ಸರ್ಜಿಕಲ್ ದಾಳಿ : 2ನೇ ವಿಡಿಯೋ ಬಿಡುಗಡೆ
Team Udayavani, Sep 28, 2018, 8:50 AM IST
ಹೊಸದಿಲ್ಲಿ: ಪಾಕಿಸ್ಥಾನ ಗಡಿಯಲ್ಲಿ ಭಾರತ ಸರ್ಜಿಕಲ್ ದಾಳಿ ನಡೆಸಿ ಉಗ್ರರನ್ನು ಸದೆ ಬಡಿದು ಎರಡನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೆ. 28 ರಿಂದ ಮೂರು ದಿನಗಳವರೆಗೆ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಪರಾಕ್ರಮ ಪರ್ವ ಎಂಬ ಪ್ರದರ್ಶನವನ್ನು ಜೋಧಪುರ ಸೇನಾನೆಲೆಯಲ್ಲಿ ಉದ್ಘಾಟಿಸಲಿದ್ದಾರೆ. ಅಲ್ಲದೆ ಕಮಾಂಡರುಗಳ ಸಮ್ಮೇಳನದಲ್ಲೂ ಅವರು ಭಾಗವಹಿಸಲಿದ್ದಾರೆ. ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಮೂರೂ ಸೇನಾಪಡೆಯ ಮುಖ್ಯಸ್ಥರು ಹಾಜರಿರಲಿದ್ದಾರೆ.
ನೌಕಾಪಡೆಯಿಂದ 2 ದಿನ ಕಾರ್ಯಕ್ರಮ: ಸರ್ಜಿಕಲ್ ದಾಳಿಯ 2ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ನೌಕಾಪಡೆ ಸೆ. 29 ಮತ್ತು 30 ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಂಬಯಿ ಮತ್ತು ಗೋವಾದಲ್ಲಿ ಪ್ರದರ್ಶನ, ವಿಡಿಯೋ ವಾಲ್ಗಳನ್ನು ನಡೆಸಲಾಗುತ್ತದೆ. ಸರ್ಜಿಕಲ್ ದಾಳಿಯ ಬಗ್ಗೆ ಮಾಹಿತಿಯನ್ನೂ ಇಲ್ಲಿ ನೀಡಲಾಗುತ್ತದೆ.
ಮತ್ತೂಂದು ವಿಡಿಯೋ ಬಿಡುಗಡೆ: 2016ರಲ್ಲಿ ನಡೆದ ಸರ್ಜಿಕಲ್ ದಾಳಿಗೆ ಸಂಬಂಧಿಸಿದಂತೆ ಮತ್ತೂಂದು ವಿಡಿಯೋ ಈಗ ಕಾಣಿಸಿಕೊಂಡಿದೆ. ಉಗ್ರರ ಬಂಕರ್ಗಳು ಮತ್ತು ಸೇನಾ ನೆಲೆಗಳನ್ನು ನಮ್ಮ ಯೋಧರು ಧ್ವಂಸಗೊಳಿಸಿರುವ ದೃಶ್ಯ ಇದರಲ್ಲಿದೆ. ಇದನ್ನು ಡ್ರೋನ್ನಿಂದ ಚಿತ್ರೀಕರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.