಂದಿಯಾದವರು. ಈಗ ದೇಶದ ಅಭಿವೃದ್ಧಿ ಒಂದೆಡೆ ಭರದಲ್ಲಿ ಮುಂದುವರಿದರೂ ತ್ಯಾಜ್ಯ, ಮಾಲಿನ್ಯ ಮಾತೃಭೂಮಿಯ ನೈರ್ಮಲ್ಯತೆಯನ್ನು ಪರಿಶುದ್ಧತೆಯನ್ನು ಕಳೆದುಕೊಳ್ಳುತ್ತಿರುವುದನ್ನು ಅವಲೋಕಿಸಿದ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ವರ್ಗದ ಎಲ್ಲ ಸಂಘಟನೆಗಳ ಮುಂದಾಳುಗಳನ್ನು ಭೇಟಿ ನೀಡಿ, ಸಂಪರ್ಕಿಸಿ “ಸ್ವಚ್ಛತಾ ಹೀ ಸೇವಾ’ ಎಂಬ ಘೋಷಾವಾಕ್ಯ ಪ್ರಚುರಪಡಿಸಿದ್ದಾರೆ. ಒಮ್ಮೆ ಮನವರಿಕೆಯಾದರೆ ಮುಂದೆಯೂ ಸ್ವಚ್ಛತೆಗಾಗಿ ಆದ್ಯತೆ ಕಲ್ಪಿಸಲಾಗುತ್ತದೆ ಎಂಬುದು ಅವರ ಮಾತಿನ ಮರ್ಮ. 

“ನನ್ನ ದೇಶ, ನನ್ನೂರು ಸ್ವತ್ಛ’ ಎಂಬ ಧ್ಯೇಯದೊಂದಿಗೆ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿ ಸಮುದಾಯ ಸ್ವಯಂ ಸೇವಾ ಸಂಘದ ಸದಸ್ಯರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಹಿರಿಯ -ಕಿರಿಯರು ಜತೆಜತೆಯಾಗಿ ತ್ಯಾಜ್ಯ ಇರದಂತೆ ಎಚ್ಚರ ವಹಿಸುವುದು ಅದೇ ಅಗತ್ಯವಾಗಿದೆ. ಮಾರಕ ರೋಗಗಳು ತ್ಯಾಜ್ಯಗಳಿಂದಲೇ ಉಂಟಾಗುವುದೆಂಬುದರ ಅರಿವು ಮೂಡಿಸಬೇಕಾಗಿದೆ. ಪ್ಲಾಸ್ಟಿಕ್‌ ಬಳಕೆ ವರ್ಜಿಸಬೇಕು. ರಾಸಾಯನಿಕ ಕ್ರಿಮಿಕೀಟನಾಶಕ ಬಳಕೆ – ರಸಗೊಬ್ಬರ ಬಳಕೆ ಕಡಿಮೆ ಮಾಡಿಕೊಳ್ಳಬೇಕು. ನದಿ ನೀರು ಕಲುಷಿತ ಆಗದಂತೆ ಜಾಗೃತಿ ಇದ್ದಿರಬೇಕು. 

ಎಲ್ಲೆಡೆ ಶೌಚಾಲಯ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಘಟಕ, ತ್ಯಾಜ್ಯ ಪುನರ್‌ಬಳಕೆ ಘಟಕ, ಒಳಚರಂಡಿ ವ್ಯವಸ್ಥೆ ಅನುಷ್ಠಾನ ಆಗುವಂತೆ ನಾಗರಿಕರು, ಸರಕಾರದೊಂದಿಗೆ ಕೈ ಜೋಡಿಸಬೇಕಾಗಿದೆ. ಪ್ರಕೃತಿಯ ನೈಜ ಫ‌ಲವತ್ತತೆಯನ್ನು ಮಲಿನಗೊಳಿಸುವುದು ಅಪರಾಧವಲ್ಲವೇ? ಮಂಗಳೂರಿನ ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ 60 ವಾರಗಳಿಗೂ ಮಿಕ್ಕಿ ಆಯೋಜಿಸಿದ “ಸ್ವತ್ಛತಾ ಅಭಿಯಾನ’ ಮಹತ್ಕಾರ್ಯವನ್ನು ಮಾಡಿರುವುದು ದಾಖಲಾರ್ಹವಾದುದು. ಅನೇಕ ಹಳ್ಳಿಗಳಲ್ಲಿ, ಸ್ವತ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವುದು ಸ್ವಾಗತಾರ್ಹವಾದುದು. “ಸ್ವಚ್ಛತಾ ಹೀ ಸೇವಾ ‘ ಅಭಿಯಾನದಲ್ಲಿ ಸರ್ವರೂ ಪಾಲ್ಗೊಂಡು ತ್ಯಾಜ್ಯ ಮುಕ್ತ- ಮಾಲಿನ್ಯ ಮುಕ್ತ ಆರೋಗ್ಯದಾಯಕ ನಿರ್ಮಲ ಪರಿಸರ ಸಂರಕ್ಷಣೆಗೆ ಬಾಪೂ ಪ್ರೇರಣೆ ಫ‌ಲಿಸಲಿ.

ಡಾ| ಎಸ್‌.ಎನ್‌. ಅಮೃತ ಮಲ್ಲ 

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.